ಬೆಂಗಳೂರು: ಭಿನ್ನಮತೀಯ ಶಾಸಕರ ಕ್ಷೇತ್ರಗಳಿಂದಲೇ ಗೆಲ್ಲುವ ಸವಾಲು ಹಾಕಿರುವ ಜೆಡಿಎಸ್, ಏಳೂ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿದೆ.
ಏಳು ಕ್ಷೇತ್ರಗಳ ಪೈಕಿ ನಾಗಮಂಗಲ, ಮಾಗಡಿ, ಶ್ರೀರಂಗಪಟ್ಟಣ ಹೊರತುಪಡಿಸಿದರೆ ಬೇರೆಡೆ ಹಾಲಿ ಶಾಸಕರಿಗೆ ಸ್ಪರ್ಧೆವೊಡ್ಡುವ ಸಾಮರ್ಥ್ಯ ಇರುವ ಅಭ್ಯರ್ಥಿಗಳ ಕೊರತೆಯಿದೆ.
ಚಾಮರಾಜಪೇಟೆ, ಪುಲಿಕೇಶಿ ನಗರ, ಗಂಗಾವತಿ, ಹಗರಿಬೊಮ್ಮನ ಹಳ್ಳಿಯಲ್ಲಿ ಹೊಸ ಮುಖಗಳ ತಲಾಷೆ ನಡೆದಿದ್ದು, ಅಭ್ಯರ್ಥಿಗಳ ಕೊರತೆ ಇರುವ ಕಡೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿರುವ ಮುಖಂಡರನ್ನು ಸೆಳೆಯಲು ಖುದ್ದು ಎಚ್.ಡಿ.ದೇವೇಗೌಡರೇ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ ಜಿ.ಎ.ಬಾವಾ ಅವರು ಜೆಡಿಎಸ್‌ಗೆ ಕರೆತರಲು ಮಾತುಕತೆ ನಡೆಯುತ್ತಿದೆ. ಆ ಕ್ಷೇತ್ರಕ್ಕೆ ಜಮೀರ್ ಅಹಮದ್ ಅವರಿಗೆ ಸ್ಪರ್ಧೆ ನೀಡಬಲ್ಲ ಒಕ್ಕಲಿಗ ಅಥವಾ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಹುಡುಕಾಟ ನಡೆಸಲಾಗುತ್ತಿದೆ.
ಪುಲಿಕೇಶಿನಗರದಲ್ಲಿ ಪಾಲಿಕೆಯ ಮಾಜಿ ಸದಸ್ಯೆ ಮಾರಿಮುತ್ತು ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಮಾಗಡಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಸದಸ್ಯ ಮಂಜು, ಕಳೆದ ಬಾರಿ ಬಸವನಗುಡಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ಬಾಗೇಗೌಡ ಹಾಗೂ ಜೇಡರಹಳ್ಳಿ ಕೃಷ್ಣಪ್ಪ ಅವರ ಹೆಸರು ಕೇಳಿಬರುತ್ತಿವೆ. ನಾಗಮಂಗಲದಲ್ಲಿ ಚೆಲುವ ರಾಯಸ್ವಾಮಿ ವಿರುದ್ಧ ಸುರೇಶ್ ಗೌಡ, ಶಿವರಾಮೇಗೌಡ ಅಥವಾ ಲಕ್ಷ್ಮಿ ಅಶ್ವಿನ್‌ಗೌಡ ಹೆಸರು ಪರಿಶೀಲನೆಯಲ್ಲಿದೆ. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರನ್ನು ಜೆಡಿಎಸ್‌ಗೆ ಕರೆತರುವ ಬಗ್ಗೆ ಪ್ರಯತ್ನಗಳು ನಡೆಯುತ್ತಿದ್ದು,
ರೈತ ಸಂಘದ ನಂಜುಂಡೇಗೌಡರಿಗೆ ಜೆಡಿಎಸ್ ಟಿಕೆಟ್ ಕೊಡುವ ಬಗ್ಗೆಯೂ ಮಾತುಕತೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಗಂಗಾವತಿ ಕ್ಷೇತ್ರದಲ್ಲಿ ಎಚ್.ಜಿ. ರಾಮುಲು ಅವರ ಕುಟುಂಬ ಸದಸ್ಯರೊಬ್ಬರನ್ನು ಜೆಡಿಎಸ್‌ಗೆ ಸೆಳೆದು ಟಿಕೆಟ್ ಕೊಡಲು ಪ್ರಯತ್ನ ನಡೆಸಲಾಗಿದೆ. ಹಗರಿಬೊಮ್ಮನ ಹಳ್ಳಿಯಲ್ಲಿ ಡಾ.ತಿಪ್ಪೇಸ್ವಾಮಿ ಅಥವಾ ಹನುಮಂತಪ್ಪ ಎಂಬುವರನ್ನುಭೀಮಾನಾಯಕ್ ವಿರುದ್ಧ ಕಣಕ್ಕಿಳಿಸಲು ಸಿದಟಛಿತೆ ನಡೆದಿದೆ ಎಂದು ತಿಳಿದು ಬಂದಿದೆ.