ರಾಮನಗರ: ಕೋವಿಡ್-19 ಸೋಂಕಿತರ ವಾಸಸ್ಥಳ ಸೀಲ್‌ಡೌನ್ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಗಳು ತಾರತಮ್ಯ ಮಾಡಬಾರದು. ಇಬ್ಬಗೆ ನೀತಿ ಸರಿಯಲ್ಲ. ಜಿಲ್ಲಾಧಿಕಾರಿಗಳು ತಕ್ಷಣ ಈ ಬಗ್ಗೆ ನಿಗಾವಹಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮುಂಬರುವ ಸೋಮವಾರ ಪ್ರತಿಭಟನೆ ಅನಿವಾರ್ಯ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣಗೌಡ ಹೇಳಿದರು.
ನಗರದ ಬಲಮುರಿ ಗಣಪತಿ ದೇವಾಲಯದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡು ತಮ್ಮ ಜನ್ಮದಿನ ಆಚರಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಮನಗರದ ಕುಂಬಾರ ಬೀದಿಯಲ್ಲಿ 28 ದಿನಗಳ ಸೀಲ್‌ಡೌನ್ ಜಿಲ್ಲಾಡಳಿತ ಆದೇಶ ನೀಡಿದೆ. ಆದರೆ ಕನಕ ಪುರದಲ್ಲಿ ಸೀಲ್‌ಡೌನ್ ಕೆಲವೇ ದಿನಗಳಿಗೆ ತೆರವಾಗಿದೆ. ಈ ಬಗ್ಗೆ ನಾಗರಿಕರು ತಮ್ಮ ಬಳಿ ದೂರಿದ್ದಾರೆ. ಸೀಲ್‌ಡೌನ್ ವಿಚಾರದಲ್ಲಿ ಒಂದೊಂದು ಸ್ಥಳದಲ್ಲಿ ಒಂದೊಂದು ನೀತಿ ಸರಿ ಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉದ್ದೇಶ ಪೂರ್ವಕ?: ಸೋಂಕಿತರ ಸ್ಥಳಗಳಲ್ಲಿ ಸೀಲ್ ಡೌನ್ ನಿಯಮಗಳಿಗೆ ಹೋಲಿಸಿದರೆ ರಾಮನಗರದ ಎಂ.ಜಿ. ರಸ್ತೆಯಲ್ಲಿ ಸುದೀರ್ಘ ಕಾಲ ಲಾಕ್‌ಡೌನ್ ವಿಧಿಸಿರುವುದು ಉದ್ದೇಶಪೂರ್ವಕ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಜಿಲ್ಲಾ ಧಿಕಾರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕ್ರೀಡಾಂಗಣದ ಬಗ್ಗೆಯೂ ದೂರು: ಲಾಕ್‌ಡೌನ್ ಬಹುತೇಕ ತೆರವಾಗಿದ್ದರೂ, ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗಿನ ಜಾವ ಜಾಗಿಂಗ್ ಅಥವಾ ಕ್ರೀಡೆಗಳ ಅಭ್ಯಾಸಕ್ಕೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ನಾಗರಿಕರು ದೂರಿದರು. ಈ ವಿಚಾರದ ಬಗ್ಗೆಯೂ ತಾವು ಅಧಿಕಾರಿಗಳ ಗಮನ ಸೆಳೆಯುವು ದಾಗಿ ಪ್ರತಿಕ್ರಿಯಿಸಿದರು.
ಬಲಮುರಿ ಗಣಪತಿ ದೇವಾಲ ಯದ ನಂತರ ಅವರು ನಾಗರಿಕರಿಗೆ ಉಚಿತ ಮಾಸ್ಕ್ ವಿತರಿಸಿ ದರು. ಅರ್ಚಕರಹಳ್ಳಿಯಲ್ಲಿರುವ ನಂದಗೋಕುಲ ವೃದಾಟಛಿಶ್ರಮಕ್ಕೆ ಭೇಟಿ ನೀಡಿ ತಮ್ಮ ವೈಯಕ್ತಿಕ ದೇಣಿಗೆಯ ಚೆಕ್ ವಿತರಿಸಿದರು. ಬಿಜೆಪಿ ಪ್ರಮುಖ ಪ್ರವೀಣ್‌ಗೌಡ, ಬಿ.ನಾಗೇಶ್, ರುದ್ರದೇವರು, ಪಿ.ವಿ.ಬದರಿನಾಥ್, ಪಿ.ಶಿವಾನಂದ, ಬಿಜೆಪಿ ಮಂಜು, ಚಂದ್ರಶೇಖರ ರೆಡ್ಡಿ, ರಾಮಾಂಜನಿ ಮುಂತಾದವರು ಹಾಜರಿದ್ದರು.