Advertisement
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಇಂಗ್ಲೆಂಡಿನಿಂದ ಬಂದು ಕೋವಿಡ್ ಪಾಸಿಟಿವ್ ಬಂದವರ ವಂಶವಾಹಿನಿ ಪರೀಕ್ಷೆ ಮಾಡಲಾಗಿತ್ತು. ಬೆಂಗಳೂರಿನ ತಾಯಿ ಮತ್ತು ಮಗು ಸೇರಿದಂತೆ ಮೂವರಲ್ಲಿ ರೂಪಾಂತರ ಕೊರೊನಾ ದೃಢಪಟ್ಟಿದೆ. ಅಲ್ಲದೆ, ಪಾಸಿಟಿವ್ ಬಂದ ಇಪ್ಪತ್ತಾರು ಪ್ರಯಾಣಿಕರನ್ನು ಐಸೋಲೇಷನ್ ಮಾಡಲಾಗಿದೆ. 28 ದಿನಗಳ ಕಾಲ ಐಸೋಲೇಷನ್ ಮಾಡಲಾಗುತ್ತದೆ. ಇವರ ಪ್ರಾಥಮಿಕ, ದ್ವಿತೀಯ ಸಂಪರ್ಕವನ್ನು ಪತ್ತೆ ಮಾಡಿ ಆರೋಗ್ಯ ನಿಗಾವಹಿಸಲಾಗಿದೆ. ಜತೆಗೆ ವಿಮಾನದಲ್ಲಿದ್ದ ಸಹ ಪ್ರಯಾಣಿಕರನ್ನು ಪತ್ತೆ ಮಾಡಲಾಗಿದೆ. ಅವರಿಗೂ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದರು.
Related Articles
Advertisement
ಲಾಕ್ ಡೌನ್ ಅಗತ್ಯವಿಲ್ಲ
ರೂಪಾಂತರ ಸೋಂಕು ತಡೆಯಲು ಎಲ್ಲಾ ಮುಂಜಾಗ್ರತೆ ಕೈಗೊಂಡಿದ್ದು, ಯಾವುದೇ ಸಮಸ್ಯೆಯಾಗವುದಿಲ್ಲ. ಜತೆಗೆ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ರೂಪಾಂತರ ಹಿನ್ನೆಲೆ ಯಾವುದೇ ಲಾಕ್ ಡೌನ್, ಸೀಲ್ ಡೌನ್ ಆಗತ್ಯ ಇಲ್ಲ. ಶಾಲೆ, ಕಾಲೇಜು ಆರಂಭಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.