Advertisement
ಏಕಾಏಕಿ ಹೊಸ ಯೋಜನೆ ಜಾರಿಗೆ ರಾಜ್ಯದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಸೂಕ್ತ ಎಂಬ ಬಗ್ಗೆ ಕರ್ನಾಟಕ ಎಂಜಿನಿಯರಿಂಗ್ ರಿಸರ್ಚ್ ಸ್ಟೇಷನ್(ಕೆಇಆರ್‌ಎಸ್)ನಿಂದ ಮಾಡೆಲ್‌ನ ಅಧ್ಯಯನ ಮಾಡಿಸಲು ನಿರ್ಧರಿಸಲಾಗಿದೆ.
ಮಂಡ್ಯದಲ್ಲಿರುವ ಕೆಇಆರ್‌ಎಸ್ ಮಾಡೆಲ್ ಸ್ಟಡಿ ಮಾಡುವುದರಲ್ಲಿ ಪರಿಣತಿ ಹೊಂದಿದೆ. ಈಗಾ ಗಲೇ ಅದರ ತಜ್ಞರು ಬಟ್ಟಪ್ಪಾಡಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೆಲ್ಲಿಕುನ್ನುವಿನಲ್ಲಿರುವ ಸಮುದ್ರದ ಅಲೆಗಳ ತೀವ್ರತೆ ಹಾಗೂ ಬಟ್ಟಪ್ಪಾಡಿಯ ಅಲೆಗಳ ತೀವ್ರತೆಯಲ್ಲಿ ವ್ಯತ್ಯಾಸಗಳಿರಬಹುದಾಗಿದ್ದು, ಇಲ್ಲಿಗೆ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂದು ತಿಳಿಯುವುದು ಈ ಅಧ್ಯಯನದ ಉದ್ದೇಶ. ಅಧ್ಯಯನ ಆರಂಭಿಸಲು ನಿರ್ದಿಷ್ಟ ಮೊತ್ತವನ್ನು ಒದಗಿಸಲು ಕೆಇಆರ್‌ಎಸ್‌ನವರು ಕೋರಿದ್ದಾರೆ. ತಮ್ಮ ವಿಶಾಲ ಕ್ಯಾಂಪಸ್‌ನಲ್ಲಿ ಬಟ್ಟಪ್ಪಾಡಿಯ ಕಡಲತೀರದ ಮಾದರಿ ಯನ್ನು ಸೃಷ್ಟಿಸಿ ಅದರಲ್ಲಿ ಇದೇ ರೀತಿಯ ಕಡಲ್ಕೊರೆತ, ಸೀವೇವ್ ಬ್ರೇಕರ್‌ನ ಪರಿಣಾಮಕಾರಿತನದ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ.
Related Articles
ಲಭ್ಯ ಮಾಹಿತಿಯಂತೆ ಸೀವೇವ್ ಬ್ರೇಕರ್ ಬಗ್ಗೆ ಉನ್ನತ ಅಧಿಕಾರಿಗಳು ಚರ್ಚಿಸಿದ್ದು ಏಕಾಏಕಿ ಇದನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತ ವಾಗಿತ್ತು. ಕಡಲಿಗೆ ಕಲ್ಲು ಹಾಕುವ ಬದಲು ಕಾಂಕ್ರೀಟ್‌ನ 50 ಅಡಿ ಉದ್ದ, 20 ಅಡಿ ಅಗಲ, 15ರಿಂದ 20 ಅಡಿ ಎತ್ತರದ ಫ್ರೇಮ್ ನಿರ್ಮಿಸಿ ಅದರಲ್ಲಿ ಮರಳು ತುಂಬಿಸುವ ಸೀವೇವ್ ಬ್ರೇಕರ್ ನಿರ್ಮಿ ಸುವುದು ನೆಲ್ಲಿಕುನ್ನು ಮಾದರಿ. ಇದು ಹೊಸ ತಂತ್ರಜ್ಞಾನ, ಅಲ್ಲದೆ ಇನ್ನೂ ವರ್ಷ ಕೂಡ ಆಗಿಲ್ಲ. 25 ಕೋಟಿ ರೂ. ವ್ಯಯಿಸಿ ಮತ್ತೆ ಕಡಲ್ಕೊರೆತ ಮುಂದುವರಿದರೆ ಏನು ಮಾಡುವುದು ಎಂಬ ಕಾರಣಕ್ಕೆ ಈ ಮಾಡೆಲ್ ಅಧ್ಯಯನ ಮಾಡಲು ಚಿಂತಿಸಲಾಗುತ್ತಿದೆ.
Advertisement
ಸೀ ಬ್ರೇಕರ್ ಕುರಿತು ತಾಂತ್ರಿಕ ವರದಿಯನ್ನು ಶೀಘ್ರ ಪಡೆ ಯುತ್ತೇವೆ. ಆ ಬಳಿಕ ಕಡಲ್ಕೊ ರೆತ ತಡೆಯುವ ಯೋಜನೆ ಯನ್ನು ಕೈಗೊಳ್ಳಲಿದ್ದೇವೆ.– ಎಸ್.ಅಂಗಾರ,
ಬಂದರು, ಮೀನುಗಾರಿಕೆ ಸಚಿವರು
-ವೇಣುವಿನೋದ್ ಕೆ.ಎಸ್.