ವೇಣೂರು: ಪ್ರತಿಯೊಂದು ಕ್ಷೇತ್ರದಲ್ಲಿ ತಂತ್ರಜ್ಞಾನಗಳು ಆಧುನೀಕರಣಗೊಳ್ಳುತ್ತಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನಕ್ಕೆ ಪ್ರಾಯೋಗಿಕವಾಗಿ ಹೊಂದಿಕೊಂಡಿರುವ ಸಂಸ್ಥೆಯಿಂದ ತರಬೇತಿ ಪಡೆದು ಉದ್ಯೋಗದಲ್ಲಿರುವ ಹಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ಪ್ರಸಕ್ತ ವಿದ್ಯಾರ್ಥಿಗಳ ತಾಂತ್ರಿಕ ಬೆಳವಣಿಗೆಗೆ ಪೂರಕ ಎಂದು ವೇಣೂರು ಶ್ರೀ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಹೇಳಿದರು.
ವೇಣೂರು ಶ್ರೀ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ವಠಾರದಲ್ಲಿ ಜರಗಿದ ಹಳೆ ವಿದ್ಯಾರ್ಥಿಗಳ ಸಂವಾದ ಮತ್ತು ಸಮಾವೇಶ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ನೇಮಕಾತಿ ಅಧಿಕಾರಿ ಎಂ.ಆರ್. ಜೈನ್ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಪದ್ಮಾಂಬ ಸಮೂಹ ಸಂಸ್ಥೆಯ ಮಾಲಕ ಜಿನರಾಜ್ ಜೈನ್, ಬೆಂಗಳೂರು ವಿಕಾಸ್ ರೆಫ್ರಿಜರೇಟರ್ ಇದರ ಮಾಲಕ ಮುಕೇಶ್, ಬೆಂಗಳೂರು ವೋಲ್ಟಸ್ ಇಂಡಿಯಾ ಲಿ.ನ ಹಿರಿಯ ಎಂಜಿನಿಯರ್ ಬಾಲಕೃಷ್ಣ ಬಿ., ಮಂಗಳೂರು ಮಾರುತಿ ನೆಕ್ಸಾ ಭಾರತ್ ಅಟೋ ಕಾರ್ನ ಸಹಾಯಕ ಮ್ಯಾನೇಜರ್ ಸೂರಜ್ ಜೈನ್, ಮಂಗಳೂರು ಮೆಸ್ಕಾಂನ ಸಹಾಯಕ ಮ್ಯಾನೇಜರ್ ಜಾನ್ ಬಾಪ್ಟಿಸ್ಟ್ ಡಿ’ಸೋಜಾ, ಉಜಿರೆ ಟೆಕ್ನೋ ಇಂಡಸ್ಟ್ರೀಸ್‌ನ ಮಾಲಕ ಜಗದೀಶ್, ಮೂಡುಬಿದಿರೆ ಝೆನ್ ಮೋಟಾರ್ ಮಾಲಕ ಗುರುಪ್ರಸಾದ್ ಎಂ., ಬೆಂಗಳೂರು ಬಾಷ್ ಕಂಪೆನಿ ಇದರ ತಾಂತ್ರಿಕ ಅಧಿಕಾರಿ ಚಂದ್ರಶೇಖರ ಬಿ.ಎಸ್., ಬೆಂಗಳೂರು ಏಸ್ ಡಿಸೈನರ್‌ನ ವಾಸುದೇವ ಪಿ., ಬೆಂಗಳೂರು ಮೆಟ್ರೋ ರೈಲ್ವೇ ಕಾರ್ಪೊರೇಶನ್ ಲಿ.ನ ತಾಂತ್ರಿಕ ಅಧಿಕಾರಿ ಕು| ಸುನೀತಾ ಪಿ., ಬೆಂಗಳೂರು ಭವಾನಿ ಇಂಡಸ್ಟ್ರೀಸ್‌ನ ಮೆಷಿನ್ ಆಪರೇಟರ್ ಅನಿಲ್ ಕುಮಾರ್ ಎನ್.ಎಸ್. ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಡೆದ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ ವಹಿಸಿದ್ದರು. ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಉಜಿರೆ ಕಿರಣ್ ಅಗ್ರೋಟೆಕ್ ಮಾಲಕ ಪ್ರಕಾಶ್ ಬಿ.ಕೆ. ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಸ್ವಾಗತಿಸಿ, ತರಬೇತಿ ಅಧಿಕಾರಿ ಎಚ್. ರತ್ನಾಕರ ರಾವ್ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಾಣಿಕ್ಯರಾಜ್ ಜೈನ್ ವಂದಿಸಿದರು. ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಮಾತನಾಡಿದರು.