ಬಂಟ್ವಾಳ: ಉದಯವಾಣಿ ದಿನಪತ್ರಿಕೆ ಹಾಗೂ ಉಡುಪಿ ಆರ್ಟಿಸ್ಟ್ ಫೋರಂ ಸಹಯೋಗದೊಂದಿಗೆ ಆಯೋಜಿಸಿದ್ದ ಬಂಟ್ವಾಳ ತಾಲೂಕು ಮಟ್ಟದ ಚಿಣ್ಣರ ಬಣ್ಣ-2024 ಮಕ್ಕಳ ಚಿತ್ರಕಲಾ ಸ್ಪರ್ಧೆಯು ನ. 2ರ ಶನಿವಾರ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು.
ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಝೋನಲ್ ಲೆಫ್ಟಿನೆಂಟ್ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಬಿ.ಸಿ.ರೋಡು ಸ್ಪರ್ಶ ಕಲಾಮಂದಿರದ ಮುಖ್ಯಸ್ಥ ಸುಭಾಶ್ಚಂದ್ರ ಜೈನ್, ಉಡುಪಿ ಆರ್ಟಿಸ್ಟ್ ಫೋರಂ ಸದಸ್ಯ ರಾಜೇಂದ್ರ ಕೇದಿಗೆ ಭಾಗವಹಿಸಿದ್ದರು. ಉದಯವಾಣಿ ರೀಜನಲ್ ಮ್ಯಾನೇಜರ್ ಸತೀಶ್ ಮಂಜೇಶ್ವರ ಪ್ರಸ್ತಾವನೆಗೈದರು.
ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಲ್ಪನೆಯ ಚಿತ್ರಗಳಿಗೆ ಬಣ್ಣ ತುಂಬಿದರು. ಮುಖ್ಯ ಪ್ರಾಯೋಜಕರಾಗಿ ಮಂಗಳೂರಿನ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಹ್ಯಾಂಗ್ಯೋ ಐಸ್ ಕ್ರೀಂ, ಕ್ಯಾಂಪ್ಕೋ, ಮಾಡರ್ನ್ ಕಿಚನ್ಸ್ ಹಾಗೂ ಜಯಲಕ್ಷ್ಮೀ ಸಿಲ್ಕ್ಸ್ ಬನ್ನಂಜೆ ಉಡುಪಿ ಮುಖ್ಯ ಪ್ರಾಯೋಜಕರಾಗಿ, ಗುರು ಕಮ್ಯೂನಿಕೇಶನ್ಸ್ ಹೊಕ್ಕಾಡಿಗೋಳಿ, ವೆಲಂಕಣಿ ಅರೇಂಜರ್ಸ್ ಬಡ್ಡಕಟ್ಟೆ ಬಂಟ್ವಾಳ ಸ್ಥಳೀಯ ಪ್ರಾಯೋಜಕರಾಗಿ ಸಹಕರಿಸಿದರು. ಬಿ.ಮೂಡ ಸರಕಾರಿ ಪ.ಪೂ.ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಸಹಕರಿಸಿದರು.