Advertisement

ಮಾರ್ಚ್‌ 20 – 21ರಂದು ನಿಗದಿಯಾಗಿದ್ದ ಎಸ್‌ಡಿಎ ಪರೀಕ್ಷೆ ಮುಂದಕ್ಕೆ

09:31 PM Mar 10, 2021 | Team Udayavani |

ಬೆಂಗಳೂರು: ಇದೇ ಮಾರ್ಚ್‌ 20 ಮತ್ತು 21ರಂದು ನಿಗದಿಯಾಗಿದ್ದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳ ಸ್ಪರ್ಧಾತ್ಮ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗ ಮುಂದೂಡಿದೆ.

Advertisement

ಮಾರ್ಚ್‌ 20 ರಂದು ಕಡ್ಡಾಯ ಕನ್ನಡ ಮತ್ತು 21 ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಕನ್ನಡ ಪತ್ರಿಕೆಗಳ ಪರೀಕ್ಷೆಗೆ ನಿಗದಿ ಮಾಡಲಾಗಿತ್ತು. ಆದರೆ, ಫೆಬ್ರವರಿ 28ರಂದು ಪ್ರಥಮ ದರ್ಜೆ ಸಹಾಯಕರ(ಎಫ್ಡಿಎ)ಹುದ್ದೆಗಳ ಭರ್ತಿಗೆ ಸ್ಪಧಾತ್ಮಕ ಪರೀಕ್ಷೆ ನಡೆಸಲಾಗಿದೆ.

ಎಸ್‌ಡಿಎ ಪರೀಕ್ಷೆಗೆ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳುವುದಕ್ಕೆ ಕಾಲಾವಕಾಶದ ಕೊರತೆಯಾಗುತ್ತಿದ್ದು, ಪರೀಕ್ಷೆಯನ್ನು ಮುಂದೂಡಲಾಗುತ್ತಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ.ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :ಇದೊಂದು ವ್ಯವಸ್ಥಿತ ಪಿತೂರಿ : ಸಿಎಂ ಮಮತಾ ಬ್ಯಾನರ್ಜಿ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next