Advertisement

ಕಲ್ಮಕಾರು: ಸೂಕ್ಷ್ಮ ಪರಿಸರ ವಲಯ ವಿರುದ್ಧ  ಗ್ರಾಮಸಭೆ

07:50 AM Aug 15, 2017 | Harsha Rao |

ಸುಳ್ಯ/ ಕಲ್ಮಕಾರು: ಪ್ರತಿಭಟನೆ, ಹೋರಾಟದ ಎಚ್ಚರಿಕೆಯೊಂದಿಗೆ ಕಾನೂನಾತ್ಮಕ ಹೋರಾಟದ ಚಿಂತನೆಯೂ ನಡೆಯ ಬೇಕು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್‌ ಶಿರಾಡಿ ಸಲಹೆ ನೀಡಿದ್ದಾರೆ.

Advertisement

ಶನಿವಾರ ಸಂಜೆ ಕಲ್ಮಕಾರಿನಲ್ಲಿ  ಏರ್ಪಡಿಸಿದ್ದ ಪರಿಸರಸೂಕ್ಷ್ಮ ವಲಯಕ್ಕೆ ಕಲ್ಮಕಾರು ಗ್ರಾಮವನ್ನು ಸೇರ್ಪಡೆಗೊಳಿಸಿರುವುದರ ವಿರುದ್ಧ ಹಮ್ಮಿಕೊಂಡ ಸಭೆಯಲ್ಲಿ ಅವರು ಗ್ರಾಮಸ್ಥ ರನ್ನುದ್ದೇಶಿಸಿ ಮಾತನಾಡಿದರು. ಸ್ಥಳೀಯಾಡ ಳಿತಗಳಲ್ಲಿ ಯೋಜನೆ ವಿರುದ್ಧ ನಿರ್ಣಯ ಕೈಗೊಳ್ಳಲು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಒತ್ತಡ ಹಾಕುವಂತೆ ಕರೆ ನೀಡಿದರು.

ತಾ.ಪಂ. ಸದಸ್ಯ ಉದಯ್‌ ಕೊಪ್ಪಡ್ಡ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಗಣೇಶ್‌ ಭಟ್‌ ಇಡ್ಯಡ್ಕ, ಗ್ರಾ.ಪಂ. ಅಧ್ಯಕ್ಷೆ ವೀಣಾ ಬಿಳಿಮಲೆ, ಮುಖಂಡರಾದ ಡಿ.ಎಸ್‌. ಹರ್ಷಕುಮಾರ್‌, ಮಹೇಶ್‌ ಕೆ.ಪಿ. ಮತ್ತಿತರರು ಉಪಸ್ಥಿತರಿದ್ದರು.

ನಿರ್ಣಯಗಳು
ಯೋಜನೆ ವಿರುದ್ಧ ವಿಶೇಷ ಗ್ರಾಮಸಭೆಯನ್ನು ಕರೆಯಲು ತೀರ್ಮಾನಿಸಲಾಯಿತು. ಜಿ.ಪಂ. ಮತ್ತು ತಾ.ಪಂ.ನಲ್ಲಿ ಯೋಜನೆ ವಿರುದ್ಧ ನಿರ್ಣಯ ಕೈಗೊಳ್ಳುವುದು ಹಾಗೂ ಕಾನೂನಾತ್ಮಕ ಹೋರಾಟಕ್ಕೆ ನಿರ್ಧರಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next