ಪುತ್ತೂರು : ಪ್ರಗತಿ ಎಜುಕೇಶನಲ್ ಫೌಂಡೇಶನ್ ಪುತ್ತೂರು ಪ್ರಾಯೋಜಕತ್ವದ ಶ್ರೀ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿರುವ ಪ್ರಗತಿ ಸ್ಟಡಿ ಸೆಂಟರ್‌ನ ವಿಜ್ಞಾನ ವಿಭಾಗವು ಜೂ. 25ರಂದು ನೂತನ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ.
ಪ್ರಗತಿ ಸ್ಟಡಿ ಸೆಂಟರ್‌ನ ಮತ್ತೊಂದು ಮೈಲಿಗಲ್ಲು ಎಂಬಂತೆ ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‌ನಲ್ಲಿ ನೇರವಾಗಿ
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗವು ಜೂ. 25ರಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ
ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ವಿವಿಧ ಗಣ್ಯರು ಮತ್ತು ವಿಜ್ಞಾನ ಕ್ಷೇತ್ರದಲ್ಲಿನ ಸಾಧಕರು ಆಗಮಿಸಲಿದ್ದಾರೆ.
ಸಂಸ್ಥೆಯಲ್ಲಿ ನುರಿತ ಹಾಗೂ ಅನುಭವಸ್ಥ ಉಪನ್ಯಾಸಕರಿಂದ ಉತ್ತಮ ಗುಣಮಟ್ಟದ ವ್ಯಾಸಂಗವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಹೊಸದಾಗಿ ತೆರೆಯುತ್ತಿರುವ ವಿಜ್ಞಾನ ವಿಭಾಗಕ್ಕೆ ಸುಸಜ್ಜಿತವಾದ ವಿಜ್ಞಾನ ಲ್ಯಾಬ್, ಸ್ಮಾರ್ಟ್ ಬೋರ್ಡ್, ಅದರೊಂದಿಗೆ ಮಂಗಳೂರಿನ ನುರಿತ ಉಪನ್ಯಾಸಕರಿಂದ ಸಿಇಟಿ, ನೀಟ್, ಜೆಇಇ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ಎನ್‌ಐಒಎಸ್ ಸಂಸ್ಥೆಯ ಪರೀಕ್ಷೆಗಳಿಗೆ ಉತ್ತೇಜಿಸಲಾಗುತ್ತದೆ. ಮಂಗಳೂರನ್ನು ಹೊರತುಪಡಿಸಿ ಜಿಲ್ಲೆಯಲ್ಲೇ ಪ್ರಗತಿಯ ಹೊಸ ಪ್ರಯತ್ನವಿದು.
ದೂರದ ಊರಿನ ಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಸುಸಜ್ಜಿತ ವಸತಿ ನಿಲಯದ ವ್ಯವಸ್ಥೆ ಮಾಡಲಾಗಿದೆ. ಎರಡೂ ವಸತಿ ನಿಲಯಗಳು ಪ್ರಶಾಂತ ವಾದ ವಾತಾವರಣದಲ್ಲಿ ಸಂಸ್ಥೆಯಿಂದ 4 ಕಿ.ಮೀ. ದೂರದಲ್ಲಿದ್ದು, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಕೊಡಲಾಗಿದೆ. ಪ್ರಥಮ ಪಿಯುಸಿಯಲ್ಲಿ
ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲೇ ಮುಂದುವರಿಯುವ ಅಥವಾ ಹತ್ತನೇ ತರಗತಿ ಉತ್ತೀರ್ಣಗೊಂಡು 15 ವರ್ಷ ತುಂಬಿರುವ ವಿದ್ಯಾರ್ಥಿಗಳಿಗೆ ಒಂದು ಅದ್ಭುತ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಯತ್ನವು ಪ್ರಗತಿಯ ನೂತನ ಹೆಜ್ಜೆಯಾಗಿದೆ.