Advertisement

“ವಿಜ್ಞಾನ ಕಷ್ಟವಲ್ಲ, ಆಟ’

11:02 PM Dec 11, 2019 | mahesh |

ಪುತ್ತೂರು: ವಿಜ್ಞಾನ ಕಷ್ಟ ಎನಿಸಿದರೂ ಆಟದ ರೀತಿಯಲ್ಲಿ ವಿನಿ ಯೋಗಿಸಿದರೆ ಉತ್ತಮ ಅನ್ವೇಷಣೆ ಮಾಡ ಬಹುದು. ಈ ನಿಟ್ಟಿನಲ್ಲಿ ಮಕ್ಕಳು ಅನ್ವೇಷಣೆ ಯಲ್ಲಿ ಪಾಲ್ಗೊಳ್ಳಬೇಕೆಂದು ವಿದ್ಯಾರ್ಥಿ ವಿಜ್ಞಾನಿ ಸ್ವಸ್ತಿಕ್‌ ಪದ್ಮ ಹೇಳಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಭಾರತ ಜ್ಞಾನ ವಿಜ್ಞಾನ ಸಮಿತಿ, ದ.ಕ.ಜಿ.ಪಂ., ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಹಾರಾಡಿ ಹಾಗೂ ಹಾರಾಡಿ ಶಾಲೆ ಸಹಯೋಗದಲ್ಲಿ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳು ನಡೆಯುವ ಪ್ರಸಕ್ತ ಶೈಕ್ಷಣಿಕ ವರ್ಷದ ವಿನೂತನ ಚಟುವಟಿಕೆ “ಮಕ್ಕಳ ವಿಜ್ಞಾನ ಹಬ್ಬ -2019’ನ್ನು ಡಿ.11ರಂದು ಅವರು ಜಲೀಯ ಸಸ್ಯವನ್ನು ನೀರಿಗೆ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಭಾರತ ಬಲಿಷ್ಠ ದೇಶ ಆಗಬೇಕಾದರೆ ವಿಜ್ಞಾನ ಮತ್ತು ಅನ್ವೇಷಣೆಯಲ್ಲಿ ಮಕ್ಕಳ ಭಾಗವಹಿಸುವಿಕೆ ಮುಖ್ಯ. ತಂತ್ರಜ್ಞಾನ ಅಭಿವೃದ್ಧಿ ಆಗುವ ಮೂಲಕ ದೇಶ ಬಲಿಷ್ಠ ಆಗುತ್ತದೆ. ವಿಜ್ಞಾನ ಹಬ್ಬಗಳು ಇದಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಮಾಡುತ್ತವೆ ಎಂದರು.

ಪ್ರಶ್ನೆ ಮೂಡಿದಾಗ ಬೆಳೆಯಲು ಸಾಧ್ಯ
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಮಾತನಾಡಿ, ಉತ್ತಮ ವೇದಿಕೆ ಲಭಿಸಿದಾಗ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರಬರುತ್ತದೆ. ಇಂತಹ ವೇದಿಕೆಯಿಂದ ಹೊರಬಂದ ಪ್ರತಿಭೆ ಮುಂದೆ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಪ್ರಚುರಗೊಳ್ಳಲಿ ಎಂದರು. ವಿಷಯಗಳ ಬಗ್ಗೆ ಸಂದೇಹ ಬಂದಾಗ ಶ್ನೆ ಮಾಡಿ. ತಮ್ಮಲ್ಲಿರುವ ಪ್ರಶ್ನೆಗಳ ಕುರಿತು ಚರ್ಚಿಸಿದಾಗ ಬೆಳೆಯಲು ಸಾಧ್ಯ. ಭಾರತ ವಿಶ್ವಗುರು ಆಗುವ ಸಂದರ್ಭದಲ್ಲಿ ನಾವಿದ್ದೇವೆ. ಇದಕ್ಕೆ ಮಕ್ಕಳ ಸಹಕಾರವೂ ಇದೆ ಎಂದರು.

ಯೋಜನೆ ರೂಪದಲ್ಲಿ ತನ್ನಿ
ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಅನೇಕ ಯುವ ಪೀಳಿಗೆಯಲ್ಲಿ ಅವಿಷ್ಕಾರದ ಹೊಸ ಯೋಚನೆಗಳು ಮೂಡುತ್ತಿವೆ. ಆದರೆ ಅವುಗಳನ್ನು ಯೋಜನೆ ರೂಪದಲ್ಲಿ ಹೊರ ತರುವ ಕೆಲಸ ಆಗಬೇಕು ಎಂದರು. ನಗರಸಭಾ ಸದಸ್ಯೆ ಪ್ರೇಮಲತಾ ರಾವ್‌ ಮಾತನಾಡಿ, ಸಾಮಾನ್ಯ ಮಕ್ಕಳಲ್ಲಿ ಗ್ರಹಿಕೆ ಮೂಡಿಬರಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು. ಮಂಗಳೂರು ಡಿವೈಪಿಸಿಯ ಮಂಜುಳಾ, ಹಾರಾಡಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಪ್ರತಿಮಾ ಯು ರೈ ಮಾತನಾಡಿದರು. ಸಿಆರ್‌ಪಿ ನಾರಾಯಣ ಪುಣಚ ಪ್ರಾಸ್ತಾವಿಕವಾಗಿ ಮಾತನಾಡಿ, ಒಟ್ಟು ನಾಲ್ಕು ಕಾರ್ನರ್‌ಗಳಲ್ಲಿ ವಿಜ್ಞಾನ ಹಬ್ಬ ನಡೆಯುತ್ತದೆ. ಇಲ್ಲಿ 9 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಎಂದರು. ಶಾಲಾ ಮುಖ್ಯ ಗುರು ಪ್ರಿಯಾಕುಮಾರಿ ಸ್ವಾಗತಿಸಿ, ಶಿಕ್ಷಕಿ ಧನ್ಯಕುಮಾರಿ ವಂದಿಸಿದರು. ಸಹಶಿಕ್ಷಕ ಪ್ರಶಾಂತ್‌ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next