Advertisement

BJP: ಬಿಜೆಪಿ ಸಂಘಟನಾ ಕಾರ್ಯದರ್ಶಿ ಬದಲು

11:36 PM May 25, 2024 | Team Udayavani |

ಬೆಂಗಳೂರು: ಮಹತ್ವದ ಬೆಳವಣಿಗೆ ಯೊಂದರಲ್ಲಿ ಬಿಜೆಪಿ ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್‌ ಅವರನ್ನು ಹುದ್ದೆಯಿಂದ ಬದಲಾಯಿಸಲಾಗಿದೆ. ಇದರ ಜತೆಗೆ ಆರೆಸ್ಸೆಸ್‌ನ ದಕ್ಷಿಣ ಪ್ರಾಂತ್ಯದ ಸಂಘಟನಾತ್ಮಕ ಹುದ್ದೆಗಳಲ್ಲಿಯೂ ರಚನಾತ್ಮಕ ಬದಲಾವಣೆಯನ್ನು ಮಾಡಲಾಗಿದೆ.

Advertisement

ಉಡುಪಿ ಜಿಲ್ಲೆ ಕಾರ್ಕಳದ ಹೆಬ್ರಿಯಲ್ಲಿ ನಡೆದ ಸಂಘ ಶಿಕ್ಷಾ ವರ್ಗದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಬಿಜೆಪಿಯ ಆಯಕಟ್ಟಿನ ಹುದ್ದೆಯೆಂದು ಪರಿಗಣಿಸಲ್ಪಟ್ಟ ಸಂಘಟನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅರ್ಹರಾದ ವ್ಯಕ್ತಿಗಳನ್ನು ಸಂಘವೇ ನಿಯೋಜಿಸುತ್ತದೆ, ಸಂಘವೇ ವಾಪಾಸ್‌ ಕರೆಯಿಸಿಕೊಳ್ಳುತ್ತದೆ. ಆದರೆ ರಾಜೇಶ್‌ ಅವರನ್ನು ಅತ್ಯಂತ ಕಿರು ಅವಧಿಯಲ್ಲೇ ಬದಲಾಯಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

2022-23ರಲ್ಲಿ ಸಂಘಟನ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್‌ ನೇಮಕಗೊಂಡಿದ್ದರು. ಅತೀ ಕಿರಿಯ ವಯಸ್ಸಿಗೆ ಈ ಹುದ್ದೆಗೇರಿದ್ದರು. ಅದಕ್ಕೆ ಮುನ್ನ ಹಿರಿಯರಾದ ಅರುಣ್‌ ಕುಮಾರ್‌ ಈ ಹುದ್ದೆಯನ್ನು ನಿಭಾಯಿಸಿದ್ದರು. ರಾಜೇಶ್‌ ಅವರನ್ನು ಈಗ ಪ್ರಾಂತ ಸಾಮರಸ್ಯ ಸಹ ಸಂಯೋಜಕ್‌ ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಸದ್ಯಕ್ಕೆ ಸಂಘಟನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾರನ್ನೂ ನೇಮಕ ಮಾಡಿಲ್ಲ.

ಸಂಘಟನಾತ್ಮಕ ಹೊಣೆಗಾರಿಕೆ ಬದಲಾವಣೆ ವಿವರ

ಪ್ರಾಂತ ಸ್ತರ:

Advertisement

ಪ್ರಾಂತ ಪ್ರಚಾರಕ್‌ – ಗುರುಪ್ರಸಾದ್‌; ಸಹ ಪ್ರಾಂತ ಪ್ರಚಾರಕ್‌ – ನಂದೀಶ್‌; ಪ್ರಾಂತ ಬೌದ್ಧಿಕ ಪ್ರಮುಖ್‌ – ಕೃಷ್ಣ ಪ್ರಸಾದ್‌; ಪ್ರಾಂತ ಕಾಲೇಜು ವಿದ್ಯಾರ್ಥಿ ಪ್ರಮುಖ್‌ – ಉಮೇಶ್‌; ಪ್ರಾಂತ ಪ್ರಚಾರಕ್‌ ಪ್ರಮುಖ್‌ – ಚಂದ್ರಬಾಬು; ಪ್ರಾಂತ ಕಾರ್ಯಾಲಯ ಪ್ರಮುಖ್‌ – ಶ್ರೀನಿಧಿ;  ಪ್ರಾಂತ ಗ್ರಾಮ ವಿಕಾಸ ಸಂಯೋಜಕ್‌ – ಅಕ್ಷಯ್‌; ಪ್ರಾಂತ ಸಾಮರಸ್ಯ ಸಹ ಸಂಯೋಜಕ್‌ – ರಾಜೇಶ್‌; ಪ್ರಾಂತ ಗುಮಂತು ಕಾರ್ಯ – ಬಾಲಕೃಷ್ಣ ಕಿಣಿ;

ಮಂಗಳೂರು ವಿಭಾಗ:

ಮಂಗಳೂರು ವಿಭಾಗ ಪ್ರಚಾರಕ್‌ – ಸುರೇಶ್‌; ಮಂಗಳೂರು ವಿಭಾಗ ಕಾಲೇಜು ವಿದ್ಯಾರ್ಥಿ ಪ್ರಮುಖ್‌ – ರೋಹಿತ್‌; ಮಂಗಳೂರು ಮಹಾನಗರ ಜಿಲ್ಲಾ ಪ್ರಚಾರಕ್‌ – ಹರ್ಷವರ್ಧನ್‌; ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರಕ್‌ – ಭರತ್‌; ಉಡುಪಿ ಜಿಲ್ಲಾ ಪ್ರಚಾರಕ್‌ – ಅವನೀಶ್‌; ಪುತ್ತೂರು ಜಿಲ್ಲಾ ಪ್ರಚಾರಕ್‌ – ಸುದೇಷ್‌; ಕೊಡಗು ಜಿಲ್ಲಾ ಪ್ರಚಾರಕ್‌ – ಭರತ್‌ ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next