Advertisement
ಮಂಡಗದ್ದೆ ಅರಣ್ಯ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ಮರ ಕಳ್ಳತನ ,ಅಕ್ರಮ ಟಿಂಬರ್ ಸಾಗಾಟ ನಡೆಯುತ್ತಿದೆ ಇದನ್ನು ರಕ್ಷಿಸಿ ಕಾಡನ್ನು ಉಳಿಸಿ ಸಂರಕ್ಷಿಸುವುದು ಬಿಟ್ಟು ಸರ್ಕಾರಿ ಶಾಲೆಯೊಂದು ಅನೇಕ ವರ್ಷಗಳಿಂದ ಕಾಯ್ದಿರಿಸಿದ ಸರ್ವೆ ನಂ 40 ರಲ್ಲಿರುವ ಹತ್ತು ಎಕರೆ ಪ್ರದೇಶ ಇದೀಗ ಇವರ ಕಣ್ಣಿಗೆ ಬಿದ್ದಿದೆ, ಇತ್ತೀಚೆಗೆ ಈ ಶಾಲೆಯ ಜಾಗ ನಮ್ಮದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಖ್ಯಾತೆ ತೆಗೆದಿದ್ದು ಈ ಪ್ರದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು, ಶಾಲೆಯ ಕಮಿಟಿಯವರು ಎಷ್ಟೇ ಹೇಳಿದರೂ ಕೇಳದ ಅರಣ್ಯಾಧಿಕಾರಿಗಳ ದರ್ಪದ ವಿರುದ್ಧ ಸ್ಥಳೀಯರು ಧಿಕ್ಕಾರ ಕೂಗುತ್ತಾ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
Related Articles
Advertisement
ಪ್ರತಿಭಟನೆಯಲ್ಲಿ ಸ್ಥಳೀಯ ಆರ್ ಎಫ್ ಒ ವಿರುದ್ಧ ಅಶೋಕ್ ಮೂರ್ತಿ ಸೇರಿದಂತೆ ಇತರ ಬಿಜೆಪಿ ನಾಯಕರುಗಳು ಆಕ್ರೋಶ ಭರಿತರಾಗಿ ಮಾತನಾಡಿದ್ದು, ಅರಣ್ಯ ಇಲಾಖೆಯ ಮರ್ಯಾದೆಯನ್ನು ತೆಗೆಯುವುದಕ್ಕೆ ಈ ಅಧಿಕಾರಿ ಇದ್ದಾರೆ. ಮಂಡಗದ್ದೆ ಪ್ರದೇಶದಲ್ಲಿ ಸಾಕಷ್ಟು ಅರಣ್ಯ ಇಲಾಖೆ ಜಾಗ ಒತ್ತುವರಿಯಾಗಿ ಮರ ಕಳ್ಳತನ ನಡೆಯುತ್ತಿದೆ ಇದಕ್ಕೆ ಅಧಿಕಾರಿಯ ಪರೋಕ್ಷ ಬೆಂಬಲ ಇದ್ದು ಅಕ್ರಮದಾರರ ಜತೆ ಶಾಮೀಲಾಗಿದ್ದಾರೆ ಎಂಬ ಆರೋಪವನ್ನು ಮಾಡಿದ್ದು, ಆರ್ ಎಫ್ ಒ ಈ ಅಧಿಕಾರಿಯನ್ನು ಈ ಭಾಗದಿಂದ ವರ್ಗಾವಣೆ ಮಾಡುವಂತೆ ಗೃಹ ಸಚಿವರಿಗೆ ಮತ್ತು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರತಿಭಟನೆಯಲ್ಲಿ ಒತ್ತಾಯಿಸಿದರು.