Advertisement

ಮುಖ್ಯ ಗುರುಗಳ ಅಮಾನತಿಗಾಗಿ ಅನ್ನ ನೀರು ಬಿಟ್ಟು ವಿದ್ಯಾರ್ಥಿಗಳ ಪ್ರತಿಭಟನೆ

04:32 PM Feb 02, 2022 | Team Udayavani |

ಇಂಡಿ : ಶಾಲೆಯ ಮುಖ್ಯ ಗುರುಗಳ ಅಮಾನತಿಗಾಗಿ ಆಗ್ರಹಿಸಿ ವಿದ್ಯಾರ್ಥಿಗಳು ತರಗತಿಗೆ ಹೋಗದೆ ಪ್ರತಿಭಟಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಗೊರನಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

Advertisement

ಮುಖ್ಯ ಶಿಕ್ಷಕರ ಸುಖಾ ಸುಮ್ಮನೆ ಪಾಲಕರ ಮತ್ತು ಶಿಕ್ಚಕರ ಮೇಲೆ ಸುಳ್ಳು ಆರೊಪ ಮಾಡಿ ದೂರು ದಾಖಲು ಮಾಡಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಕೂಡಲೇ ದೂರು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಿಗ್ಗೆಯಿಂದ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಬೇಕೆಂದು ಅನ್ನ ನೀರು ಬಿಟ್ಟು ಪ್ರತಿಭಟನೆ ನಡೆಸಿದ್ದಾರೆ, ಆದರೆ ಪ್ರತಿಭಟನೆ ವಿಷಯ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಪ್ರತಿಭಟನಾ ಸ್ಥಳಕ್ಕೆ ಬಾರದಿರುವುದು ವಿಪರ್ಯಾಸ.

ಇದನ್ನೂ ಓದಿ : ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ : ಜಯಂತ್ ಚೌಧರಿ

Advertisement

Udayavani is now on Telegram. Click here to join our channel and stay updated with the latest news.

Next