Advertisement
ಶಾಲೆಗಾಗಿ ಭೂಮಿ ದಾನ: 1970 ರ ದಶಕ ದಲ್ಲಿ ಬಾಳ್ಳುಪೇಟೆ ಸುತ್ತಮುತ್ತಲಿನ ಗ್ರಾಮ ಗಳಲ್ಲಿ ಪ್ರೌಡಶಾಲೆ ಇಲ್ಲದ್ದನ್ನು ಗಮನಿಸಿದ್ದ ಅಂದಿನ ಸಮಾಜ ಸೇವಕರಾದ ಬಿ.ಜಿ ಗುರುಪ್ಪ ಗೌಡ 1971ರಲ್ಲಿ ಪ್ರೌಡಶಾಲೆ ಸ್ಥಾಪನೆಗೆ ಗ್ರಾಮ ದಲ್ಲಿ ಸುಮಾರು 4.39ಗುಂಟೆ ಜಮೀನನ್ನು ದಾನವಾಗಿ ನೀಡಿದ್ದು ದಾನವಾಗಿ ನೀಡಿದ ಜಾಗ ದಲ್ಲಿ ಮತ್ತೂರ್ವ ಸಮಾಜಸೇವಕ ಸಿದ್ದಣ್ಣಯ್ಯ ಎಂಬುವವರು ಶಾಲಾ ಕಟ್ಟಡ ಕಟ್ಟಿಸಿದ್ದರು. ಅಂದಿನಿಂದ ಗ್ರಾಮಸ್ಥರು 15 ಜನರ ಟ್ರÓr… ರಚಿಸಿಕೊಂಡು ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆದು ಶಾಲೆ ಮುನ್ನೆಡೆಸುತ್ತಿದ್ದಾರೆ.
Related Articles
Advertisement
ಕಾಲ್ಕಿತ್ತ ಕಾರ್ಮಿಕರು: ಪ್ರತಿಭಟನೆ ಅಂಗವಾಗಿ ಬಾಳ್ಳುಪೇಟೆ ವೃತ್ತದಿಂದ ಶಾಲೆಯ ವಿದ್ಯಾರ್ಥಿ ಗಳು, ಹಳೇ ವಿದ್ಯಾರ್ಥಿಗಳು, ಸಾರ್ವಜನಿಕರು ಬಿ.ಸಿದ್ದಣ್ಣಯ್ಯ ಪ್ರೌಡಶಾಲೆಯವರೆಗೆ ಮೆರ ವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಬೇಲಿ ಕಾಮಗಾರಿ ನಡೆಸುತ್ತಿದ್ದವರ ವಿರುದ್ಧ ಪ್ರತಿಭಟ ನಕಾರರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಮಿಕರು ಸ್ಥಳದಿಂದ ಕಾಲ್ಕಿತ್ತರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಮಾಜಿ ಶಾಸಕ ಗುರುದೇವ್ ರವರ ಪತ್ನಿ ಜ್ಯೋತಿ ಆಗಮಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಬಾಳ್ಳುಪೇಟೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಭಾ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಬೇಲಿ ಕಾಮಗಾರಿ ನಡೆಸಲು ಯಾವುದೆ ಅನುಮತಿ ಪಡೆಯದಿದ್ದು ಕಂಡು ಬಂದ ಹಿನ್ನೆಲೆ ಹಾಗೂ ಪ್ರಕರಣ ನ್ಯಾಯಾಲಯದಲ್ಲಿ ಇರುವು ದರಿಂದ ಗ್ರಾಪಂ ಅನುಮತಿ ಸಿಗುವವರೆಗೂ ಕಾಮಗಾರಿ ಮಾಡದಂತೆ ಪೋಲಿಸರು ಸೂಚಿ ಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಠಾಣೆ ಪಿಎಸ್‌ಐ ಬಸವರಾಜ್ ನೇತೃತ್ವದಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.
ಇದನ್ನೂ ಓದಿ:- ದಿವಂಗತ ತಾಯಿಯ ಮೂರ್ತಿಗೆ ನಿತ್ಯವು ಪುತ್ರಿಯ ನಮನ
ಸ್ಥಳಕ್ಕೆ ಡಿವೆ.ಎಸ್‌ಪಿ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಬಿ.ಡಿ ಬಸವಣ್ಣ, ಬಿ.ಎನ್ ಬಸವಣ್ಣ, ರೋಹಿತ್ ಕಿತ್ತಲೆಮನೆ, ಗ್ರಾಪಂ ಅಧ್ಯಕ್ಷ ಎಚ್.ಎಂ ಸ್ವಾಮಿ, ಬೆಳಗೋಡು ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷ ಉಮಾನಾಥ್, ಗ್ರಾಪಂ ಸದಸ್ಯರಾದ ರೋಹಿತ್, ಭರತ್ ಶಾಲೆ ಹಳೇ ವಿದ್ಯಾರ್ಥಿಗಳ ಮುಖಂಡರಾದ ಇಬ್ರಾಹಿಂ, ಬಿ. ಆರ್ ಪಾಲಾಕ್ಷ, ಕಿಶೋರ್ ಶೆಟ್ಟಿ, ಶರತ್ ಇತರರಿದ್ದರು. ಶಾಲೆ ಉಳಿಸಿ ಅಭಿಯಾನ ಆರಂಭ ಶಾಲಾ ಟ್ರಸ್ಟ್ ಅಧ್ಯಕ್ಷ ಶಾಂತರಾಜ್ ಮಾತನಾಡಿ, ಹಿರಿಯರು ದಾನ ನೀಡಿರುವ ಜಾಗವನ್ನು ಹಿಂಪಡೆಯಲು ಮುಂದಾಗಿರುವ ಗುರುದೇವ್‌ರವರಿಂದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿ ರುವ 250ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಲೆಯಲ್ಲಿದೆ.
ವಿದ್ಯಾರ್ಥಿಗಳಿಗೆ ಆಟವಾಡಲು ಮೈದಾನವಿಲ್ಲದಂತಾಗುತ್ತದೆ. ಆದ್ದರಿಂದ, ಶಾಲೆ ಉಳಿಸಿ ಎಂಬ ಹೋರಾಟವನ್ನು ಟ್ರಸ್ಟ್ ಸದಸ್ಯರು ಹಳೇವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರೊಂದಿಗೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಶಾಲೆಯ ಆಡಳಿತ ಮಂಡಳಿಯವರಿಗೆ ಹಲವು ಬಾರಿ ಜಾಗವನ್ನು ಶಾಲೆಯ ಹೆಸರಿಗೆನೋಂದಣಿ ಮಾಡಿಸಿಕೊಳ್ಳುವಂತೆ ಹೇಳಿದರೂ ನೋಂದಣಿ ಮಾಡಿಸಿಕೊಂಡಿಲ್ಲ. ಶಾಲೆಗೆ ರಸ್ತೆ ನಿರ್ಮಾಣ ಮಾಡಿಸಿಕೊಡುತ್ತಿದ್ದೇವೆ. ನಮ್ಮ ಹೆಸರಿನಲ್ಲಿರುವ 1 ಎಕರೆಗೆ ಮಾತ್ರ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದೇವೆ. ಶಾಲೆಗೆ ಯಾವ ರೀತಿಯ ತೊಂದರೆ ಇಲ್ಲ, ನ್ಯಾಯಾಲಯ ನೀಡುವ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
ಜ್ಯೋತಿ ಗುರುದೇವ್, ಮಾಜಿ
ಶಾಸಕ ಗುರುದೇವ್ ಪತ್ನಿ