Advertisement

ಶಾಲಾ-ಕಾಲೇಜು ಶುರು; ಸಂಭ್ರಮ ಜೋರು

04:07 PM Jan 02, 2021 | |

ದಾವಣಗೆರೆ: ಕೋವಿಡ್ ಭೀತಿಯಿಂದ ಕಳೆದ ಒಂಭತ್ತು ತಿಂಗಳುಗಳಿಂದ ಬಾಗಿಲು ಹಾಕಿದ್ದ ಶಾಲಾ-ಕಾಲೇಜುಗಳು ಹೊಸ ವರ್ಷದ ಆರಂಭದ ದಿನವಾದ ಶುಕ್ರವಾರ ಬಾಗಿಲು ತೆರೆದುವಿದ್ಯಾರ್ಥಿಗಳನ್ನು ಸ್ವಾಗತಿಸಿದವು. ಪ್ರಾಥಮಿಕ ಶಾಲಾ ಮಕ್ಕಳು ಭಾರೀ ಉತ್ಸಾಹ, ಹುಮ್ಮಸ್ಸಿನಿಂದ ಶಾಲೆಗಳತ್ತಹೆಜ್ಜೆ ಹಾಕಿದರೆ, ಕಾಲೇಜು ವಿದ್ಯಾರ್ಥಿಗಳಲ್ಲಿ ಈ ಉತ್ಸಾಹ ಕಣ್ಮರೆಯಾಗಿತ್ತು.

Advertisement

ಶಾಲಾ ಆವರಣದಲ್ಲಿ ಆರಂಭವಾಗಿರುವವಿದ್ಯಾಗಮ ಶಿಕ್ಷಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳುಬಂದಿದ್ದರು. ಶಾಲಾರಂಭದ ಮೊದಲ ದಿನವೇಸಾವಿರಾರು ಪಾಲಕರು ತಮ್ಮ ಮಕ್ಕಳನ್ನು ಶಾಲೆವರೆಗಬಿಟ್ಟು, ಶಿಕ್ಷಕರಿಗೆ ಒಪ್ಪಿಗೆ ಪತ್ರವನ್ನೂ ಕೊಟ್ಟು ಹೋದರು.ಇತ್ತ ಮಕ್ಕಳು ಸಹ ಅತಿ ಉತ್ಸಾಹ, ಲವಲವಿಕೆಯಿಂದ ವಿದ್ಯಾಗಮದಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಶಿಕ್ಷಣಾಸಕ್ತಿ ಹಾಗೂ ಶಾಲಾ ಪ್ರೀತಿ ಪ್ರದರ್ಶಿಸಿದರು.

ಶಿಕ್ಷಕರು ಹಲವೆಡೆ 10-15 ಮಕ್ಕಳ ತಂಡಗಳನ್ನು ಮಾಡಿ ಒಂದೊಂದು ದಿನ ಒಂದು ತರಗತಿಯಮಕ್ಕಳಿಗೆ ವೇಳಾಪಟ್ಟಿವಾರು 45 ನಿಮಿಷಗಳ ಅವಧಿಪಾಠ ಮಾಡುವ ವ್ಯವಸ್ಥೆ ಮಾಡಿಕೊಂಡರು.ಹತ್ತನೇ ತರಗತಿ ಮಕ್ಕಳು ಸಹ ಮೊದಲ ದಿನವೇಹೆಚ್ಚಿನ ಸಂಖ್ಯೆಯಲ್ಲಿ ಪಾಠ ಕೇಳಲು ಆಗಮಿಸಿದ್ದರು.ಆದರೆ ಬಹುತೇಕ ಶಾಲೆಗಳಲ್ಲಿ ಮೊದಲ ದಿನಪಾಠ ಮಾಡದೆ ಕೊರೊನಾ ಕಾರಣದಿಂದಾಗಿಕಡಿತಗೊಂಡಿರುವ ಪಠ್ಯದ ವಿವರ, ತರಗತಿಯವೇಳಾಪಟ್ಟಿ, ಕೊರೊನಾ ಸುರಕ್ಷತಾ ಕ್ರಮಗಳ ಪಾಲನೆಸೇರಿದಂತೆ ಇನ್ನಿತರ ಸಾಮಾನ್ಯ ಜ್ಞಾನದ ವಿಚಾರಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.

ಕಾಲೇಜು ವಿದ್ಯಾರ್ಥಿಗಳ ನಿರಾಸಕ್ತಿ: ಶಾಲಾರಂಭದಮೊದಲ ದಿನ ಪ್ರಾಥಮಿಕ ಹಾಗೂ ಪ್ರೌಢ  ಶಾಲೆಗಳಲ್ಲಿ ಕಂಡು ಬಂದ ಉತ್ಸಾಹ ಪದವಿಪೂರ್ವಕಾಲೇಜುಗಳಲ್ಲಿ ಕಂಡು ಬರಲಿಲ್ಲ. ಸರ್ಕಾರಿ ಕಾಲೇಜುಗಳಲ್ಲಂತೂ ಬೆರಳೆಣಿಕೆ ಸಂಖ್ಯೆಯವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು. ಬಂದಂಥವಿದ್ಯಾರ್ಥಿಗಳಿಗೆ ಉಪನ್ಯಾಸಕರು ಕೋವಿಡ್‌ ಸುರಕ್ಷತಾ ಕ್ರಮಗಳ ಪಾಲನೆಯೊಂದಿಗೆ ಬರಮಾಡಿಕೊಂಡುಮುಂದಿನ ದಿನಗಳಲ್ಲಿ ನಿರಂತರವಾಗಿ ತರಗತಿಗೆಹಾಜರಾಗುವಂತೆ, ಕಾಲೇಜಿಗೆ ಬಾರದೆ ಇರುವವಿದ್ಯಾರ್ಥಿಗಳನ್ನು ಕಾಲೇಜಿಗೆ ಕರೆತರುವಂತೆ ಸಲಹೆ ನೀಡಿದರು.

ಕೋವಿಡ್ ಸುರಕ್ಷತಾ ಕ್ರಮ: ಶಾಲಾ-ಕಾಲೇಜುಆರಂಭದ ಮೊದಲ ದಿನ ಸರ್ಕಾರದ ನಿರ್ದೇಶನದಂತೆ ಎಲ್ಲ ವಿದ್ಯಾರ್ಥಿ ಪಾಲಕರಿಂದಒಪ್ಪಿಗೆ ಪತ್ರ ಸಂಗ್ರಹಿಸಲಾಯಿತು. ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಶಾಲೆಗೆ ಬರಲು ಸೂಚಿಸಲಾಯಿತು. ಶಾಲಾ ಆವರಣ ಪ್ರವೇಶಿಸುವಮುನ್ನವೇ ಎಲ್ಲರೂ ಕಡ್ಡಾಯವಾಗಿ ಸ್ಯಾನಿಟೈಸರ್‌ ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಲು, ಥರ್ಮಲ್‌ ಸ್ಕ್ಯಾನಿಂಗ್‌ ಹಾಗೂ ಒಳಗಡೆ ದೈಹಿಕ ಅಂತರ ಕಾಯ್ದುಕೊಳ್ಳುವ್ಯವಸ್ಥೆ ಮಾಡಲಾಗಿತ್ತು. ಇವುಗಳ ಜತೆಗೆ ಯಾವುದೇವಿದ್ಯಾರ್ಥಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡಬಂದರೆ ಅಂಥ ವಿದ್ಯಾರ್ಥಿಗಳ ಆರೈಕೆಗಾಗಿ ಕೆಲವುಶಾಲೆಗಳಲ್ಲಿ ಪ್ರತ್ಯೇಕ ಐಸೋಲೇಶನ್‌ ಕೊಠಡಿಗಳನ್ನು ಸಹ ಕಾಯ್ದಿರಿಸಲಾಗಿತ್ತು. ಒಟ್ಟಾರೆ ಬಹು ತಿಂಗಳ ಬಳಿಕ ಶಾಲಾ-ಕಾಲೇಜು ಪುನರಾರಂಭದ ಮೊದಲ ದಿನ ವಿದ್ಯಾರ್ಥಿಗಳುಹಾಗೂ ವಿದ್ಯಾರ್ಥಿ ಪಾಲಕರು ಅತ್ಯುತ್ಸಾಹ ತೋರಿದರು.

Advertisement

ಖಾಸಗಿ ಶಾಲಾ-ಕಾಲೇಜುಗಳಲ್ಲಿ ಭರಪೂರ ವಿದ್ಯಾರ್ಥಿಗಳು :

ಜಿಲ್ಲೆಯಲ್ಲಿ ಬಹುತೇಕ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಹೊಸ ವರ್ಷದ ಮೊದಲ ದಿನ ಹೆಚ್ಚಿನಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಹಲವು ಖಾಸಗಿ-ಶಾಲಾ ಕಾಲೇಜುಗಳು ಡಿಸೆಂಬರ್‌ತಿಂಗಳ ಆರಂಭದಿಂದಲೇ ತರಗತಿಗಳನ್ನುಆರಂಭಿಸುತ್ತಿದ್ದುದರಿಂದ ವಿದ್ಯಾರ್ಥಿಗಳು ಎಂದಿನಂತಜ. 1 ರಂದು ಸಹ ತರಗತಿಗಳಿಗೆ ಹಾಜರಾಗಿ ಪಾಠಪ್ರವಚನಗಳಲ್ಲಿ ಭಾಗಿಯಾದರು. ಹೀಗಾಗಿ ಸರ್ಕಾರಿಶಾಲೆಗಳಿಗೆ ಹೋಲಿಸಿದರೆ ಖಾಸಗಿ ಶಾಲೆಗಳಲ್ಲಿವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು.

ಜಿಲ್ಲೆಯಲ್ಲಿ ಅಂದಾಜು 16,000 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿದ್ದು,ಇವರಲ್ಲಿ ಮೂರು ಸಾವಿರಕ್ಕೂ ಹೆಚ್ಚುವಿದ್ಯಾರ್ಥಿಗಳು ಮೊದಲ ದಿನ ಬಂದಿದ್ದರು.ಮೊದಲ ದಿನ ತರಗತಿ ನಡೆಸದೆ ಅವರನ್ನುಸ್ವಾಗತಿಸುವ, ಧೈರ್ಯ ತುಂಬುವ, ಕೋವಿಡ್‌ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸುವ ಕಾರ್ಯ ಮಾಡಲಾಯಿತು. ಸೋಮವಾರದಿಂದವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. –ನಾಗರಾಜಪ್ಪ, ಉಪನಿರ್ದೇಶಕರು, ಪಪೂ ಶಿಕ್ಷಣ ಇಲಾಖೆ

ಶಾಲಾರಂಭದ ಮೊದಲ ದಿನವೇ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆಆಗಮಿಸಿದ್ದರು. ಶಾಲೆಯ ಒಟ್ಟು 172ಮಕ್ಕಳಲ್ಲಿ 150 ಮಕ್ಕಳು ಹಾಜರಾಗಿದ್ದರು.ಮೊದಲ ದಿನ ಅವರನ್ನು ಕೋವಿಡ್‌ ಸುರಕ್ಷತಾಕ್ರಮಗಳೊಂದಿಗೆ ಬರಮಾಡಿಕೊಳ್ಳಲಾಯಿತು.ಪಠ್ಯದ ವಿವರ, ವೇಳಾಪಟ್ಟಿ ಮಾಹಿತಿನೀಡಲಾಯಿತು. ಸ್ವತ್ಛ, ಸುಂದರ ಶಾಲಾ ಆವರಣದಲ್ಲಿಯೇ ವಿದ್ಯಾಗಮಮುಂದುವರಿಸಿದ್ದರಿಂದ ವಿದ್ಯಾಗಮಕ್ಕೆ ಬರುವವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದೆ. –ಸುರೇಶ ಎಂ., ಮುಖ್ಯಶಿಕ್ಷಕರು,

ಉನ್ನತೀಕರಿಸಿದ ಪ್ರೌಢಶಾಲೆ, ನಿಟುವಳ್ಳಿ

ಮೊದಲ ದಿನ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳುಬಂದಿಲ್ಲ. ಬಂದಷ್ಟು ವಿದ್ಯಾರ್ಥಿಗಳನ್ನಕೋವಿಡ್‌ ಸುರಕ್ಷತಾ ಕ್ರಮಗಳೊಂದಿಗೆ ಬರಮಾಡಿಕೊಂಡು ಅವರಿಗೆ ಒಂದೆರಡು ತರಗತಿ ನಡೆಸಲಾಯಿತು. ಜತೆಗೆ ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡಲಾಯಿತು. -ಶಿವಪ್ಪ ಎನ್‌. ಪ್ರಾಚಾರ್ಯರು, ಸರ್ಕಾರಿ ಪಪೂ ಕಾಲೇಜು, ಹೈಸ್ಕೂಲ್‌ ಮೈದಾನ, ದಾವಣಗೆರೆ

ಈ ವರ್ಷ ಶಾಲೆ ಆರಂಭವಾಗದೇ ಪೋಷಕರಿಗೆ ಮಕ್ಕಳ ಭವಿಷ್ಯದಬಗ್ಗೆ ಭಾರಿ ಚಿಂತೆ ಕಾಡುತ್ತಿತ್ತು. ಸರ್ಕಾರಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನುಆರಂಭಿಸಿರುವುದು, ಜತೆಗೆ ಶಾಲಾ ಆವರಣದಲ್ಲಿಯೇ ವಿದ್ಯಾಗಮ ಶುರುಮಾಡಿರುವುದು ಸ್ವಾಗತಾರ್ಹ. ಜಮೀಲ್‌ ಅಹ್ಮದ್‌, ಪೋಷಕರುಈ ವರ್ಷ ಶಾಲೆ ಆರಂಭವಾಗದೇಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಭಾರಿ ಚಿಂತೆ ಕಾಡುತ್ತಿತ್ತು. ಸರ್ಕಾರಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನುಆರಂಭಿಸಿರುವುದು, ಜತೆಗೆ ಶಾಲಾ ಆವರಣದಲ್ಲಿಯೇ ವಿದ್ಯಾಗಮ ಶುರು ಮಾಡಿರುವುದು ಸ್ವಾಗತಾರ್ಹ. – ಜಮೀಲ್‌ ಅಹ್ಮದ್‌, ಪೋಷಕರು

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next