ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ‘ವಂಡರ್ ಬುಕ್ ಆಫ್ ರೆಕಾರ್ಡ್ಸ್ ಇಂಟರ್‌ನ್ಯಾಷನಲ್ ಸಾಧನೆ’ಯನ್ನು ಮಾಡಿದ್ದು, 999 ವಿದ್ಯಾರ್ಥಿಗಳು 57 ಸೆಕೆಂಡ್‌ಗಳಲ್ಲಿ ಪಿರಾಮಿಕ್ಸ್ ಕ್ಯೂಬ್ ಜೋಡಣೆಯನ್ನು ಮಾಡುವ ಮೂಲಕ ದಾಖಲೆಯ ಸಾಧನೆಯನ್ನು ಮಾಡಿದ್ದಾರೆ.
ವಂಡರ್ ಬುಕ್ ಆಫ್ ರೆಕಾರ್ಡ್ಸ್ ಮುಖ್ಯ ಸಂಯೋಜಕ ಬಿಂಗಿ ನರೇಂದರ್‌ಗೌಡ್ ಪರಿವೀಕ್ಷಣೆಯಲ್ಲಿ ಶಾಲೆಯ 999 ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಕ್ಯೂಬ್ ಆಕೃತಿಯಲ್ಲಿ ಸೇರಿ, ಪ್ರತಿಯೊಬ್ಬರು ಉತ್ಸಾಹದಿಂದ ಪಾಲ್ಗೊಂಡು ಕೇವಲ 57 ಸೆಕೆಂಡುಗಳಲ್ಲಿ ಕ್ಯೂಬ್ ಜೋಡಣೆಯನ್ನು ಮಾಡಿ ಉತ್ಕೃಷ್ಟಸಾಧನೆ ಗೈದು “ವಂಡರ್ ಬುಕ್‌ಆಫ್ ರೆಕಾರ್ಡ್ಸ್ ಇಂಟರ್‌ನ್ಯಾಷನಲ್’’ ದಾಖಲೆಯನ್ನು ಸಾಧಿಸಿದ್ದಾರೆ.
ವಿದ್ಯಾರ್ಥಿಗಳ ಈ ಅಮೋಘ ಸಾಧನೆಯನ್ನು ಪರಿವೀಕ್ಷಿಸಿದ ಬಿಂಗಿ ನರೇಂದರ್‌ಗೌಡ್ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿಸೂರಿಬಾಬು ಅವರಿಗೆ “ವಂಡರ್ ಬುಕ್ ಆಫ್ ರೆಕಾರ್ಡ್ಸ್ ಇಂಟರ್ ನ್ಯಾಷನಲ್”ಸಾಧನೆಯ ಪ್ರಶಸ್ತಿ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ನೆಕ್ಕಂಟಿ ಸೂರಿಬಾಬು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡಸೂಕ್ತ ಅವಕಾಶಗಳು ಹಾಗೂ ಮಾರ್ಗದರ್ಶನ ಲಭಿಸಿದರೆ, ಅಂತರಾಷ್ಟ್ರಿಯ ಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುವುದನ್ನು ವಿದ್ಯಾರ್ಥಿಗಳು ನಿರೂಪಿಸಿದ್ದು, ಭಾಗವಹಿಸಿದ 999 ವಿದ್ಯಾರ್ಥಿಗಳು ಕೇವಲ 57 ಸೆಕೆಂಡುಗಳಲ್ಲಿ ಕ್ಯೂಬ್ ಜೋಡಣೆಯನ್ನು ಮಾಡಿ ವಿಶಿಷ್ಟ ದಾಖಲೆಯನ್ನು ಸಾಧಿಸಿದ್ದು, ಈ ಸಾಧನೆಗೆ ಮಾರ್ಗದರ್ಶನ ನೀಡಿದ ಶಿಕ್ಷಕರು ಹಾಗೂ ಸಹಕಾರಮತ್ತು ಪ್ರೋತ್ಸಾಹವನ್ನು ನೀಡಿದ ಎಲ್ಲ ಪಾಲಕರಿಗೆ ಧನ್ಯವಾದ ತಿಳಿಸಿದರು.
ಸಂಸ್ಥೆಯ ಆಡಳಿತಾತ್ಮಕ ನಿರ್ದೇಶಕ ಹೆಚ್.ಕೆ.ಚಂದ್ರಮೋಹನ್, ಶೈಕ್ಷಣಿಕ ನಿರ್ದೇಶಕ ಶ್ರೀನಿವಾಸ್‌ಚೌದರಿ, ಸಂಯೋಜಕ ವಿಜಯಭಾಸ್ಕರ್, ಶಾಲೆ-ಕಾಲೇಜಿನ ಪ್ರಾಂಶುಪಾಲರು ಮತ್ತು ಶಾಲೆಯ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಹಾಗು ಪಾಲಕ ವೃಂದ ಮತ್ತು ವಿದ್ಯಾರ್ಥಿಗಳಿದ್ದರು.