Advertisement

ಅಂತಿಮ ಪದವಿ ಪರೀಕ್ಷೆ: ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಮಹತ್ವದ ತೀರ್ಪಿನಲ್ಲೇನಿದೆ?

11:43 AM Aug 28, 2020 | Team Udayavani |

ನವದೆಹಲಿ: ಕೋವಿಡ್ ವೈರಸ್ ಹಿನ್ನೆ;ಲೆಯಲ್ಲಿ ವಿಶ್ವವಿದ್ಯಾಲಯಗಳ ಅಂತಿಮ ವರ್ಷದ/ಸೆಮಿಸ್ಟರ್ ನ ಆನ್ ಲೈನ್/ ಆಫ್ ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಳ್ಳಿಹಾಕಿದ್ದು, ಯುಜಿಸಿ ನಿರ್ದೇಶನದಂತೆ ಪರೀಕ್ಷೆ ನಡೆಯಲಿ ಎಂದು ತಿಳಿಸಿದೆ. ಈ ಮೂಲಕ ಯುಜಿಸಿ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

Advertisement

ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೇ ಪದವಿ ಪರೀಕ್ಷೆ ಆಯೋಜನೆಗೆ ಸಂಬಂಧಿಸಿದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

ಸೆಪ್ಟೆಂಬರ್ 30ರೊಳಗೆ ದೇಶದೆಲ್ಲೆಡೆ ಅಂತಿಮ ವರ್ಷದ ಪರೀಕ್ಷೆಯನ್ನು ನಡೆಸುವಂತೆ ಯುಜಿಸಿ ಜುಲೈ 6ರಂದು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿತ್ತು. ಇದರ ವಿರುದ್ಧ ಹಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಪದವಿ ಅಂತಿಮ ಪರೀಕ್ಷೆ ನಡೆಸುವ ಬಗ್ಗೆ ತಜ್ಞರ ದೀರ್ಘ ಸಮಾಲೋಚನೆಯ ಬಳಿಕ ಅವರು ನೀಡಿದ್ದ ಶಿಫಾರಸ್ಸಿನ ಮೇರೆಗೆ ಜುಲೈ 6ರಂದು ನಿಯಮಾವಳಿಯನ್ನು ರೂಪಿಸಲಾಗಿತ್ತು ಎಂದು ಯುಜಿಸಿ ಸುಪ್ರೀಂಗೆ ಈ ಮೊದಲು ತಿಳಿಸಿತ್ತು. ಅಲ್ಲದೇ ಮಾರ್ಗಸೂಚಿ ಪ್ರಕಾರ ಅಂತಿಮ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ವಾದಿಸಿತ್ತು.

ಸುಪ್ರೀಂಕೋರ್ಟ್ ತೀರ್ಪಿನಲ್ಲೇನಿದೆ?

Advertisement

ಅಂತಿಮ ಪದವಿ ಪರೀಕ್ಷೆ ಯಜಿಸಿ ನಿಯಮಾವಳಿ ಕಡ್ಡಾಯ. ಅಷ್ಟೇ ಅಲ್ಲ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳಿಗೆ ಪ್ರಮೋಷನ್(ಉತ್ತೀರ್ಣ) ನೀಡುವಂತಿಲ್ಲ ಎಂದು ತ್ರಿಸದಸ್ಯ ಪೀಠ ಸ್ಪಷ್ಟಪಡಿಸಿದೆ.

ಕೋವಿಡ್ 19 ಸೋಂಕಿನ ದೃಷ್ಟಿಕೋನದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯ ಅಧಿಕಾರ ಉಪಯೋಗಿಸಿಕೊಂಡು ರಾಜ್ಯಗಳು ಪರೀಕ್ಷೆಯನ್ನು ಮುಂದೂಡಬಹುದಾಗಿದೆ. ಒಂದು ವೇಳೆ ಯುಜಿಸಿಎ ಸೆ.30ರ ಗಡುವನ್ನು ಮೀರಿ ಪದವಿ ಅಂತಿಮ ಪರೀಕ್ಷೆಯನ್ನು ಮುಂದೂಡಬೇಕೆಂದು ರಾಜ್ಯಗಳು ಬಯಸಿದರೆ, ಅಂತಹ ರಾಜ್ಯಗಳು ಯುಜಿಸಿಯನ್ನು ಸಂಪರ್ಕಿಸಿ ಹೊಸ ದಿನಾಂಕವನ್ನು ಗೊತ್ತುಪಡಿಸಿಕೊಂಡು ಪ್ರಕಟಿಸಲಿ ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next