Advertisement

ಕರ್ನಾಟಕದಲ್ಲಿ ಸಾಮೂಹಿಕ ಶ್ವಾನ ಸಂಹಾರ: ಸುಪ್ರೀಂ ಕೋರ್ಟ್‌ ವಿಚಾರಣೆ

11:54 AM Nov 17, 2018 | Team Udayavani |

ಹೊಸದಿಲ್ಲಿ : ಸಾಮೂಹಿಕ ಶ್ವಾನ ಸಂಹಾರದ ಆರೋಪದ ಮೇಲೆ ಕರ್ನಾಟಕದ ಮುನಿಸಿಪಲ್‌ ಕೌನ್ಸಿಲ್‌ ಒಂದರ ಮುಖ್ಯ ಅಧಿಕಾರಿ ಮತ್ತು ಓರ್ವ ಖಾಸಗಿ ಗುತ್ತಿಗೆದಾರನ ವಿರುದ್ಧ  ಕೋರ್ಟ್‌ ನಿಂದನೆಯನ್ನು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಇಂದು ಒಪ್ಪಿಕೊಂಡಿತು. 

Advertisement

ಜಸ್ಟಿಸ್‌ ಎನ್‌ವಿ ರಮಣ ಮತ್ತು ಎಂ ಎಂ ಶಾಂತನಗೌಡರ್‌ ಅವರನ್ನು ಒಳಗೊಂಡ ಪೀಠವು ಸಕಲೇಶಪುರದ ಚೀಫ್ ಆಫೀಸರ್‌ ವಿಲ್ಸನ್‌ ವಿಟಿ ಮತ್ತು ಖಾಸಗಿ ಗುತ್ತಿಗೆದಾರ ವಿ ಜಾರ್ಜ್‌ ರಾಬರ್ಟ್‌ ಅವರಿಗೆ ನೊಟೀಸ್‌ ಜಾರಿ ಮಾಡಿ ನಾಲ್ಕು ವಾರಗಳ ಒಳಗೆ ಉತ್ತರಿಸುವಂತೆ ಆದೇಶಿಸಿತು.

ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿರುವ ಉತ್ತರದಾಯಿಗಳ ವಿರುದ್ಧ ಕೋರ್ಟ್‌ ನಿಂದನೆಯ ಕ್ರಮ ಜರುಗಿಸುವಂತೆ ಅರ್ಜಿದಾರ, ಪ್ರಾಣಿ ಹಕ್ಕು ಕಾರ್ಯಕರ್ತ ನವೀನ್‌ ಕಾಮತ್‌ ಅವರನ್ನು ಪ್ರತಿನಿಧಿಸಿದ ವಕೀಲ ಸಿದ್ಧಾರ್ಥ ಗರ್ಗ್‌ ಆಗ್ರಹಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next