ಮಣಿಪಾಲ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಅಡಚಣೆಯಲ್ಲಿವೆ ಎಂದು ವರದಿಯಾಗಿದೆ.
ಆದರೆ ಎಟಿಎಂ ಮತ್ತು ಪಿಓಎಸ್ ಯಂತ್ರಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. ತಾಂತ್ರಿಕ ಸಂಪರ್ಕ ಸಮಸ್ಯೆಯಿಂದಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ವಿಳಂಬವಾಗುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ನಲ್ಲಿ ತಿಳಿಸಿದೆ.
ಎಟಿಎಂ ಮತ್ತು ಪಿಓಎಸ್ ಹೊರತುಪಡಿಸಿ ಎಲ್ಲ ಚಾನಲ್‌ಗಳ ಮೇಲೆ ಇದು ಪರಿಣಾಮ ಬೀರಿವೆ. ಗ್ರಾಹಕರಿಗೆ ತಾಳ್ಮೆಯಿಂದಿರಿ ಎಂದು ಬ್ಯಾಂಕ್ ಮನವಿ ಮಾಡಿದ್ದು, ಶೀಘ್ರದಲ್ಲೇ ಯಥಾಸ್ಥಿತಿಗೆ ಬರಲಿದೆ ಎಂದು ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.
ಎಸ್‌ಬಿಐ ದೇಶದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದೆ. ಆಸ್ತಿ, ಠೇವಣಿ, ಶಾಖೆಗಳು, ಗ್ರಾಹಕರು ಮತ್ತು ಉದ್ಯೋಗಿಗಳ ವಿಷಯದಲ್ಲಿ ಎಸ್‌ಬಿಐ ದೇಶದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಎಂದೆನಿಸಿಕೊಂಡಿದೆ. ಇದು ದೇಶದ ಅತಿ ಹೆಚ್ಚು ಸಾಲ ನೀಡುವ ಬ್ಯಾಂಕ್ ಆಗಿದೆ. 30 ಜೂನ್ 2020ರ ವೇಳೆಗೆ ಬ್ಯಾಂಕ್ ಒಟ್ಟು 34 ಲಕ್ಷ ಕೋಟಿ ರೂ. ಠೇವಣಿ ಇತ್ತು. ಕರೆಂಟ್ ಮತ್ತು ಸೇವಿಂಗ್ಸ್ ಅಕೌಂಟ್ (ಸಿಎಎಸ್ಎ) ಅನುಪಾತವು ಶೇ. 45ಕ್ಕಿಂತ ಹೆಚ್ಚಾಗಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ದೇಶಾದ್ಯಂತ 22 ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಎಸ್‌ಬಿಐ 30ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವದಲ್ಲಿದೆ. 6.6 ಕೋಟಿಗೂ ಹೆಚ್ಚು ಎಸ್‌ಬಿಐ ಗ್ರಾಹಕರು ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೌಲಭ್ಯಗಳನ್ನು ಬಳಸುತ್ತಾರೆ.