Advertisement

ಸವಿತಾ ಸಮಾಜ ಮೀಸಲಾತಿಗೆ ಹೋರಾಟ: ಶ್ರೀ

02:22 PM Mar 08, 2021 | Team Udayavani |

ಯಳಂದೂರು: ತುಳಿತಕೊಳಗಾಗಿರುವ ಸವಿತಾ ಸಮಾಜಕ್ಕೆ ಮೀಸಲಾತಿ ಕಲ್ಪಿಸಬೇಕು. ಈ ಬಗ್ಗೆ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದುಕಲಬುರಗಿ ಜಿಲ್ಲೆ ವಾಡಿಯ,  ಕೊಂಚೂರು ಗ್ರಾಮದ ರಾಜ್ಯ ಸವಿತಾ ಪೀಠದ ಮಾಠಾಧ್ಯಕ್ಷ ಶ್ರೀಧರಾನಂದ ಸ್ವಾಮೀಜಿ ತಿಳಿಸಿದರು.

Advertisement

ಪಟ್ಟಣದ ಬಳೇಪೇಟೆಯಲ್ಲಿರುವ ಸವಿತಾ ಭವನದಲ್ಲಿ ಸವಿತಾ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ನಮಗೆ 10 ವರ್ಷ ಕಾಲ ಶೈಕ್ಷಣಿಕ, ಉದ್ಯೋಗ ಮೀಸಲಾತಿ ನೀಡಬೇಕು. ಈ ಬಗ್ಗೆ ರಾಜ್ಯಾದ್ಯಂತ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಲಾಗುತ್ತಿದೆ.ಇದರ ಪ್ರಥಮ ಹಂತವಾಗಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗಳಿಗೆ ಮನವಿ ಸಲ್ಲಿಸಿ, ಈ ಬಗ್ಗೆ ಗಮನ ಸೆಳೆಯಲಾಗುವುದು ಎಂದರು.

ಆರ್ಥಿಕವಾಗಿ ಸಂಘಟನೆಗಳನ್ನು ಗಟ್ಟಿಗೊಳಿಸಬೇಕು. ಮೀಸಲಾತಿ ಬಗ್ಗೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿರಾಜ್ಯ ಪ್ರವಾಸ ಕೈಗೊಂಡಿದ್ದು, ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಬಗ್ಗೆಮುಖ್ಯ ಮಂತ್ರಿಗಳು, ಮಂತ್ರಿಗಳು, ಸಂಸದರು, ಶಾಸಕರ ಗಮನ ಸೆಳೆಯಲು ಸಮುದಾಯ ಕೈಜೋಡಿಸ ಬೇಕು ಎಂದರು. ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಪಿ.ಸಿ. ಶ್ರೀಕಂಠಸ್ವಾಮಿಮಾತನಾಡಿ, ನಮ್ಮ ಸಮಾಜದಅಭಿವೃದ್ಧಿಗೆ ಶ್ರೀಗಳ ಪಾತ್ರ ಪ್ರಮುಖವಾಗಿದೆ. ಸಂಘಟನೆಗಳು ಅವರ ಕೈ ಬಲಪಡಿಸಬೇಕಿದ್ದು, ಈ ನಿಟ್ಟಿನಲ್ಲಿ ಯಳಂದೂರು ತಾಲೂಕು ಸಂಘವೂ ತಮ್ಮ ಜೊತೆಗಿದೆ ಎಂದರು.

ಈ ವೇಳೆ ಶಿಕ್ಷಕ, ಕವಿ ಗುಂಬಳ್ಳಿ ಬಸವ ರಾಜು ಸವಿತಾ ಸಮಾಜದ ಕೋಶಾಧ್ಯಕ್ಷ ರಾಮಣ್ಣ, ರಾಚಶೆಟ್ಟಿ, ನಾಗೇಶ್‌, ಕಾಂತರಾಜು, ನಿಂಗರಾಜು, ರಾಜೇಶ್‌, ಬಸವರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next