Advertisement

ಜಾನಪದ ಕಲೆ ಉಳಿಸಿ-ಬೆಳೆಸಿ

01:16 PM Apr 07, 2018 | |

ನಿಡಗುಂದಿ: ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಭಾಗದ ಜಾನಪದ ಕಲೆ ಅಳಿವಿನಂಚಿಗೆ ತಲುಪಿದ್ದು ಗ್ರಾಮೀಣ ಸೊಗಡು ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ ಎಂದು ನಿವೃತ್ತ ಪ್ರಾಚಾರ್ಯ ಶ್ರೀಶೈಲಪ್ಪ ರೇವಡಿ ಹೇಳಿದರು. ಪಟ್ಟಣದ ರುದ್ರೇಶ್ವರ ಸಂಸ್ಥಾನ ಮಠದಲ್ಲಿ ಜಾತ್ರೆ ಅಂಗವಾಗಿ ನಡೆದ ಜಾನಪದ ಕಲಾಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿರುವ ಪರಿಣಾಮ ನಮ್ಮ ಗ್ರಾಮೀಣ ಜಾನಪದ ಕಲೆಗಳು ವಿನಾಶದತ್ತ ಹೆಜ್ಜೆಹಾಕುತ್ತಿವೆ. ಜಾನಪದ ಕಲೆ ಕೇವಲ ಮನರಂಜನೆ ನೀಡುವಂತದ್ದಲ್ಲ ಅದರಲ್ಲಿ ಸಾಕಷ್ಟು ವಿಚಾರಧಾರೆಗಳು ಬದುಕುವ ದಾರಿಯನ್ನು
ತೋರಿಸುವ ಮಾರ್ಗಗಳು ಅಡಿಗಿದ್ದು ಅವುಗಳ ಬೆಳವಣಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್‌.ಡಿ. ಕೃಷ್ಣಮೂರ್ತಿ ಮಾತನಾಡಿ, ಜಾನಪದ ಕೇವಲ ಒಬ್ಬರಿಂದ ಕೂಡಿದ್ದಲ್ಲ. ಅದು ಒಬ್ಬರಿಂದ ಒಬ್ಬರಿಗೆ ರಚಿತವಾದ ಕಲೆ, ಕಲೆಗಳು ಸಾರದಲ್ಲಿ ಬದುಕಿನ ಉತ್ತಮ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಜಾನಪದ ಕಲೆಗಳನ್ನು ಕಲಿತವರು ಆರೋಗ್ಯ ಮತ್ತು ಸುಂದರ ಜೀವನ ನಡೆಸುತ್ತಿದ್ದಾರೆ. ಕಲಾ ಪ್ರದರ್ಶನಗಳು ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ
ಸಕ್ರೀಯವಾಗಿವೆ. ಅದನ್ನು ಎಲ್ಲರೂ ಕೂಡಿಕೊಂಡು ಉಳಿಸಿ ಬೆಳೆಸುವ ಅವಶ್ಯಕತೆಯಿದೆ ಎಂದರು.

ನಿಡಗುಂದಿ ಕಜಾಪ ಅಧ್ಯಕ್ಷ ವೈ.ಎಸ್‌. ಗಂಗಶೆಟ್ಟಿ ಮಾತನಾಡಿ, ಯುವಕರು, ಚಿಣ್ಣರ ಕೈಯಲ್ಲಿ ಮೊಬೈಲ್‌ಗಳನ್ನು ನೀಡಿ ಸಮಾಧಾನ ಮಾಡಲು ಮುಂದಾಗುತ್ತಿದ್ದೇವೆ. ಆದರೆ ಆಗಿನ ಸಮಯದ ತಂತ್ರಜ್ಞಾನದಲ್ಲಿ ಹೊರಡುವ ಅನೇಕ ವಿಷಯಗಳು ಪೂರಕಕ್ಕಿಂತ ಮಗುವಿನ ಮನಸ್ಸಿನ ಮೇಲೆ ಮಾರಕದ ಪರಿಣಾಮಗಳು ಹೆಚ್ಚಾಗಿತ್ತವೆ. ಆದರೆ, ನಾವೆಲ್ಲ ಅವುಗಳನ್ನು ಗಮನಿಸದ ಪರಿಣಾಮ ಮಕ್ಕಳಲ್ಲಿ ಸಂಸ್ಕಾರದ ಅರಿವು ಕಡಿಮೆಯಾಗುತ್ತಿವೆ ಎಂದರು. 

ರುದ್ರೇಶ್ವರ ಮಠದ ರುದ್ರಮುನಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿವಾನಂದ ಅವಟಿ, ರಾಜಶೇಖರ ಹೆಂಡಿ, ಈರಣ್ಣ ಪಟ್ಟಣಶೆಟ್ಟಿ, ಈಶಪ್ಪ ಹೆಗ್ಗೊಂಡ, ಮುರುಗೆಪ್ಪ ಸಜ್ಜನ, ಬಸವರಾಜ ಸಜ್ಜನ, ಬಸವರಾಜ ಹೆಂಡಿ, ಶಿವಲಿಂಗಪ್ಪ ಪಟ್ಟಣಶೆಟ್ಟಿ, ಶಂಕರ ರೇವಡಿ, ಸುಭಾಷ ಅವಟಿ, ಕಮಲಾ ಗುಡದಿನ್ನಿ ಸೇರಿದಂತೆ ಮುಂತಾದವರಿದ್ದರು. ಎಸ್‌.ಎಸ್‌. ಹುಬ್ಬಳ್ಳಿ ಸ್ವಾಗತಿಸಿದರು. ಎಸ್‌.
ಎಚ್‌. ದಡೇದ ನಿರೂಪಿಸಿದರು. ಆರ್‌.ಎಸ್‌. ಕಮತ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next