Advertisement

Sirsi: ಕರ್ನಾಟಕ ಜಾನಪದ ಪರಿಷತ್‌ನ ನೂತನ ಜಿಲ್ಲಾಧ್ಯಕ್ಷರಾಗಿ ಡಾ. ವೆಂಕಟೇಶ ನಾಯ್ಕ ಆಯ್ಕೆ

06:02 PM May 15, 2024 | Team Udayavani |

ಶಿರಸಿ: ಪ್ರತಿಷ್ಟಿತ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ, ಶಿರಸಿ ಮಾರಿಕಾಂಬಾ ದೇವಾಲಯದ ನಿಕಟಪೂರ್ವ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ಅವರನ್ನು ಕರ್ನಾಟಕ ಜಾನಪದ ಪರಿಷತ್‌ನ ನೂತನ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾದ ಬಗ್ಗೆ ಪರಿಷತ್‌ನ ಕಾರ್ಯಾಧ್ಯಕ್ಷ ಪ್ರೊ. ಹಿ.ಚಿ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬುಡಕಟ್ಟು, ಜಾನಪದ ಹಾಗೂ ಜನಾಂಗೀಯ ಅಧ್ಯಯನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜಿಲ್ಲೆಯ ಗ್ರಾಮೀಣ ಜಾನಪದ ಸಂಸ್ಕೃತಿಯನ್ನು ಪೋಷಿಸುವ ಪರಂಪರೆಯ ಸಂವರ್ಧನೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳ ಪ್ರಮುಖ ಆಶಯವನ್ನು ಇರಿಸಿಕೊಂಡು ಜಾನಪದ ಕ್ಷೇತ್ರಕ್ಕೆ ಅಮೂಲ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಡಾ. ವೆಂಕಟೇಶ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಜಾನಪದ ಪರಿಷತ್ 1979 ರಿಂದ ಕನ್ನಡದ ಲೇಖಕರು ಜಾನಪದ ವಿದ್ವಾಂಸ, ನಿವೃತ್ತ ಐ.ಎ.ಎಸ್. ಅಧಿಕಾರಿ ನಾಡೋಜ ಎಚ್.ಎಲ್. ನಾಗೇಗೌಡರ ಆಸಕ್ತಿಯ ಫಲವಾಗಿ ಸ್ಥಾಪನೆಗೊಂಡಿದ್ದು ದೇಶದಲ್ಲಿಯೇ ಅತ್ಯಂತ ಅಪರೂಪದ ಜಾನಪದೀಯ ವೈಶಿಷ್ಟ್ಯಗಳಿಂದ ಕೂಡಿದ ಸಂಸ್ಥೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next