Advertisement

ದುಬಾೖ ನಗರಿಗೆ ಸೌದಿ ಸವಾಲು

02:21 AM Feb 17, 2021 | Team Udayavani |

ರಿಯಾದ್‌: ತನ್ನ ದೇಶದ ಆರ್ಥಿಕ ಲಾಭ ಬೇರೆ ದೇಶಗಳಿಗೆ ಹರಿದು ಹೋಗುವುದನ್ನು ಸಾಧ್ಯವಾದಷ್ಟು ತಗ್ಗಿಸಲು ಹಾಗೂ ದೇಶೀಯ ಮಟ್ಟದಲ್ಲಿ ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಲು ಸೌದಿ ಅರೇಬಿಯಾ ಹೊಸತೊಂದು ಹೆಜ್ಜೆಯ  ನ್ನಿಟ್ಟಿದೆ. ಸೌದಿ ಅರೇಬಿಯಾ ಇಟ್ಟಿರುವ ಈ ಹೊಸ ಹೆಜ್ಜೆ ಪಕ್ಕದ ರಾಷ್ಟ್ರವಾದ ಯು.ಎ.ಇ.ನ ಪ್ರಮುಖ ನಗರ ದುಬಾೖಗೆ ಹೊಸ ಸವಾಲಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Advertisement

ಏನಿದು ಸವಾಲು?: ಸೌದಿ ಅರೇಬಿಯಾವನ್ನು ಹೊರತುಪಡಿಸಿದಂತೆ ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿರುವ ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳು ಆದಷ್ಟು ಬೇಗನೇ ತಮ್ಮ ಕಚೇರಿಗಳನ್ನು ಸೌದಿಗೆ ವರ್ಗಾಯಿಸುವಂತೆ ಅಲ್ಲಿನ ಸರಕಾರ ಒತ್ತಡ ಹೇರಲಾರಂಭಿಸಿದೆ. ಕಚೇರಿಗಳ ಸ್ಥಳಾಂತರಕ್ಕೆ ಇನ್ನು 3 ವರ್ಷಗಳ ಗಡುವು ನೀಡಲಾಗಿದೆ. 2024ರ ಜ. 1ರೊಳಗೆ ತಮ್ಮ ಕಚೇರಿಗಳನ್ನು ಸೌದಿಗೆ ಸ್ಥಳಾಂತರಿಸುವ ಕಂಪೆನಿಗಳೊಂದಿಗೆ ಮಾತ್ರ ತನ್ನ ವ್ಯಾವಹಾರಿಕ ಒಪ್ಪಂದವನ್ನು ಮುಂದುವರಿಸುವುದಾಗಿ ಸರಕಾರ ಖಡಾಖಂಡಿತವಾಗಿ ಹೇಳಿದೆ.

ರಿಯಾದ್‌ ಅಭಿವೃದ್ಧಿಗೆ ಪಣ: ಹೀಗೆ ಸೌದಿಗೆ ಕಾಲಿಡುವ ಹೊಸ ಕಂಪೆನಿಗಳಿಗೆ ಜಾಗ ಮಾಡಿಕೊಡಲು ರಾಜಧಾನಿ ರಿಯಾದ್‌ ನಗರವನ್ನು ದುಪ್ಪಟ್ಟು ವಿಶಾಲಗೊಳಿಸಲು ಹಾಗೂ ಅದನ್ನು ಜಾಗತಿಕ ವ್ಯಾಪಾರದ ಸ್ವರ್ಗವಾಗಿಸಲು ಅಲ್ಲಿನ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌, ಇದಕ್ಕಾಗಿ 58 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next