Advertisement

ಕತಾರ್‌ ಏರ್‌ ವೇಸ್‌ ಲೈಸನ್ಸ್‌ ರದ್ದು ಮಾಡಿದ ಸೌದಿ ಅರೇಬಿಯ

03:37 PM Jun 06, 2017 | Team Udayavani |

ರಿಯಾಧ್‌ : ಸೌದಿ ಆರೇಬಿಯ ಇಂದು ಕತಾರ್‌ ಏರ್‌ ವೇಸ್‌ ನ ನಿರ್ವಹಣಾ ಪರವಾನಿಗೆಯನ್ನು ರದ್ದು ಮಾಡಿದೆಯಲ್ಲದೆ ಮುಂದಿನ 48 ತಾಸುಗಳ ಒಳಗೆ ತನ್ನ ಕಚೇರಿಗಳನ್ನು ಮುಚ್ಚುವಂತೆ ಅದಕ್ಕೆ ಆದೇಶ ನೀಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸೌದಿ ಆರೇಬಿಯದ ಈ ಕ್ರಮದಿಂದಾಗಿ ಪ್ರಾದೇಶಿಕ ರಾಜತಾಂತ್ರಿಕ ಬಿಕ್ಕಟ್ಟು  ತೀವ್ರಗೊಂಡಂತಾಗಿದೆ.

Advertisement

ಎಸ್‌ಪಿಎ ಸುದ್ದಿ ಸಂಸ್ಥೆ ಪ್ರಕಟಿಸಿರುವ ಸೌದಿ ಆರೇಬಿಯದ ಅಧಿಕೃತ ಪ್ರಕಟನೆ ಹೀಗೆ ಹೇಳಿದೆ : “ಪೌರ ವಾಯುಯಾನದ ಮಹಾ ಪ್ರಾಧಿಕಾರವು ಕತಾರ್‌ ಏರ್‌ ವೇಸ್‌ ಗೆ ಮಂಜೂರಾಗಿದ್ದ ಎಲ್ಲ ಲೈಸನ್ಸ್‌ಗಳನ್ನು ರದ್ದು ಮಾಡಲು ನಿರ್ಧರಿಸಿದೆ ಮತ್ತು ಮುಂದಿನ 48 ತಾಸುಗಳ ಒಳಗೆ ತನ್ನ ಎಲ್ಲ ಕಚೇರಿಗಳನ್ನು ಮುಚ್ಚಬೇಕೆಂದು ಕತಾರ್‌ ಏರ್‌ ವೇಸ್‌ ಗೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next