Advertisement

Saudi Arabia; ಮರುಭೂಮಿಯಲ್ಲಿ ದಿಕ್ಕು ಕಾಣದೇ ಭಾರತದ ವ್ಯಕ್ತಿ ಮೃತ

01:52 AM Aug 26, 2024 | Team Udayavani |

ರಿಯಾದ್‌: ಸೌದಿ ಅರೇಬಿಯಾದ ರಬ್‌ ಅಲ್‌ ಖಲಿ ಮರುಭೂಮಿಯಲ್ಲಿ ಜಿಪಿಎಸ್‌ ಸಿಗ್ನಲ್‌ ಸಿಗದೆ, ಅಲೆದು ಸುಸ್ತಾಗಿ ನಿರ್ಜಲೀಕರಣ ದಿಂದಾಗಿ ತೆಲಂಗಾಣ ವ್ಯಕ್ತಿ ಹಾಗೂ ಆತನ ಸೂಡಾನ್‌ನ ಸಹಚರ ಮೃತಪಟ್ಟ ಘಟನೆ ನಡೆದಿದೆ.

Advertisement

ಮೃತ ವ್ಯಕ್ತಿ 27 ವರ್ಷದ ಮೊಹಮ್ಮದ್‌ ಶೆಹಜಾದ ತೆಲಂಗಾಣದ ಕರೀಮ್‌ನಗರದವರು. 3 ವರ್ಷಗಳಿಂದ ಸೌದಿ ಅರೇಬಿಯಾದ ಟೆಲಿಕಮ್ಯುನಿ ಕೇಶನ್‌ ಕಂಪೆನಿಯಲ್ಲಿ ಕೆಲಸ ಮಾಡು ತ್ತಿದ್ದರು. ತನ್ನ ಸೂಡಾನ್‌ ಸಹೋದ್ಯೋಗಿ ಜತೆ ಶೆಹಜಾದ ಮರುಭೂಮಿಯಲ್ಲಿ ಹಾದು ಬರುವಾಗ ಜಿಪಿಎಸ್‌ ಸಿಗ್ನಲ್‌ ಕಡಿತವಾಗಿದೆ. ಜತೆಗೆ ಅವರ ಫೋನ್‌ ಬ್ಯಾಟರಿ ಖಾಲಿಯಾಗಿದೆ. ಹಾಗಾಗಿ ಯಾರಿಂದಲೂ ಸಹಾಯ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ ಅವರ ವಾಹನದ ಇಂಧನ ಖಾಲಿಯಾಗಿದ್ದು ಮಾತ್ರವಲ್ಲದೇ, ಆಹಾರ ಹಾಗೂ ನೀರು ಕೂಡ ಇಲ್ಲದೇ ಬಳಲಿದ್ದಾರೆ. ಕೊನೆಗೆ ಯಾವ ಕಡೆಗೆ ಹೋಗಬೇಕು ಎಂಬುದೂ ಕೂಡ ಗೊತ್ತಾಗದೇ ಅಲೆದಾ ಡಿದ್ದಾರೆ. ಅಂತಿಮವಾಗಿ ಕುಡಿಯಲು ನೀರಿಲ್ಲದೇ ನಿರ್ಜಲೀಕರಣದಿಂದ ಮೃತಪಟ್ಟಿದ್ದಾರೆ.

650 ಕಿ.ಮೀ. ವಿಸ್ತಾರದ ಬೃಹತ್‌ ಮರುಭೂಮಿ: ಸೌದಿ ಅರೇಬಿಯಾ ದಕ್ಷಿಣ ಭಾಗದಲ್ಲಿ ಹರಡಿರುವ ರಬ್‌ ಅಲ್‌ ಖಲಿ ಮರುಭೂಮಿಯು ಸುಮಾರು 650 ಕಿ.ಮೀ. ವಿಸ್ತಾರ ವಾಗಿದೆ. ಇಲ್ಲಿನ ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಅಗತ್ಯ ವ್ಯವಸ್ಥೆಗಳು ಇಲ್ಲದಿದ್ದರೆ ಬದುಕುಳಿಯುವುದು ಕಷ್ಟ ಎನ್ನಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next