Advertisement

Belgavi; ಗೂಗಲ್‌ ಮ್ಯಾಪ್‌ ಹಾದಿ ತಪ್ಪಿಸಿತು: ರಾತ್ರಿಯಿಡೀ ಕಾಡಲ್ಲೇ ವಾಸ!

11:10 PM Dec 06, 2024 | Team Udayavani |

ಬೆಳಗಾವಿ: ಗೂಗಲ್‌ ಮ್ಯಾಪ್‌ ನಂಬಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಿಹಾರ ಮೂಲದ ಪ್ರಯಾಣಿಕರು ಖಾನಾಪುರ ತಾಲೂಕಿನ ಭೀಮಗಢದ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ರಾತ್ರಿಯಿಡೀ ಬಾಕಿಯಾಗಿದ್ದು, ಪೊಲೀಸರು ಎಲ್ಲರನ್ನೂ ಸುರಕ್ಷಿತವಾಗಿ ಕರೆತಂದಿದ್ದಾರೆ.

Advertisement

ಹಾರದ ರಾಜದಾಸ್‌ ರಣಜಿತ್‌ ದಾಸ್‌ ಅವರು ಕುಟುಂಬ ಸಮೇತ ಕಾರಿನಲ್ಲಿ ಉಜ್ಜಯಿನಿಯಿಂದ ಗೋವಾಕ್ಕೆ ಗೂಗಲ್‌ ಮ್ಯಾಪ್‌ ಆಧರಿಸಿ ಹೋಗುತ್ತಿದ್ದರು. ಆಗ ಖಾನಾಪುರ ತಾಲೂಕಿನ ಶಿರೋಲಿ-ಹೆಮ್ಮಡಗಾ ಮಾರ್ಗ ಮಧ್ಯದ ರಸ್ತೆಯಿಂದ 7-8 ಕಿ.ಮೀ. ದಾಟಿದಾಗ ಮಾರ್ಗ ತಪ್ಪಿದ್ದು, ಅಲ್ಲಿ ಮೊಬೈಲ್‌ ಸಂಪರ್ಕ ಇರಲಿಲ್ಲ. ಕತ್ತಲಿನಲ್ಲಿ ಆತಂಕಕ್ಕೀಡಾದ ಕುಟುಂಬ ಕಾಡಿನಲ್ಲಿಯೇ ರಾತ್ರಿ ಕಳೆಯಿತು. ಬೆಳಗಾಗುವಷ್ಟರಲ್ಲಿ ತುಸು ದೂರ ಬಂದು ಮೊಬೈಲ್‌ ನೆಟ್‌ವರ್ಕ್‌ ಸಿಕ್ಕಿದ್ದು, 112ಕ್ಕೆ ಕರೆ ಮಾಡಿದಾಗ ಖಾನಾಪುರ ಠಾಣೆ ಪೊಲೀಸರು ರಾಜದಾಸ್‌ ಅವರ ಲೈವ್‌ ಲೊಕೇಷನ್‌ ನೆರವಿನಿಂದ ಅವರಿದ್ದ ಸ್ಥಳ ಪತ್ತೆ ಹಚ್ಚಿ ಸಂಪರ್ಕಿಸಿ ಎಲ್ಲರನ್ನೂ ಸುರಕ್ಷಿತವಾಗಿ ಅವರು ಸಾಗುವ ಕಡೆಗೆ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next