Advertisement

ಡಿಕೆಶಿ- ಸಿದ್ಧರಾಮಯ್ಯ ಜಗಳವಿರಬಹುದು, ಆದರೆ.. : ‘ಕೈ ಕಾಳಗ’ದ ಕುರಿತು ಸತೀಶ್ ಪರೋಕ್ಷ ಮಾತು

02:25 PM Feb 02, 2022 | Team Udayavani |

ಚಿತ್ರದುರ್ಗ: ಡಿ ಕೆ ಶಿವಕುಮಾರ್, ಸಿದ್ಧರಾಮಯ್ಯ ನಡುವೆ ಜಗಳವಿರಬಹುದು. ನಮ್ಮ ಕಾರ್ಯಕರ್ತರು ನಮ್ಮ ಪಕ್ಷದ ಚಿಹ್ನೆಗೆ ಮತ ಹಾಕುವುದು. ನಮ್ಮ ಪಕ್ಷ ಮಾತ್ರವಲ್ಲ ಎಲ್ಲಾ ಪಕ್ಷಗಳಲ್ಲೂ ಗುಂಪುಗಳಿವೆ. ಬಿಜೆಪಿಯಲ್ಲಿ ಬಿಎಸ್ ವೈ- ಆರ್ ಎಸ್ಎಸ್ ಗುಂಪುಗಳಿವೆ. ಜೆಡಿಎಸ್ ಪಕ್ಷದಲ್ಲೂ ಗುಂಪುಗಾರಿಕೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಣ ಸಮಸ್ಯೆಯಿದ್ದರೆ ಹೈಕಮಾಂಡ್ ಬಗೆಹರಿಸಲಿದೆ. ಗುಂಪುಗಾರಿಕೆಯಿಲ್ಲ, ಇಬ್ಬರ ಅಧೀನದಲ್ಲಿ ಕೆಲಸ ಮಾಡುತ್ತಿದ್ದೇವೆ. ಸಿಎಂ ಯಾರಾಗಬೇಕೆಂದು ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರ ಹಿಡಿಯುವುದು ಹಗಲುಗನಸಲ್ಲ, ರಿಯಲ್ ಕನಸು ಎಂದರು.

ನಮ್ಮ ಆಂತರಿಕ ವಿಚಾರ: ಸಿದ್ಧರಾಮಯ್ಯ ಕಾಂಗ್ರೆಸ್ ತೊರೆಯಬಹುದೆಂದ ಸಚಿವ ಬಿ.ಸಿ.ಪಾಟೀಲ್ ಗೆ ಟಾಂಗ್ ನೀಡಿದ ಸತೀಶ್ ಜಾರಕಿಹೊಳಿ, “ನಮ್ಮ ಪಕ್ಷದ ಆಂತರಿಕ ವಿಚಾರ ಅವರಿಗೇಕೆ ಬೇಕು. ಬಿ.ಸಿ.ಪಾಟೀಲ್ ಎಲ್ಲಿ ಇರುತ್ತಾರೆಂಬುದು ನೋಡಿಕೊಳ್ಳಲಿ. ಅವರೆಲ್ಲ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋದವರು. ಅಗ್ರಗಣ್ಯ ನಾಯಕ ಸಿದ್ಧರಾಮಯ್ಯ ಸೇವೆ ಪಕ್ಷಕ್ಕೆ ಅವಶ್ಯಕತೆಯಿದೆ. ಡಿ ಕೆ ಶಿವಕುಮಾರ್, ಸಿದ್ಧರಾಮಯ್ಯ ಜಂಟಿಯಾಗಿ ಕೆಲಸ ಮಾಡುತ್ತಾರೆ. ಬಿಜೆಪಿಯವರ ಪಾಠ ಕೇಳಲು ನಾವು ಸಿದ್ಧರಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಸಾಮಾಜಿಕ ನ್ಯಾಯ ನೀಡಲು ಬದ್ಧವಾಗಿದೆ ಎಂದರು.

ಇದನ್ನೂ ಓದಿ:ಸಿಎಂ ದೆಹಲಿ ಭೇಟಿ ಸಂಪುಟಕ್ಕಾಗಿ ಅಲ್ಲ: ಸಂಸದರ ಭೇಟಿಗೆ ಮಾತ್ರ ಸೀಮಿತ

ಶಾಸಕರನ್ನು ಎಲ್ಲಿ ಕೂಡಿಸುತ್ತಾರೆ: ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆಂದು ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಗೆ ಈಗ ಶಾಸಕರ ಅವಶ್ಯಕತೆ ಇಲ್ಲವಲ್ಲ. ಇನ್ನು 15 ಶಾಸಕರನ್ನು ತೆಗೆದುಕೊಂಡು ಎಲ್ಲಿ ಕೂಡಿಸುತ್ತಾರೆ. ಕಾಂಗ್ರೆಸ್ ಪಕ್ಷದ ಶಾಸಕರು ಯಾರೂ ಬಿಟ್ಟು ಹೋಗುವುದೂ ಇಲ್ಲ. ಬೇರೆ ಪಕ್ಷದ ಶಾಸಕರು ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಜೊತೆ ಸಂಪರ್ಕದಲ್ಲಿದ್ದಾರೆ. ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಬಂದೇ ಬರುತ್ತಾರೆ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು, ಗೆಲ್ಲುವ ವ್ಯಕ್ತಿ ಎರಡೂ ನೋಡಬೇಕಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next