Advertisement
ಸುಮಾರು 1.80 ಕೋ.ರೂ. ಅನುದಾನದಲ್ಲಿ ನಿರ್ಮಾಣಗೊಂಡ ಈ ಮಾರುಕಟ್ಟೆಯ ಕಾಮಗಾರಿ ವ್ಯವಸ್ಥಿತ ವಾಗಿಲ್ಲ ಹಾಗೂ ವಿನ್ಯಾಸದಲ್ಲಿ ದೋಷವಿದೆ. ಎಲ್ಲಾ ಮೀನು ಮಾರಾಟಗಾರರಿಗೆ ಸªಳಾವಕಾಶದ ಕೊರñಯಾಗಲಿದೆ ಎನ್ನುವ ಕಾರಣಕ್ಕೆ ಉದ್ಘಾಟನೆಗೆ ಆಕ್ಷೇಪ ವ್ಯಕ್ತವಾಗಿತ್ತು. ಅನಂತರ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಆದರೆ ಎಷ್ಟೇ ಪ್ರಯತ್ನಪಟ್ಟರು ಸಮಸ್ಯೆ ಬಗೆಹರಿದಿರಲಿಲ್ಲ.
ಐರೋಡಿ ಗ್ರಾ.ಪಂ. ಅಧ್ಯಕ್ಷ ಮೊಸೆಸ್ ರೋಡಿಗ್ರಸ್, ಸದಸ್ಯರಾದ ಆನಂದ ಗಾಣಿಗ, ಶಿವರಾಮ ಶ್ರೀಯಾನ್, ಸುಧಾಕರ ಪೂಜಾರಿ, ಮೀನುಗಾರ ಪ್ರತಿನಿಧಿಗಳಾಗಿ ಸಂದೀಪ್ ಕುಂದರ್ ಕೋಡಿ ಕನ್ಯಾಣ, ಮಹಾಬಲ ಕುಂದರ್, ಗಂಗಾಧರ, ಪ್ರಭಾಕರ ಕುಂದರ್, ಮೀನುಗಾರಿಕಾ ಮಹಿಳೆಯರಾದ ಜ್ಯೋತಿ ಖಾರ್ವಿ, ಸರೋಜ, ಗಂಗೆ, ಕುಸುಮ, ಬೇಬಿ, ಕಮಲಾ ಮುಂತಾದವರು ಉಪಸ್ಥಿತರಿದ್ದರು.
Related Articles
ನೂತನ ಮಾರುಕಟ್ಟೆಯಲ್ಲಿ ಸ್ಥಳ ಹಂಚಿಕೆ ಮಾಡುತ್ತಿದ್ದಂತೆ ಗೊಂದಲಮಯ ವಾತಾವರಣ ನಿರ್ಮಾಣಗೊಂಡಿತು. ಮಾರುಕಟ್ಟೆಯ ಒಳಗೆ ಸುಮಾರು 80 ಮಂದಿಗೆ ಮೀನು ಮಾರಾಟ ಮಾಡಲು ಸ್ಥಳ ಗುರುತು ಮಾಡಿದ್ದು, 150ಕ್ಕೂ ಹೆಚ್ಚು ಮೀನುಗಾರಿಕಾ ಮಹಿಳೆಯರು ಆಗಮಿಸಿದ್ದರಿಂದ ಸುಮಾರು 70 ಮಂದಿಗೆ ಸ್ಥಳಾವಕಾಶ ಸಿಗದೆ ಅತಂತ್ರರಾದರು ಹಾಗೂ ಖಾಯಂ ಆಗಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸ್ಥಳ ಸಿಗದೇ ಅಪರೂಪಕ್ಕೊಮ್ಮೆ ಮೀನು ಮಾರಾಟಕ್ಕೆ ಬರುವ ಮಹಿಳೆಯರು ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯಿತು.
Advertisement