Advertisement

ಒಂದೇ ಹೋಟೆಲ್ ನಿಂದ ಹೊರ ಬಂದ ಸಾರಾ ಆಲಿ – ಶುಭಮನ್‌ ಗಿಲ್‌! ಡೇಟಿಂಗ್‌ ವದಂತಿ ಮತ್ತೆ ವೈರಲ್

04:17 PM Oct 15, 2022 | Team Udayavani |

ನವದಹೆಲಿ: ಸೆಲೆಬ್ರಿಟಿಗಳ ಬಗ್ಗೆ ಗಾಳಿ ಸುದ್ದಿಗಳು ಹಬ್ಬುತ್ತಿರುತ್ತದೆ. ಇತ್ತೀಚೆಗಷ್ಟೇ ಕ್ರಿಕೆಟಿಗ  ಶುಭಮನ್‌ ಗಿಲ್‌ ಹಾಗೂ ನಟಿ ಸಾರಾ ಆಲಿ ಖಾನ್‌ ನಡುವಿನ ಲವ್ವಿಡವ್ವಿ ಬಗ್ಗೆ ಸುದ್ದಿಯಾಗಿತ್ತು. ಇಬ್ಬರು ರೆಸ್ಟೋರೆಂಟ್‌ ವೊಂದರಲ್ಲಿ ಜೊತೆಯಾಗಿ ಡಿನ್ನರ್‌ ಮಾಡುತ್ತಿರುವ ಫೋಟೋವೊಂದು ವೈರಲ್‌ ಆಗಿತ್ತು.

Advertisement

ನಟಿ ಸಾರಾ ಆಲಿ ಖಾನ್‌ – ಕ್ರಿಕೆಟಿಗೆ ಶುಭಮನ್‌ ಗಿಲ್‌ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಮಾತು ಚರ್ಚೆಯಲ್ಲಿ ಇರುವಾಗಲೇ, ದಿಲ್ಲಿಯ ಹೋಟೆಲ್‌ ವೊಂದರಿಂದ ಸಾರಾ – ಗಿಲ್‌ ಹೊರ ಬರುತ್ತಿರುವ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರನ್ನು ಸೆಳೆದಿದೆ. ಇದರೊಂದಿಗೆ ಫ್ಲೈಟ್‌ ನಲ್ಲಿ ಸಾರಾ ಆಲಿ ಖಾನ್‌ ಶುಭಮನ್ ಗಿಲ್‌ ಪಕ್ಕ ಕುಳಿತಿರುವ ದೃಶ್ಯವೂ ವೈರಲ್‌ ಆಗಿದೆ.

ದಿಲ್ಲಿಯ ಹೋಟೆಲ್‌ ವೊಂದರಿಂದ ಶುಭಮನ್‌ ಗಿಲ್‌ ತನ್ನ ಲಗೇಜ್ ಹಿಡಿದುಕೊಂಡು ಹೊರ ಬಂದಿದ್ದು, ಅದೇ ಹೋಟೆಲ್‌ ನಿಂದ ನಟಿ ಸಾರಾ ಆಲಿ ಖಾನ್‌ ಅವರು ಕೂಡ ಅದೇ ಸಮದಲ್ಲಿ ಹೊರಗೆ ಬಂದಿದ್ದಾರೆ. ಇದಾದ ಬಳಿಕ ವಿಮಾನದಲ್ಲಿ ಸಾರಾ ಆಲಿ ಖಾನ್‌ ಅಭಿಮಾನಿಯೊಬ್ಬರು ಸೆಲ್ಫೀ ಕ್ಲಿಕ್ಕಿಸಿಕೊಂಡು, ವ್ಯಕ್ತಿಯೊಬ್ಬರ ಪಕ್ಕ ಕುಳಿತಿದ್ದರು. ಆ ವ್ಯಕ್ತಿ ನೋಡಲು ಗಿಲ್‌ ಹಾಗೆ ವಿಡಿಯೋದಲ್ಲಿ ಕಾಣುತ್ತಿದ್ದು, ಇದು ಕ್ರಿಕೆಟಿಗ ಶುಭಮನ್‌ ಗಿಲ್‌ ಅವರೇ ಎಂದು ನೆಟ್ಟಿಗರು ವಿಡಿಯೋಗೆ ನಾನಾ ಕಮೆಂಟ್ಸ್‌ ಗಳನ್ನು ಮಾಡುತ್ತಿದ್ದಾರೆ.

ಈ ಹಿಂದೆ ಸಚಿನ್‌ ಪುತ್ರಿ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದರು. ಸಾರಾ ಆಲಿ ಖಾನ್‌ ಕಾರ್ತಿಕ್‌ ಆರ್ಯನ್‌ ಅವರೊಂದಿಗೆ ಡೇಟಿಂಗ್‌ ನಲ್ಲಿದ್ದರು ಎಂದು ವರದಿ ತಿಳಿಸಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next