Advertisement

ಏ.26ರಂದು ನಡೆಯಬೇಕಿದ್ದ ಸಪ್ತಪದಿ ಯೋಜನೆ ಮುಂದೂಡಿಕೆ: ಸಚಿವ ಕೋಟ ಮಾಹಿತಿ

07:10 PM Apr 07, 2020 | keerthan |

ಬೆಂಗಳೂರು: ರಾಜ್ಯಾದ್ಯಂತ ಕೋವಿಡ್-19 ಸೋಂಕು ಭೀತಿಯ ಕಾರಣ ರಾಜ್ಯ ಸರಕಾರದ ಮಹತ್ವದ ಸಪ್ತಪದಿ ಯೋಜನೆಯನ್ನು ಮುಂದೂಡಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕೋವಿಡ್-19 ಸೋಂಕು ಹಾವಳಿ ಹಿನ್ನೆಲೆಯಲ್ಲಿ ಸಪ್ತಪದಿ ಯೋಜನೆ ಮುಂದೂಡಿಕೆ ಮಾಡಲಾಗಿದೆ.  ಏಪ್ರಿಲ್ 26 ರಂದು ಪ್ರಥಮ ಹಂತದ ಸಪ್ತಪದಿ ಯೋಜನೆ ನಡೆಯಬೇಕಿತ್ತು. ಅದು ಮುಂದೂಡಿಕೆಯಾಗಿದೆ ಎಂದರು.

ಯೋಜನೆಯಡಿ ಬಡ ವಧು -ವರರಿಗೆ ಸರ್ಕಾರದಿಂದ ಉಚಿತ ವಿವಾಹ ಭಾಗ್ಯ ಆಯೋಜಿಸಲಾಗಿದ್ದು, ಏಪ್ರಿಲ್ 26 ರಂದು ಸಪ್ತಪದಿ ಯೋಜನೆಯಡಿ‌ 1.5 ಸಾವಿರ ವಧು ವರರು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು.  ಇದೀಗ ಸೋಂಕು ಕಾರಣದಿಂದ ಸಪ್ತಪದಿ ಯೋಜನೆ ಮುಂದೂಡಿಕೆ ಮಾಡಲಾಗಿದೆ ಎಂದರು.

ಮೇ 26 ರಂದು ಎರಡನೇ ಹಂತದ ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮವಿದೆ. ಮೊದಲ ಮತ್ತು ಎರಡನೇ ಹಂತಗಳನ್ನು ಕೂಡಿಸಿ ಒಂದೇ ಹಂತದಲ್ಲಿ ಸಾಮೂಹಿಕ ವಿವಾಹ‌ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ‌ ಮುಖ್ಯಮಂತ್ರಿಗಳು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next