Advertisement

Sapthami Gowda: ಬಾಲಿವುಡ್ ನಲ್ಲಿ ಕಾಂತಾರದ ಲೀಲಾ ಮಿಂಚು

12:33 PM Aug 17, 2023 | Team Udayavani |

“ಕಾಂತಾರ’ ಸಿನಿಮಾದ ಲೀಲಾ ಪಾತ್ರದ ಮೂಗುತಿ ಸುಂದರಿಯಾಗಿ ಸಿನಿಪ್ರಿಯರ ಮನಗೆದ್ದಿರುವ ಸಪ್ತಮಿ ಗೌಡ ಈಗ ಬಾಲಿವುಡ್‌ ರಿಲೀಸ್‌ನತ್ತ ಚಿತ್ತ ನೆಟ್ಟಿದ್ದಾರೆ.

Advertisement

ಹೌದು, “ಕಾಂತಾರ’ ಹಿಟ್‌ ಬಳಿಕ ಸಪ್ತಮಿ ಗೌಡ ಹಿಂದಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದರು. ಅದು “ದಿ ವಾಕ್ಸಿನ್‌ ವಾರ್‌’. “ಕಾಶ್ಮೀರಿ ಫೈಲ್ಸ್‌’ ಮೂಲಕ ಸಂಚಲ ಸೃಷ್ಟಿಸಿರುವ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ “ದಿ ವ್ಯಾಕ್ಸಿನ್‌ ವಾರ’ ಚಿತ್ರದಲ್ಲಿ ಸಪ್ತಮಿ ಗೌಡ ಕೂಡಾ ನಟಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸೆ.28ರಂದು ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರದ ಮೇಲೆ ಸಪ್ತಮಿ ನಿರೀಕ್ಷೆ ಇಟ್ಟಿದ್ದಾರೆ.

ಅಂದಹಾಗೆ, ಇದು ನೈಜ ಘಟನೆಗಳನ್ನು ಆಧರಿಸಿ ಮಾಡಲಾಗಿರುವ ಚಿತ್ರ. ಮುಖ್ಯವಾಗಿ ಕೋವಿಡ್‌ ಸಮಯದಲ್ಲಿನ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಅನುಪಮ್‌ ಖೇರ್‌, ನಾನಾ ಪಾಟೇಕರ್‌ ಪ್ರಮುಖ ಪಾತ್ರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next