Advertisement
ಈ ಪೈಕಿ ಸಮರ್ಥನಂ ಪರಿಸರ, ಘನತ್ಯಾಜ್ಯ ನಿರ್ವಹಣೆ ರೌಂಡ್ ಟೇಬಲ್, ಹಸಿರು ದಳ, ಶ್ರೀ ಫೌಂಡೇಶನ್, ಸ್ವಚ್f ಸೇರಿದಂತೆ ಹಲವು ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜತೆಗೂಡಿ ವೈಜ್ಞಾನಿಕ ಕಸ ವಿಂಗಡಣೆ ಮತ್ತು ನಿರ್ವಹಣೆಯಲ್ಲಿ ತಮ್ಮದೇ ಆದ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಸ ಸಮಸ್ಯೆಗೆ ಸರ್ಕಾರ, ಪಾಲಿಕೆಯನ್ನೇ ನೆಚ್ಚಿಕೊಳ್ಳದೆ ಸ್ವಯಂ ಪ್ರೇರಿತವಾಗಿ ಕಸ ವಿಲೇವಾರಿ ಯಲ್ಲಿ ತೊಡಗಿರುವ ಈ ಸಂಸ್ಥೆಗಳು ಮಾದರಿಯಾಗಿ ನಿಂತಿವೆ.
Related Articles
Advertisement
ಮರುಬಳಕೆ ವಸ್ತುಗಳ ಮಾರಾಟದಿಂದ ಕಲ್ಯಾಣ ಕಾರ್ಯಕಾರ್ಪೋರೇಟ್ ಕಂಪನಿಗಳಿಂದ ಲ್ಯಾಪ್‌ಟಾಪ್, ಪ್ರಿಂಟರ್, ಆಹಾರ ಪೊಟ್ಟಣಗಳು, ಶಿಕ್ಷಣ ಸಂಸ್ಥೆಗಳಿಂದ ಕಾಗದ ತ್ಯಾಜ್ಯ ಮತ್ತು ಅಪಾರ್ಟ್‌ಮೆಂಟ್‌ಗಳಿಂದ “ಸಮರ್ಥನಂ ಪರಿಸರ ಸಂಸ್ಥೆ’ಯು ಒಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುತ್ತಿದೆ. ಕಾಗದ ತ್ಯಾಜ್ಯವನ್ನು “ಐಟಿಸಿ’ ಎಂಬ ಸಂಸ್ಥೆಗೂ, ಪ್ಲಾಸ್ಟಿಕ್ ವಸ್ತುಗಳನ್ನು “ಈಶಾ ಫೈಬರ್’ ಎಂಬ ಸಂಸ್ಥೆಗೂ ನೀಡಲಾಗುತ್ತಿದೆ. “ನಾವು ಕೊಟ್ಟ ವಸ್ತುಗಳಿಂದ ಮರುಬಳಕೆ ವಸ್ತು ತಯಾರಿಸಿ ಆ ಕಂಪೆನಿಗಳು ನಮಗೆ ನೀಡುತ್ತವೆ. ಅದನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಅಂಗವಿಕಲ ಮಕ್ಕಳ ಕಲ್ಯಾಣ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ದಿನಪತ್ರಿಕೆಗಳು ಹಾಗೂ ವೃತ್ತಪತ್ರಿಕೆಗಳಿಂದ ಪೇಪರ್ ಬ್ಯಾಗ್, ನೋಟ್‌ಬುಕ್ಸ್, ಡೈರಿ ಹಾಗೂ ಬ್ರೈಲ್ ಟೆಕ್ಸ್ಟ್ಬುಕ್‌ಗಳನ್ನು ತಯಾರಿಸಲಾಗುತ್ತದೆ,’ ಎಂದು ಸಮರ್ಥನಂ ಸಂಸ್ಥೆಯ ಪದಾಧಿಕಾರಿಯೊಬ್ಬರು ಹೇಳುತ್ತಾರೆ. ರೆಡ್ನೂಸ್-ರೀಯ್ಯೂಸ್-ರಿಸೈಕಲ್
ಒಣ ತ್ಯಾಜ್ಯ ಮುಕ್ತ ಪರಿಸರ ನಿರ್ಮಾಣ ಮಾಡುವುದು ಸಮರ್ಥನಂ ಪರಿಸರದ ಗುರಿ. ಇದೊಂದು ಅಗ್ಗದ ವೆಚ್ಚದ ಕಾರ್ಯಕ್ರಮ. ವಿಕಲ ಚೇತನ ಮಕ್ಕಳ ಸ್ವಾವಲಂಬನೆಗೆ ಸಹಕಾರಿ ಆಗಲಿದೆ. ಒಣ ತ್ಯಾಜ್ಯದ ಸಂಸ್ಕರಣೆ, ಅದರಿಂದ ತಯಾರಾಗುವ ವಸ್ತುಗಳ ಬಳಕೆ ಮತ್ತು ಮಾರು ಕಟ್ಟೆಗೆ ಪ್ರೋತ್ಸಾಹಿಸುತ್ತಿರುವ ಸಮರ್ಥನಂ ಸಂಸ್ಥೆಯು “ರೆಡ್ನೂಸ್-ರಿಯೂಸ್ ಆ್ಯಂಡ್ ರಿಸೈಕಲ್’ ಹೀಗೆ ಮೂರು “ಆರ್’ ಸೂತ್ರದಡಿ ಪರಿಸರ ಕಾರ್ಯಕ್ರಮವನ್ನು ಕಾರ್ಯಗತಗೊತಗೊಳಿಸುತ್ತಿದೆ. ನಾಗರಿ ಕರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸಮರ್ಥನಂ ಸಂಸ್ಥೆ ಮಾಧ್ಯಮ ಸಂಯೋಜಕ ಎಸ್. ನಿರಂಜನ್ ಕೋರಿದ್ದಾರೆ. ತ್ಯಾಜ್ಯ ಸಂಸ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ತಲೆದೋರಿದಾಗ ಯಾರೇ ಸಂಪರ್ಕಿಸಿದರೂ ಪರಿಹಾರ ನೀಡುವುದರ ಜತೆಗೆ ಸಮರ್ಪಕ ನಿರ್ವಹಣೆ ಬಗ್ಗೆ ಸಲಹೆ, ಮಾರ್ಗದರ್ಶನವನ್ನೂ ನೀಡಲಾಗುವುದು.
-ಎನ್.ಎಸ್. ಮುಕುಂದ್, ಮುಖ್ಯಸ್ಥ, ಘನತ್ಯಾಜ್ಯ ನಿರ್ವಹಣೆ ರೌಂಡ್ ಟೇಬಲ್ * ರಫೀಕ್ ಅಹಮದ್