Advertisement

ಸಂಸ್ಕೃತವೂ ಜಗತ್ತಿನ ಶ್ರೇಷ್ಠ ಭಷೆ : ಸಿದ್ದೇಶ್ವರ ಶ್ರೀ

03:14 PM Aug 31, 2018 | |

ವಿಜಯಪುರ: ಜನ ಭಾಷೆಯಾಗಿರುವ ಸಂಸ್ಕೃತ ಜಗತ್ತಿಗೆ ಶ್ರೇಷ್ಠ ಭಾಷೆಗಳಲ್ಲಿ ಸಂಸ್ಕೃತವು ಒಂದಾಗಿದೆ ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳಿದರು.

Advertisement

ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌.ಬಿ. ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಿಂದ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀವರ್ಚನ ನೀಡಿ ಮಾತನಾಡಿದ ಅವರು, ಸಂಸ್ಕೃತ ಭಾಷೆ ಅತ್ಯಂತ ಶ್ರೇಷ್ಠ ಭಾಷೆ, ಶ್ರೀಮಂತ ಭಾಷೆ. ಈ ಭಾರತದ ಶಕ್ತಿ ಸಂಪತ್ತು ಅಪಾರವಾದದ್ದು. ಭಾರತದ ಎಲ್ಲ ಭಾಷೆಗಳಿಗೂ ಕಾಣಿಕೆ ಕೊಟ್ಟ ಭಾಷೆ ಸಂಸ್ಕೃತ. ಸಂಸ್ಕೃತ ಭಾಷೆಯನ್ನು ಪ್ರತಿಯೊಬ್ಬರು ಕಲಿಯುವ ಪ್ರಯತ್ನ ಮಾಡಬೇಕು ಎಂದರು.

ಸಂಸ್ಕೃತ ಭಾಷೆಯ ಬಗ್ಗೆ ವಿದೇಶಗಳಲ್ಲಿಯೂ ಒಲವು ಬೆಳೆಯುತ್ತಿದೆ. ವಿದೇಶಿಗರಲ್ಲಿ ಅನೇಕರು ಸಂಸ್ಕೃತ ಭಾಷೆಯ ಮಹತ್ವವನ್ನು ಅರಿತುಕೊಂಡಿದ್ದಾರೆ. ಅವರು ಸಹ ಸಂಸ್ಕೃತ ಕಲಿಯುತ್ತಿದ್ದಾರೆ. ಅನೇಕರು ಸಂಸ್ಕೃತ ಕಲಿಯಲು ಉತ್ಸುಕರಾಗಿದ್ದಾರೆ. ಫ್ರಾನ್ಸ್‌, ಜರ್ಮನ್‌ ದೇಶಗಳಲ್ಲಿಯೂ ಸಂಸ್ಕೃತವಿದೆ. ಎಲ್ಲ ಭಾಷೆಗಳು ಜಗತ್ತಿನ ಭಾಷೆಗಳು. ಎಲ್ಲ ಭಾಷೆಗಳಲ್ಲೂ ಒಂದೊಂದು ವೈಶಿಷ್ಯವಿದೆ. ತಲೆಯ ಭಾಷೆಯನ್ನು ತಲೆಗಾಗಿ ಬಳಸುವುದು. ಹೃದಯದ ಭಾಷೆಯನ್ನು ಜೀವನಕ್ಕಾಗಿ ಬಳಸುವುದು. ಸಂಸ್ಕೃತ ಭಾಷೆಯ ಭಾವ ಎಲ್ಲರಿಗೂ ತಿಳಿಯುವಂತಹದ್ದು ಎಂದು ವಿವರಿಸಿದರು.

ಒಂದು ಕಾಲದಲ್ಲಿ ವಿಜಯಪುರ ವಿದ್ವಾಂಸರ ಊರಾಗಿತ್ತು. ಶ್ರೇಷ್ಠ ಬಸವಣ್ಣ. ಖಗೋಳ ತಜ್ಞ ಭಾಸ್ಕರಾಚಾರ್ಯ ಈ ಭಾಗದವರೆ, ಹಿಂದಿನ ದಿನಗಳಲ್ಲಿ ವಿಜಯಪುರ ಸಂಸ್ಕೃತ ಭಾಷೆಗೆ ಪ್ರಸಿದ್ಧಿ ಪಡೆದಿತ್ತು. ಸಂಸ್ಕೃತದಿಂದ ಬೈಗುಳಗಳು
ಮರೆಯಾಗುತ್ತವೆ. ವಿದ್ಯಾರ್ಥಿಗಳು ಮೊಬೈಲ್‌ನ್ನು ದೂರವಿರಿಸಿ ಅಧ್ಯಯನದ ಕಡೆ ಗಮನ ಕೊಡಬೇಕು. ಮೊಬೈಲ್‌ನಿಂದ ಅಧ್ಯಯನದ ಸಮಯ ವ್ಯರ್ಥವಾಗಿ  ವ್ಯಯವಾಗುತ್ತದೆ. ಮೊಬೈಲ್‌ ದೂರವಿರಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಂ.ಮಧ್ವಾಚಾರ್ಯ ಮೊಕಾಶಿ ಮಾತನಾಡಿದರು. ಪ್ರಾಚಾರ್ಯ ಡಾ.ಕೆ.ಜಿ.ಪೂಜಾರಿ, ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್‌.ಎಚ್‌.ಲಗಳಿ, ಪ್ರೊ.ಜಿ.ಆರ್‌.ಅಂಬಲಿ, ಡಾ.ಯು.ಎಸ್‌.ಪೂಜಾರಿ, ಡಾ.ಎಸ್‌.ಟಿ.ಮೇರವಾಡೆ, ರವೀಂದ್ರ ಕೋಮಾರ, ಜ್ಯೋತಿ ಕೋರಿ ಇದ್ದರು.

Advertisement

ಸಂಸ್ಕೃತ ಸಪ್ತಾಹ ಕಾರ್ಯಕ್ರಮ 
ಇಂಡಿ: ಭಾರತ ದೇಶ ಭವ್ಯ ಪರಂಪರೆ, ಸಂಸ್ಕೃತಿ ಇತಿಹಾಸ ಹೊಂದಿರುವ ದೇಶ. ಭಾರತದಲ್ಲಿ ಅನಾದಿ ಕಾಲದಿಂದಲೂ ಸಂಸ್ಕೃತ ಭಾಷೆ ಬಳಕೆಯಲ್ಲಿದೆ. ವೇದ ಉಪನಿಷತ್ತು ರಾಮಾಯಣ ಮಹಾಭಾರತದಂತಹ ಪ್ರಸಂಗಗಳು ದೇವನಾಗರಿ ಲಿಪಿಯಲ್ಲಿವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಡಿ.ಆರ್‌. ಮಣೂರ ಹೇಳಿದರು.

ತಾಲೂಕಿನ ಬೋಳೆಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವ್ಯಾಪ್ತಿಯಲ್ಲಿ ನಡೆಯುವ ವೃಷಭಲಿಂಗಾರ್ಯ ಕೃಪಾ ಪೋಷಿತ ಸಂಸ್ಕೃತ ಪಾಠ ಶಾಲೆಯಲ್ಲಿ ಹಮ್ಮಿಕೊಂಡ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ ಹಾಗೂ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಸಂಸ್ಕೃತ ಭಾರತಿ ಉತ್ತರ ಕರ್ನಾಟಕದ ಪ್ರಾಂತ ಸಹಯೋಗದೊಂದಿಗೆ ಸಂಸ್ಕೃತ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸ್ಕೃತ ಭಾಷೆ ತಾಯಿ ಭಾಷೆ ಇದ್ದಂತೆ. ಎಲ್ಲ ಭಾಷೆಗಳಿಗೂ ಸಂಸ್ಕೃತ ಭಾಷೆಯೇ ಅಡಿಪಾಯವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸಿ ಪೋಷಿಸಬೇಕು ಎಂದರು. 

ಮುಖ್ಯಗುರು ಕೆ.ಆರ್‌. ಕಾಪಸೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತ ಭಾಷೆಯಲ್ಲಿ ನಮ್ಮ ಪೂರ್ವಜರು, ಹಲವಾರು ವೇದೋಪನಿಷತ್ತುಗಳನ್ನು ರಚಿಸಿದ್ದಲ್ಲದೆ ಇಂದಿಗೂ ಸಂಸ್ಕೃತ ಭಾಷೆ ಪ್ರಸ್ತುತವಿದೆ. ಆಯುರ್ವೇದ ವಿಜ್ಞಾನದಲ್ಲಿ ಸಂಸ್ಕೃತ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಎಸ್‌.ಆರ್‌. ಹುಣಸಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಂಸ್ಕೃತ ಗೀತೆಯ ಶ್ಲೋಕ, ನಾಟಕ, ನೃತ್ಯಗಳು ಪ್ರಸಾರಗೊಂಡವು.

ಸಂಸ್ಕೃತ ಪಾಠ ಶಾಲೆಯ ಮುಖ್ಯಗುರು ಎಸ್‌.ಜಿ. ಇಂಡಿ, ಗುರುಮಾತೆ ಎಸ್‌.ಎಸ್‌. ಹಿರೇಮಠ, ಎಸ್‌.ಸಿ. ಇಂಡಿ, ಟಿ.ಎಂ. ಅಳ್ಳೊಳ್ಳಿ, ಎಸ್‌.ಜಿ. ಕಟ್ಟಿಮನಿ, ಎಸ್‌.ಎಂ. ಅಂಗಡಿ ಇತರರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next