Advertisement

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

12:13 AM Nov 09, 2024 | Team Udayavani |

ಬೆಂಗಳೂರು: ಮೀಸಲು ವರ್ಗೀಕರಣ ಆಯೋಗಕ್ಕೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಈ ವಾರಾಂತ್ಯದೊಳಗೆ ಅಧಿಕೃತ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.

Advertisement

ಇದರ ಜತೆಗೆ 40 ಪರ್ಸೆಂಟ್‌ ಕಮಿಷನ್‌ ಆರೋಪದ ತನಿಖಾ ಸಮಿತಿಯ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆ.

ಹತ್ತು ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಒಳಮೀಸಲು ಜಾರಿ ಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿತ್ತು. ಈ ಸಂಬಂಧ ಆಯೋಗ ರಚನೆ ಮಾಡಿ ಮೂರು ತಿಂಗ ಳೊಳಗೆ ಅನುಷ್ಠಾನ ಮಾಡುವ ಭರವಸೆ ನೀಡಲಾಗಿತ್ತು. ಆದರೆ ಆಯೋಗಕ್ಕೆ ಯಾರನ್ನು ಅಧ್ಯಕ್ಷ ರನ್ನಾಗಿ ಮಾಡಬೇಕೆಂಬ ಬಗ್ಗೆ ಸಹಮತ ಮೂಡಿರಲಿಲ್ಲ.
ಮೀಸಲು ವರ್ಗೀಕರಣಕ್ಕೆ ಆಗ್ರಹಿಸುತ್ತಿರುವ ಸಂಘಟನೆಗಳ ಕಾರ್ಯಕರ್ತರು ನ್ಯಾ| ದಾಸ್‌ ಅವರನ್ನೇ ಆಯೋಗಕ್ಕೆ ಅಧ್ಯಕ್ಷ ರನ್ನಾಗಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.

ನ್ಯಾ| ದಾಸ್‌ಗೆ ಮೀಸಲು ವಿಷಯಕ್ಕೆ ಸಂಬಂಧಿಸಿ ಆಳವಾದ ಜ್ಞಾನ ಇರುವುದರಿಂದ ಅವರೇ ಈ ಆಯೋಗವನ್ನು ಮುನ್ನಡೆಸು ವುದಕ್ಕೆ ಸೂಕ್ತ ಎಂದು ಅಭಿ ಪ್ರಾಯ ಮಂಡಿಸಿದ್ದಾರೆ. ಇದಕ್ಕೆ ಸಿಎಂ ಒಪ್ಪಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next