Advertisement

ಪಂಡಿತರಿಂದ ಸಂಸ್ಕೃತ ಉಳಿದು-ಬೆಳೆದಿದೆ

02:15 PM Mar 07, 2018 | |

ಮೈಸೂರು: ಕನ್ನಡ ಸಾಹಿತ್ಯ ಮತ್ತು ಶಾಸ್ತ್ರ ಸಂಸ್ಕೃತದಿಂದ ಪ್ರೇರಣೆಗೊಂಡು ಶ್ರೀಮಂತಗೊಂಡಿದ್ದು, ಇಂದಿನ ಪ್ರಾಧ್ಯಾಪಕರು ಅಸಡ್ಡೆ ತೋರದೆ ಸಂಸ್ಕೃತವನ್ನು ಬೋಧಿಸಬೇಕಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಪ್ರೊ.ಎಂ.ಶಿವಕುಮಾರಸ್ವಾಮಿ ಹೇಳಿದರು.

Advertisement

ಜೆಎಸ್‌ಎಸ್‌ ಅಂತಾರಾಷ್ಟ್ರೀಯ ಸಂಸ್ಕೃತ ಸಂಶೋಧನಾ ಕೇಂದ್ರ ಮತ್ತು ಜೆಎಸ್‌ಎಸ್‌ ಮಹಿಳಾ ಕಾಲೇಜು ಸಂಸ್ಕೃತ ವಿಭಾಗದಿಂದ ಸರಸ್ವತಿಪುರಂನ ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಕೃತ ಸಾಹಿತ್ಯ ಚಿಂತನೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಂಸ್ಕೃತ ಸುದೀರ್ಘ‌ವಾದ ಪರಂಪರೆ ಹೊಂದಿದ್ದು,

ವೇದ ಶಾಸ್ತ್ರ ಸಾಹಿತ್ಯ ಮತ್ತು ಸಂಶೋಧನೆಗೆ ಸಂಸ್ಕೃತ ಓದು ಅತ್ಯಗತ್ಯವಾಗಿದೆ. ಸಂಸ್ಕೃತ ಮತ್ತು ಕನ್ನಡದಲ್ಲಿ ಕಾವ್ಯ ರಚನೆ ಮಾಡಿರುವ ಕನ್ನಡದ ಕವಿಗಳು ತಮ್ಮನ್ನು ಉಭಯ ಕವಿಗಳೆಂಬ ಹೆಮ್ಮೆಹೊಂದಿದ್ದು, ಇಂದಿಗೂ ಹೆಮ್ಮೆಪಡುತ್ತಿದ್ದಾರೆ. ಸಂಸ್ಕೃತ ಸಹಸ್ರ ವರ್ಷಗಳಿಂದ ವಿವಿಧ ಪ್ರಕಾರದಲ್ಲಿ ಸಹೃದಯರಿಗೆ ಆನಂದ ನೀಡಿದ್ದರೂ, 19ನೇ ಶತಮಾನದಿಂದ ನಂತರ ಅರೆ ವಿದ್ಯೆಯಲ್ಲಿರುವಂತೆ ಕಾಣುತ್ತಿದೆ.

ಸಂಸ್ಕೃತ ಎನ್ನುವುದು ಬ್ರಾಹ್ಮಣರ ಭಾಷೆ, ಮನುವಾದಿಗಳ ಭಾಷೆ ಎಂಬ ಭಾವನೆಯಿಂದಾಗಿ ಸೊರಗಿದ ಕಾಲದಲ್ಲಿ ಕೆಲವು ಸಂಸ್ಕೃತ ಪಂಡಿತರಿಂದಾಗಿ ಸಂಸ್ಕೃತ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ಸಂಸ್ಕೃತ ಭಾಷೆ ಮತ್ತು ಸಂಶೋಧನೆಯನ್ನು ಸಂಸ್ಕೃತ ಪಂಡಿತರು ಉಳಿಸಿ ಬೆಳಸಿದ್ದಾರೆ ಎಂದು ಹೇಳಿದರು.

ಸಂಸ್ಕೃತ ನಿಂತ ನೀರಲ್ಲ: ಕೇರಳದ ಸಂಸ್ಕೃತ ಸಂಸ್ಥಾನ ಪ್ರತಿಷ್ಠಾನದ ಪ್ರಾಧ್ಯಾಪಕ ಪ್ರೊ.ರಾಮಚಂದ್ರ ಜೋಷಿ ಮಾತನಾಡಿ, ಸಂಸ್ಕೃತ ಎಂಬುದು ನಿಂತ ನೀರಲ್ಲ, ಅದು ಕಾಲಕಾಲಕ್ಕೆ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಾ ಹರಿಯುವ ನೀರಿನಂತೆ ಸಾಗುತ್ತಿದೆ.

Advertisement

ಸಂಸ್ಕೃತದಲ್ಲಿ ಅಲಂಕಾರ ಶಾಸ್ತ್ರ ಮುಖವಾದದ್ದು, ಭರತನಾಟ್ಯ ಶಾಸ್ತ್ರದ ನಾಲ್ಕು ಅಲಂಕಾರ ಶಾಸ್ತ್ರ ಇಂದಿಗೂ 124 ಶಾಸ್ತ್ರಗಳಾಗಿದ್ದು, ಸಂಸ್ಕೃತ ತನ್ನಲ್ಲಿರುವ ಅಂಶಗಳನ್ನು ಕಾಲ ಕಾಲಕ್ಕೆ ಪಡೆದುಕೊಳ್ಳುತ್ತಿದೆ. ಪ್ರಾಚೀನದಲ್ಲಿ ಸಂಸ್ಕೃತ ಕಾವ್ಯಗಳು ಇಂದಿಗೂ ಹೊಸ ರೂಪುರೇಷೆಗಳನ್ನು ಪಡೆದುಕೊಳ್ಳುತ್ತಿದ್ದು, ಅಲಂಕಾರ ಶಾಸ್ತ್ರ ಸಹ ಸಂಸ್ಕೃತದಲ್ಲಿ ಹುಟ್ಟಿಕೊಂಡಿತು.

ಶರೀರದ ಅಲಂಕಾರದಂತೆ ಕಾವ್ಯದ ಅಂದ ಚೆಂದಕ್ಕೆ ಅಲಂಕಾರ ಭೂಷಣವಾಗಿ, ಶೃಂಗಾರಿಸುತ್ತದೆ. ರಾಮಾಯಣ ಮೂಲ ಸಂಸ್ಕೃತ ಕಾವ್ಯವಾದರೂ, ತನ್ನ ವಿಶಿಷ್ಟ ಅಲಂಕಾರ ಶಕ್ತಿಯಿಂದ ಹಲವು ಭಾಷೆಗಳಲ್ಲಿ ವಿಶೇಷ ರೂಪು ಪಡೆದುಕೊಳ್ಳುತ್ತಿದೆ. ಅದರಂತೆ ಸಂಸ್ಕೃತ ಭಾಷೆಯು ತನ್ನ ವಿಶಿಷ್ಟ ಶಕ್ತಿಯಿಂದ ಐರೋಪ್ಯ ರಾಷ್ಟ್ರಗಳಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಸಾಮಾನ್ಯ ಆಡಳತ ನಿರ್ದೇಶಕ ಶಂಕರಪ್ಪ, ಪ್ರಾಂಶುಪಾಲ ಡಾ.ಕೆ.ವಿ.ಸುರೇಶ್‌, ಸಂಸ್ಕೃತ ಉಪನ್ಯಾಸ ಡಾ.ವಿ.ಪಿ.ಷಡಕ್ಷರಿ, ಕಾಲೇಜಿನ ಶೈಕ್ಷಣಿಕ ಡೀನ್‌ ಡಾ.ಎಚ್‌.ಬಿ.ಸಿ.ಸುರೇಶ್‌, ವಿದುಷಿ ಸುನಂದ ಭೂಪಾಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next