Advertisement

ಚಿತ್ರಕಲಾ ಪರಿಷತ್ತಿನಲ್ಲಿ ಸಂಕ್ರಾಂತಿ ಚಿತ್ತಾರ

11:51 AM Jan 13, 2018 | Team Udayavani |

ಬೆಂಗಳೂರು: ದೇಶದ ವಿವಿಧ ಭಾಗದ ಕರಕುಶಲ ಕರ್ಮಿಗಳು ತಯಾರಿಸಿದ ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ಸಾಮಗ್ರಿ, ಪೂಜಾ ಸಾಮಗ್ರಿ, ವಿವಿಧ ವಿನ್ಯಾಸದ ಕಲಾಕೃತಿಗಳು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆಯುತ್ತಿರುವ ಸಂಕ್ರಾಂತಿಯ ಚಿತ್ತಾರಕ್ಕೆ ವಿಶೇಷ ಮೆರಗು ನೀಡಿದೆ.

Advertisement

ಕರ್ನಾಟಕ, ಕಾಶ್ಮೀರ, ಪಂಜಾಬ್‌, ಹರಿಯಾಣ, ರಾಜಸ್ತಾನ್‌, ಗುಜರಾತ್‌ ಸೇರಿ ಸುಮಾರು 18 ರಾಜ್ಯದ 200ಕ್ಕೂ ಅಧಿಕ ಕರಕುಶಲ ಕರ್ಮಿಗಳು 100ಕ್ಕೂ ಅಧಿಕ ಮಳಿಗೆಯಲ್ಲಿ ತಮ್ಮ ಕರಕುಶಲ ವಸ್ತುಗಳ  ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ.

ಮಧ್ಯಪ್ರದೇಶದ ಚಾಂದೇರಿಯ ಪುರುಷರ ಸ್ಯೂಟ್‌, ಬನಾರಸಿ ರೇಷ್ಮೆ ಬಟ್ಟೆಗಳು, ರಾಜಸ್ಥಾನಿ ಕಲಾಂಕರಿ ಪ್ರಿಂಟೆಡ್‌ ಬೆಡ್‌ಸೀಟ್‌, ಜೈಪುರಿ ಕುರ್ತಾಸ್‌, ಕಾಶ್ಮೀರಿ ಪಶ್ಮಿನಾ ಸಿಲ್ಕ್ ವಸ್ತ್ರ,  ಶಾಲ್‌, ಕಾಪೆìಟ್‌, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕಾ ಸಾಮಗ್ರಿಗಳು, ಚಿತ್ರಾಕೃತಿಗಳು, ಸೌಂದರ್ಯ ವರ್ಧಕಗಳು, ವಿವಿಧ ವಿನ್ಯಾಸದ ಬಳೆ, ಬೆಂಡೊಲೆ, ಹೇರ್‌ ಮತ್ತು ಹೆಡ್‌ ವ್ಯಾರ್‌ ಹೀಗೆ ನಾನಾ ರೀತಿಯ ವಸ್ತುಗಳು ಇಲ್ಲವೆ. 

ಸಂಕ್ರಾಂತಿಗಾಗಿ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿದೆ. ಚಿತ್ರಕಲಾ ಪರಿಷತ್ತು ಮುಂಭಾಗದಲ್ಲಿ ರಥ ರಚನೆ ಮಾಡಿ, ಅದಕ್ಕೂ ಹೂವಿನ ಅಲಂಕಾರ ಮಾಡಲಾಗಿದೆ. ಚಿತ್ರಕಲಾ ಪರಿಷತ್ತುವಿನ ಸಹಾಯಕ ಕಾರ್ಯದರ್ಶಿ ಅಪ್ಪಾಜಯ್ಯ, ಪ್ರಧಾನ ವ್ಯವಸ್ಥಾಪಕಿ ಕಮಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

ಮೇಳದಲ್ಲಿ ಏನೆಲ್ಲಾ ಸಿಗುತ್ತೆ?: ಚಿತ್ರಕಲಾ ಪರಿಷತ್ತಿನಲ್ಲಿ ಜ.21ರವರೆಗೆ ನಡೆಯಲಿರುವ ಸಂಕ್ರಾಂತಿ ಚಿತ್ತಾರ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಟಿ ಶುಭಾ ಪುಂಜಾ ಶುಕ್ರವಾರ ಚಾಲನೆ ನೀಡಿದರು. ನುರಿತ ನೇಕಾರರು ಸಿದ್ಧಪಡಿಸಿದ ಅತ್ಯುತ್ತಮ ಗುಣಮಟ್ಟದ ರೇಷ್ಮೆ ಹಾಗೂ ವಿವಿಧ ಬಗೆಯ ಸಿದ್ಧ ಉಡುಪುಗಳು,

Advertisement

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕೈಮಗ್ಗದಿಂದ ಸಿದ್ಧಪಡಿಸಿರುವ ವಿಭಿನ್ನ ಶೈಲಿಯ ಹತ್ತಿ ಮತ್ತು ರೇಷ್ಮೆ ಸೀರೆಗಳು, ಮಣ್ಣಿನ ಮಡಿಕೆ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಕಾಂತಾ ವರ್ಕ್ಸ್ ಡ್ರೆಸ್‌ ಮೆಟೀರಿಯಲ್ಸ್‌, ಪ್ರಿಂಟೆಡ್‌ ಅಪ್ಪಟ ರೇಷ್ಮೆ ಸೀರೆ, ಹುಬ್ಬಳ್ಳಿ ರೇಷ್ಮೆ ಕಾಟನ್‌ ಸೀರೆ, ಪಶ್ಚಿಮ ಬಂಗಾಲದ ಬ್ಯೂಟಿಕ್‌ ಸೀರೆ, ಖಾದಿ ಸೀರೆ, ಬಿಹಾರರದ ರೇಷ್ಮೆ ಸೀರೆಯ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಸಂಕ್ರಾಂತಿಯನ್ನು ನಮ್ಮ ವಿಶೇಷ ಆಚರಣೆ. ಚಿತ್ರಕಲಾ ಪರಿಷತ್ತು ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟದ ಮೂಲಕ ಸಂಭ್ರಮಕ್ಕೆ ವಿಶೇಷ ಮೆರಗು ನೀಡಿದೆ. ದೇಶದ ವಿವಿಧ ಭಾಗದಿಂದ ಬಂದ ಕಲಾವಿದರ ಉತ್ಪನ್ನಗಳು ಇಲ್ಲಿ ಲಭ್ಯವಿವೆ. ಬೆಂಗಳೂರಿಗರು ಇದರ ಸದುಪಯೋಗ ಪಡೆಯಬೇಕು.
-ಶುಭಾ ಪುಂಜಾ, ನಟಿ

ಕರಕುಶಲ ವಸ್ತುಗಳ ಪ್ರದರ್ಶನ ಪ್ರತಿ ತಿಂಗಳೂ ನಡೆಯುತ್ತದೆ. ಚಿತ್ರಕಲಾ ಪರಿಷತ್‌ನ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಮಧ್ಯವರ್ತಿಗಳ ಸಮಸ್ಯೆ ತಪ್ಪಿಸಲು ಬಿಬಿಎಂಪಿಯಿಂದ 36 ಲಕ್ಷ ಅನುದಾನ ನೀಡಲಾಗಿದ್ದು, ನಿರಂತರ ವಸ್ತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
-ಅಪ್ಪಾಜಯ್ಯ, ಸಹಾಯಕ ಕಾರ್ಯದರ್ಶಿ, ಚಿತ್ರಕಲಾ ಪರಿಷತ್ತು

Advertisement

Udayavani is now on Telegram. Click here to join our channel and stay updated with the latest news.

Next