ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿಯಂದು ಪ್ರತಿ ವರ್ಷದಂತೆ ಈ ಬಾರಿಯೂ ಕಾಟಿಮರಾಯನ ಹಬ್ಬದ ಆಚರಣೆ ನಡೆಯಿತು. ರೈತರು ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿ ಸುವ, ಕಿಚ್ಚು ಹಾಯಿಸುವ ಆಚರಣೆಗಳು ನಡೆದವು. ತಾಲೂಕಿನ ಕಾಡನೂರು, ತೂಬಗೆರೆ, ಕುಂಟನಹಳ್ಳಿ, ಮೆಳೆಕೋಟೆ ಮೊದಲಾದ ಗ್ರಾಮಗಳಲ್ಲಿ ರಾಸುಗಳಿಗೆ ವಿಶೇಷ ಅಲಂಕಾರ ಮಾಡಿ ಕಿಚ್ಚು ಹಾಯಿಸುವ ಆಚರಣೆ ಮಾಡದರು.
ತಾಲೂಕಿನ ಕಾಡನೂರಿಲ್ಲಿ ನೂತನವಾಗಿ ನಿರ್ಮಾ ಣವಾದ ಕಾಟಿಮರಾಯಸ್ವಾಮಿ ದೇವಾಲಯ ಉದ್ಘಾಟನೆ ನಡೆಯಿತು. ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು, ದಾಸೋಹ, ಚನ್ನಕೇಶವಸ್ವಾಮಿ ಭಜನಾ ಮಂಡಲಿ ಕಲಾವಿದರಿಂದ ಭಜನೆ, ರಾಸುಗಳ ಉತ್ಸವ ಮತ್ತು ಮೆರವಣಿಗೆ, ಕಿಚ್ಚು ಹಾಯಿಸುವ ಕಾರ್ಯಕ್ರಮ, ಮತ್ತು ಪ್ರಸಾದ ವಿನಿಯೋಗ ಮಾಡಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಅವರಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆಯಾಗಿದೆ: ಶ್ರೀರಾಮುಲು
ತಾಲೂಕಿನ ತೂಬಗೆರೆ ಗ್ರಾಮದ ತೇರಿನ ಬೀದಿ ಯಲ್ಲಿ ಸಂಕ್ರಾಂತಿ ಅಂಗವಾಗಿ ತೂಬಗೆರೆ ಹೋಬಳಿ ಹಿತರಕ್ಷಣಾ ಸಮಿತಿಯಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಸಿದರು. ಎತ್ತುಗಳಿಗೆ ಹಾಗೂ ರಾಗಿ ರಾಶಿಗೆ ಮಹಿಳೆಯರಿಂದ ಪೂಜೆ ಸಲ್ಲಿಸಿ, ಸಾಮೂಹಿಕವಾಗಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದರು. ತಾಲೂಕಿನ ಮೆಳೆಕೋಟೆ ಕ್ರಾಸ್‌ನ ಎಸ್.ಜೆ.ಸಿ.ಆರ್.ವಿದ್ಯಾನಿಕೇತನ ಶಾಲಾ ಮಕ್ಕಳಿಂದ ಸಂಕ್ರಾಂತಿ ಸಂಭ್ರಮ ಆಚರಿಸಿದರು.
ಸಂಕ್ರಾಂತಿ ಸಂಭ್ರಮವನ್ನು ಗ್ರಾಪಂ ಸದಸ್ಯ ಎಚ್ .ಎ.ನಾಗರಾಜ್, ಗೋ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಶಾಲೆಯ ಅಕಾಡೆಮಿಕ್ ಸಲಹೆಗಾರ ಎಸ್. ವೆಂಕಟೇಶಪ್ಪ, ಶಾಲೆಯ ಮುಖ್ಯಶಿಕ್ಷಕ ಎಚ್.ಎಲ್. ವಿಜಯಕುಮಾರ್ ಇದ್ದರು.