Advertisement

ಜೆಡಿಎಸ್‌: ಜಿಲ್ಲಾಧ್ಯಕ್ಷ ಸ್ಥಾನ ತೊರೆಯಲು ಮುಂದಾದ ಸಂಕೇತ್‌ ಪೂವಯ್ಯ

03:19 PM Mar 16, 2017 | Team Udayavani |

ಮಡಿಕೇರಿ: ತನ್ನನ್ನು ಜೆಡಿಎಸ್‌ ಜಿಲ್ಲಾಧ್ಯಕ್ಷ ಸ್ಥಾನದಿಂದ ಮುಕ್ತ ಗೊಳಿಸಿ ಪಕ್ಷದಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಬೇಕೆಂದು ಪಕ್ಷದ ರಾಜ್ಯ ವರಿಷ್ಠರಲ್ಲಿ ಮನವಿ ಮಾಡಿ ಕೊಂಡಿರುವ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್‌ ಪೂವಯ್ಯ, ಭಿನ್ನಮತೀಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿಷ್ಕ್ರಿಯವಾಗಿದ್ದ ಜಾತ್ಯಾತೀತ ಜನತಾ ದಳವನ್ನು ಸಕ್ರಿಯಗೊಳಿಸಿದ ತಮ್ಮ ಪರಿಶ್ರಮವನ್ನು ಪರಿಗಣಿಸದ ಕೆಲವರು ಪಕ್ಷವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚೆಗೆ ಗೋಣಿಕೊಪ್ಪಲಿನಲ್ಲಿ ಸಭೆ ನಡೆಸಿದ ಕೆಲವರು ಜಿಲ್ಲಾಧ್ಯಕ್ಷರು ಜಿಲ್ಲಾ ಮಟ್ಟದ ಸಭೆ ನಡೆಸಲಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹಿಂದೆ ಪಕ್ಷದ ನೇತೃತ್ವ ವಹಿಸಿದ್ದವರು ಎಷ್ಟು ಬಾರಿ ಸಭೆ ನಡೆಸಿದ್ದಾರೆ ಎಂದು ಸಂಕೇತ್‌ ಪೂವಯ್ಯ ಪ್ರಶ್ನಿಸಿದರು.

ಪಕ್ಷದೊಳಗೆ ಗೊಂದಲಗಳಿದ್ದಿದ್ದರೆ ತನ್ನ ಬಳಿ ಅಥವಾ ಪಕ್ಷದ ಮುಖಂಡ ಬಿ.ಎ. ಜೀವಿಜಯ ಅವರ ಬಳಿ ಹಂಚಿ ಕೊಳ್ಳಲು ಅವಕಾಶವಿತ್ತು. ಆದರೆ ಹೀಗೆ ಮಾಡದೆ ಗೊಂದಲವನ್ನು ಬಹಿ ರಂಗಪಡಿಸುವ ಮೂಲಕ ಬೇಸರ ಮೂಡಿಸಿದ್ದಾರೆ. ಆದ್ದರಿಂದ ಮುಂದಿನ ಮೂರು ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಜಿಲ್ಲಾಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು. 

ಪಕ್ಷದ ರಾಜ್ಯ ಸಮಿತಿಯಲ್ಲಿ ಸಕ್ರಿಯ ನಾಗಲು ತಾನು ತಯಾ ರಿದ್ದು, ಜಿಲ್ಲಾಧ್ಯಕ್ಷ ರಾಗಿಯೇ ಮುಂದುವರಿಯುವಂತೆ ವರಿಷ್ಠರು ಸೂಚಿಸಿದಲ್ಲಿ ಭಿನ್ನ ಮತೀಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಂಕೇತ್‌ ಪೂವಯ್ಯ ಸ್ಪಷ್ಟಪಡಿಸಿದರು.
ಇತ್ತೀಚೆಗೆ ನಡೆದ ಎಪಿಎಂಸಿ ಚುನಾ ವಣೆಯಲ್ಲಿ ಜೆಡಿಎಸ್‌ 2 ಸ್ಥಾನಗಳಿಂದ 5 ಸ್ಥಾನಗಳಿಗೆ ಏರಿಕೆ ಕಂಡಿದೆ. ಶೇ.95 ರಷ್ಟು ಪಕ್ಷದ ಪದಾಧಿಕಾರಿಗಳು ತಮ್ಮೊಂದಿಗಿದ್ದು, ಕೆಲವರು ಮಾತ್ರ ಪಕ್ಷದಲ್ಲಿದ್ದುಕೊಂಡಂತೆ ನಟಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ ಪರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ವರಿಷ್ಠರು ತಮಗೆ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧರಿರುವುದಾಗಿ ಪೂವಯ್ಯ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಕೈಗಾರಿಕಾ ಘಟಕದ ಅಧ್ಯಕ್ಷರಾದ ಕುಸುಮ್‌ ಕಾರ್ಯಪ್ಪ, ಪ್ರಮುಖರಾದ ಎಂ.ಎನ್‌. ಮಾಚಯ್ಯ, ಎಂ.ಸಿ. ದೇವಯ್ಯ, ಎಚ್‌.ಇ. ಗೋಪಾಲ್‌ ಹಾಗೂ ಪಿ.ವಿ. ರೆನ್ನಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next