Advertisement

Sankeshwara: ಕಳ್ಳರ ಹಾವಳಿ: 9.5 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಖದೀಮರು

11:44 AM Mar 07, 2024 | Team Udayavani |

ಸಂಕೇಶ್ವರ: ಮನೆಗೆ ನುಗ್ಗಿ ಕಳ್ಳರು ಮನೆಯಲ್ಲಿದ್ದ 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಮಡ್ಡಿಗಲ್ಲಿಯ ರಹವಾಸಿಯಾದ ಇಫ್ತಕಾರ ಗೌಸಸಾಹೇಬ ಮೋಮಿನ ಎಂಬವರ ಮನೆಗೆ ಕಳ್ಳರು ಮಧ್ಯರಾತ್ರಿ ನುಗ್ಗಿ 141 ಗ್ರಾಂ (14) ತೋಲಿ ಚಿನ್ನಾಭರಣ ಮತ್ತು 30 ಗ್ರಾಂ (ತೋಲಿ) ಬೆಳ್ಳಿ ಮತ್ತು 3.5 ಲಕ್ಷ ನಗದು.. ಹೀಗೆ ಒಟ್ಟು 9.5 ಲಕ್ಷ ಮೌಲ್ಯದ ಚಿನ್ನಾಭರಣ ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳತನವಾದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ.

ಮನೆಯವರು ಮನೆಗೆ ಬಂದ ಬಳಿಕ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಸಂಕೇಶ್ವರ ಪಿಎಸ್‌ಐ ಶಿವಶಂಕರ ಮುಕ್ರಿ ಮಾರ್ಗದರ್ಶನದಲ್ಲಿ ಬುಧವಾರ ಬೆಳಿಗ್ಗೆ ಶ್ವಾನದಳ, ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಆಗಮಿಸಿ ಮನೆಯಲ್ಲಿ ಶೋಧ ನಡೆಸಲು ಆರಂಭಿಸಿದರು. ಓರ್ವ ಕಳ್ಳ ಮಹಡಿ ಮೇಲೆ ಹತ್ತಿ ಆಭರಣಗಳನ್ನು ದೋಚಿ ಬ್ಯಾಗ್‌ ನಲ್ಲಿ ಹಾಕುವ ದೃಶ್ಯಾವಳಿಗಳು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಚಾಣಾಕ್ಷ ಕಳ್ಳ ಮುಖ ಕಾಣದಂತೆ ಮುಖವಾಡ ಧರಿಸಿದ್ದನು. ಕಳ್ಳ ಪ್ರಾರ್ಥನಾ ಮಂದಿರದ ಸಿ.ಸಿ. ಕ್ಯಾಮರಾದಲ್ಲಿ ಕೂಡಾ ಕಂಡು ಬಂದಿದ್ದಾನೆ ಎನ್ನಲಾಗಿದೆ.

Advertisement

ಪೊಲೀಸರು ಈ ಎಲ್ಲ ಸಿ.ಸಿ. ಕ್ಯಾಮರಾ ದೃಶ್ಯಾವಳಿಗಳ ಮಾಹಿತಿ ಕಲೆ ಹಾಕಿ ಕಳ್ಳನ ಸೆರೆ ಹಿಡಿಯಲು ಜಾಲ ಬೀಸಿದ್ದಾರೆ.

ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next