Advertisement

ಅಮಿತ್ ಶಾ ಮನಸ್ಸು ಮಾಡಿದರೆ ಬೆಳಗಾವಿ ಸಮಸ್ಯೆ ಬಗೆಹರಿಸಬಹುದು: ರಾವತ್

09:57 AM Jan 20, 2020 | keerthan |

ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಗೃಹ ಸಚಿವ ಅಮಿತ್ ಶಾ ಅವರು ಮನಸ್ಸು ಮಾಡಿದರೆ ಬೆಳಗಾವಿ ಗಡಿ ವಿವಾದವನ್ನೂ ಬಗೆಹರಿಸಬಹುದು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

Advertisement

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಗೃಹ ಸಚಿವಾಲಯ ಕಾಶ್ಮೀರ ವಿಚಾರವನ್ನು ಬಗೆಹರಿಸುವುದಾದರೆ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬೆಳಗಾವಿ ಗಡಿ ವಿಚಾರವನ್ನೂ ಬಗೆಹರಿಸಬಹುದು ಎಂದರು.

ಬೆಳಗಾವಿ ಗಡಿ ಸಮಸ್ಯೆ ಬಹುಕಾಲದಿಂದ ಇರುವ ತಕರಾರು ಆಗಿದ್ದು, ಕೇಂದ್ರ ಗೃಹ ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ಕೇವಲ ಜಾಗಕ್ಕಾಗಿ ಇರುವ ವಿವಾದವಲ್ಲ, ಇದು ಮರಾಠಿ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಲು ಹೋರಾಟ ಎಂದಿರುವ ರಾಜ್ಯಸಭಾ ಸದಸ್ಯ ರಾವತ್, ಲಕ್ಷಾಂತರ ಮರಾಠಿ ಭಾಷಿಗರು ಇಲ್ಲಿ ನೆಲೆಸಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮಾತನಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next