Advertisement

ಕಾಶ್ಮೀರದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ: ಸಂಜಯ್‌ ರಾವುತ್‌

05:40 PM Jun 03, 2022 | Team Udayavani |

ಮುಂಬಯಿ: ಕಾಶ್ಮೀರದಲ್ಲಿ ನಡೆದ ವಲಸೆ ಮತ್ತು ಹತ್ಯೆಗಳ ಕುರಿತು ಕಾಶ್ಮೀರ ಫೈಲ್ಸ್‌-2 ರಂತಹ ಚಲನಚಿತ್ರವನ್ನು ನಿರ್ಮಿಸಬೇಕು ಮತ್ತು ಈ ಕಾಶ್ಮೀರ ಫೈಲ್ಸ್-2 ಕ್ಕೆ ಯಾರು ಕಾರಣ ಎಂಬುದನ್ನು ಜನರ ಮುಂದೆ ತೋರಿಸಬೇಕು ಎಂದು ಶಿವಸೇನೆ ನಾಯಕ ಸಂಜಯ್‌ ರಾವತ್‌ ಹೇಳಿದ್ದಾರೆ.

Advertisement

ಕಾಶ್ಮೀರದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಗೃಹ ಸಚಿವರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರೊಂದಿಗೆ ಮಹತ್ವದ ಸಭೆಯನ್ನು ಕರೆದಿದ್ದಾರೆ. ಆದರೆ ಇಂದು 1990ರಲ್ಲಿ ಇದ್ದ ಪರಿಸ್ಥಿತಿಯೇ ಇದೆ. ನೀವು ಕಾಶ್ಮೀರಿ ಪಂಡಿತರ ವಾಪಸಾತಿ ಬಗ್ಗೆ ಮಾತನಾಡಿ ಮತ ಪಡೆದಿದ್ದೀರಿ. ಆದರೆ ಆರ್ಟಿಕಲ್‌ 370 ರ ನಂತರ ಕಾಶ್ಮೀರದಲ್ಲಿ ಜನರ ಪರಿಸ್ಥಿತಿ ಸುಧಾರಿಸಿಲ್ಲ. ನಿನ್ನೆ ಕೂಡ ಇಬ್ಬರು ಸಾವನ್ನಪ್ಪಿದ್ದಾರೆ.

ಸರಕಾರದಿಂದ ಯಾವುದೇ ಭದ್ರತೆ ಒದಗಿಸಿಲ್ಲ. ಬೇರೆ ಪಕ್ಷದ ರಾಜ್ಯದಲ್ಲಿ ಇದು ನಡೆದಿದ್ದರೆ ಬಿಜೆಪಿಯವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ, ಹಿಂದುತ್ವದ ಹೆಸರಿನಲ್ಲಿ ಇಡೀ ದೇಶಕ್ಕೆ ಕರೆ ನೀಡುತ್ತಿದ್ದರು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹ ಸಚಿವರು, ಪ್ರಧಾನಿ ಮತ್ತು ಬಿಜೆಪಿ ಆಡಳಿತದ ಹೊರತಾಗಿಯೂ, ಕಾಶ್ಮೀರಿ ಪಂಡಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಅಲ್ಲಿಂದ ಪಲಾಯನ ಮಾಡುತ್ತಿದ್ದಾರೆ ಎಂದು ರಾವುತ್‌ ಹೇಳಿದ್ದಾರೆ.

ಇದನ್ನೂ ಓದಿ:ಅವಕಾಶ ವಂಚಿತ ಅತಿಥಿ ಉಪನ್ಯಾಸಕರಿಗೆ ಪರ್ಯಾಯ ವ್ಯವಸ್ಥೆ: ಅಶ್ವತ್ಥ ನಾರಾಯಣ

ಈ ದೇಶದ ಹಲವು ರಾಜ್ಯಗಳಲ್ಲಿ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು, ಅವರ ಪ್ರಜೆಗಳು ಹಿಂದೂಗಳಾಗಲಿ ಅಥವಾ ಮುಸ್ಲಿಮರಾಗಲಿ ಅತ್ಯಂತ ಭಯದಿಂದ ಬದುಕುತ್ತಿದ್ದಾರೆ. ಮನೆ, ಕಚೇರಿಗಳಿಗೆ ನುಗ್ಗಿ ಹತ್ಯೆ ಮಾಡಲಾಗುತ್ತಿದೆ. ಸೆಕ್ಷನ್‌ 370 ರದ್ದಾದ ನಂತರವೂ ಅಲ್ಲಿನ ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ ಎಂದು ಶಿವಸೇನೆ ಸಂಸದ ಕಿಡಿಕಾರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next