ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಂಜಯ್ ಬಂಗಾರ್ ಅವರನ್ನು ಮುಂದಿನ ಎರಡು ವರ್ಷಗಳ ಕಾಲಕ್ಕೆ ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಲಾಗಿದೆ.
ಫೆಬ್ರವರಿಯಲ್ಲಿ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕಗೊಂಡಿದ್ದ ಬಂಗಾರ್ ಅವರು ಮೈಕ್ ಹೆಸ್ಸನ್ ಅವರಿಂದ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಹೆಸ್ಸನ್ ಕ್ರಿಕೆಟ್ ನಿರ್ದೇಶಕರಾಗಿ ತಂಡದೊಂದಿಗೆ ಉಳಿಯಲಿದ್ದಾರೆ.
ಆಸ್ಟ್ರೇಲಿಯಾದ ಸೈಮನ್ ಕ್ಯಾಟಿಚ್ ವೈಯಕ್ತಿಕ ಕಾರಣಗಳಿಂದ ಕೆಳಗಿಳಿದ ನಂತರ ಯುಎಇಯಲ್ಲಿ ನಡೆದ ಐಪಿಎಲ್‌ನ ಎರಡನೇ ಹಂತದಲ್ಲಿ ಮುಖ್ಯ ಕೋಚ್‌ನ ಹೆಚ್ಚುವರಿ ಹುದ್ದೆಯನ್ನು ಹೆಸ್ಸನ್ ಹೊತ್ತಿದ್ದರು.
Related Articles
ನಾವು ಸಂಜಯ್ ಬಂಗಾರ್ ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಮುಖ್ಯ ಕೋಚ್ ಆಗಿ ನೇಮಿಸಿದ್ದೇವೆ ಎಂದು ಹೆಸ್ಸನ್ ಆರ್ ಸಿಬಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
ಆರ್‌ಸಿಬಿಯಲ್ಲಿ ತಮ್ಮ ಹೊಸ ಪಾತ್ರದ ಕುರಿತು ಮಾತನಾಡಿದ ಬಂಗಾರ್, “ನಾನು ತಂಡದಲ್ಲಿ ಕೆಲವು ಅಸಾಧಾರಣ ಮತ್ತು ಪ್ರತಿಭಾವಂತ ಆಟಗಾರರೊಂದಿಗೆ ಕೆಲಸ ಮಾಡಿದ್ದೇನೆ. ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕಾಯುವುದಿಲ್ಲ ಎಂದಿದ್ದಾರೆ.
ಆಲ್ ರೌಂಡರ್ ಆಗಿದ್ದ ಬಂಗಾರ್ ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರು 2014 ರಿಂದ 2019ರ ವರೆಗೆ ಸತತ ಐದು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿದ್ದರು.