Advertisement

ಅಭ್ಯಾಸ ಆರಂಭಿಸಿದ ಸಾನಿಯಾ ಮಿರ್ಜಾ

12:45 AM Mar 14, 2019 | |

ಹೈದರಾಬಾದ್‌: ಸಾನಿಯಾ ಮಿರ್ಜಾ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ. ಮಂಡಿನೋವಿನ ಕಾರಣ 2017 ಅಕ್ಟೋಬರ್‌ ಅನಂತರ ಸಾನಿಯಾ ಟೆನಿಸ್‌ ಆಡುವುದನ್ನು ನಿಲ್ಲಿಸಿದ್ದರು. 2018ರ ಅಕ್ಟೋಬರ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಟೆನಿಸ್‌ನಿಂದ ದೂರವುಳಿದಿದ್ದರು. ಹೆರಿಗೆಯಾಗಿ ಕೇವಲ ನಾಲ್ಕೂವರೆ ತಿಂಗಳಲ್ಲಿ ಮತ್ತೆ ಅಭ್ಯಾಸಕ್ಕೆ ಮರಳಿರುವುದನ್ನು ಸಾನಿಯಾ ಟ್ವಿಟರ್‌ ಮೂಲಕ ಸಾರಿದ್ದಾರೆ. ಇದಕ್ಕೆ ಕೆಲವೇ ನಿಮಿಷಗಳಲ್ಲಿ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ.

Advertisement

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ಸಾನಿಯಾ ಗುರಿಯಾಗಿದೆ.ಅಮೆರಿಕದ ವಿಶ್ವಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್‌, ಬೆಲ್ಜಿಯಂನ ಕಿಮ್‌ ಕ್ಲಿಸ್ಟರ್ ಕೂಡ ತಾಯಿಯಾದ ಕೆಲವೇ ತಿಂಗಳಲ್ಲಿ ಟೆನಿಸ್‌ಗೆ ಮರಳಿದ್ದರು. ಸಾನಿಯಾಗಿಂತ ಮುನ್ನ ತಾಯಿಯಾದ ಸೆರೆನಾ ತಮ್ಮ ಎಂದಿನ ಲಯದೊಂದಿಗೆ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next