Advertisement

ಸಾನಿಯಾ ಪುತ್ರ ಟೆನಿಸಿಗನಾಗ್ತಾನೋ? ಕ್ರಿಕೆಟಿಗನಾಗ್ತಾನೋ?

06:46 PM Apr 10, 2020 | keerthan |

ಸಾನಿಯಾ ಮಿರ್ಜಾ ಎಂದರೆ ಟೆನಿಸ್‌ ಅಭಿಮಾನಿಗಳಿಗೆಲ್ಲ ಅಚ್ಚುಮೆಚ್ಚು, ಇದೇ ಸಾನಿಯಾ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್‌ ಮಲಿಕ್‌ರನ್ನು ಮದುವೆಯಾದ ಸಂದರ್ಭದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದವು.

Advertisement

ಕೊನೆಗೂ ಅಂದುಕೊಂಡಂತೆ ಪಾಕಿಸ್ತಾನದ ಕ್ರಿಕೆಟಿಗನನ್ನೇ ಮದುವೆಯಾಗಿದ್ದ ಸಾನಿಯಾ ಮಿರ್ಜಾ ಪಾಕಿಸ್ಥಾನದ ಸೊಸೆಯಾಗಿದ್ದರೂ, ಭಾರತದ ಆಟಗಾರ್ತಿಯಾಗಿ ಉಳಿದು ದೇಶಪ್ರೇಮ ಮೆರೆದರು.

ಸದ್ಯ ಕೋವಿಡ್-19 ದಿಗ್ಬಂಧನ ಸನ್ನಿವೇಶದಲ್ಲಿ ಸಾನಿಯಾ ತಮ್ಮ ಕುಟುಂಬದೊಂದಿಗೆ ಆರಾಮಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ತಮ್ಮ ಮಗ ಇಝಾನ್‌ ಟೆನಿಸ್‌ ರಾಕೆಟ್‌ ಹಿಡಿದುಕೊಂಡಿರುವ ಚಿತ್ರವನ್ನು ಸಾನಿಯಾ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ತಕ್ಷಣವೇ ಕೆಲವರು ಭವಿಷ್ಯದಲ್ಲಿ ಈತ ಟೆನಿಸಿಗನಾಗುತ್ತಾನೋ ಅಥವಾ ಕ್ರಿಕೆಟಿಗನಾಗುತ್ತಾನೋ ಎನ್ನುವ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next