ದುಬಾೖ: ಡಬ್ಲ್ಯುಟಿಎ ದುಬಾೖ ಚಾಂಪಿಯನ್ ಶಿಪ್’ನ ಮೊದಲ ಸುತ್ತಿನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ಅವರೊಂದಿಗೆ ನೇರ ಸೆಟ್’ಗಳಲ್ಲಿ ಸೋಲುವ ಮೂಲಕ ಸಾನಿಯಾ ಮಿರ್ಜಾ ಟೆನಿಸ್ ವೃತ್ತಿಜೀವನವನ್ನು ಕೊನೆಗೊಳಿಸಿದರು.
ಭಾರತದಿಂದ ಹೊರಹೊಮ್ಮಿದ ಶ್ರೇಷ್ಠ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಸಾನಿಯಾ, ಮಂಗಳವಾರ ದುಬೈನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ಜತೆಗೆ ಮಹಿಳಾ ಡಬಲ್ಸ್‌ನಲ್ಲಿ ಕಣಕ್ಕಿಳಿದ ಅವರು 4-6, 0-6 ಅಂಕಗಳಿಂದ ರಷ್ಯಾದ ಪ್ರಬಲ ಜೋಡಿ ವೆರ್ನೋಕಿಯಾ ಕುಡೆರ್ಮೆಟೊವ-ಲಿಯುಡ್ಮಿಲಾ ಸ್ಯಾಮೊನೊವಾ ವಿರುದ್ಧ ಸೋತರು.
ಪಂದ್ಯ ಒಂದು ಗಂಟೆಯಲ್ಲೇ ಮುಗಿಯಿತು. ಈ ಸೋಲಿನ ನಿರಾಸೆಯೊಂದಿಗೆ 36 ವರ್ಷದ ಸಾನಿಯಾ ತಮ್ಮ ಟೆನಿಸ್ ಬಾಳ್ವೆಗೆ ಕೂಡ ವಿದಾಯ ಹೇಳಿದರು.
2003 ರಲ್ಲಿ ಟೆನಿಸ್ ಪ್ರವೇಶಿಸಿದ ಸಾನಿಯಾ, ಸ್ವಿಸ್ ದಂತಕಥೆ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಮೂರು ಮಹಿಳಾ ಡಬಲ್ಸ್ ಸೇರಿದಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
Related Articles
ಇದನ್ನೂ ಓದಿ: ಕರ್ನಾಟಕದ ರಾಯಚೂರು ಸೇರಿ ಭಾರತದ 19 ನಗರಗಳಲ್ಲಿ ಟ್ರೂ 5ಜಿ ಸೇವೆ ಆರಂಭ