Advertisement
ಪ್ರೋಮೊ ಸಾಂಗ್‌ಗೆ ಸಾಹಿತ್ಯವನ್ನು ನಟ ಸಾರ್ವಭೌಮ ಚಿತ್ರದ ಸಹ ನಿರ್ದೇಶಕ ರಾಜ್ ಗುರು ನಾಯಕ್ ಬರೆದಿದ್ದು, ಮೂರು ತಿಂಗಳ ಅವಿರತ ಶ್ರಮ ವಹಿಸಿ ಪ್ರೊಮೊ ವಿಡಿಯೋವನ್ನು ಸಂಗೀತ್ ಕೆ.ಸಿ. ಅವರು ಸಿದ್ಧಪಡಿಸಿದ್ದಾರೆ. ಲಹರಿ ಸಂಸ್ಥೆ ಮಂಗಳವಾರ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಪುತ್ತೂರು ಯುವಕನಿಗೆ ಸಿನೆಮಾ ಕ್ಷೇತ್ರದಲ್ಲಿ ಅವಕಾಶಗಳ ಹೆಬ್ಟಾಗಿಲು ತೆರೆದಿದೆ.
ಖ್ಯಾತ ಗಾಯಕರಿಂದ ಹಾಡಿಸಿದ ರೈತ ಗೀತೆಗೆ ಸಂಗೀತ್ ಅವರೇ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವಕಾಶ ಅರಸುತ್ತ 2009ರಲ್ಲಿ ಬೆಂಗಳೂರು ಸೇರಿದ ಸಂಗೀತ್‌ಗೆ ‘ಕಿರೀಟ’ ಸಿನೆಮಾದ ನಿರ್ದೇಶಕ ಕಿರಣ್ ಚಂದ್ರ ಪ್ರೋತ್ಸಾಹ ನೀಡಿದರು. ನಟಸಾರ್ವಭೌಮ ಚಿತ್ರತಂಡಕ್ಕೂ ಸಂಗೀತ್ ಅವರನ್ನು ಪರಿಚಯಿಸಿದ್ದು ಕಿರಣ್ ಚಂದ್ರ ಅವರೇ. ಪ್ರಸ್ತುತ ಪುತ್ತೂರು ಹಾಗೂ ಸುಳ್ಯದ ಪುನೀತ್ ಮತ್ತು ಸಿಂಚನ್ ಆರ್ಕೆಸ್ಟ್ರಾಗಳಲ್ಲಿ ಪ್ರಧಾನ ಕೀಬೋರ್ಡ್ ವಾದಕರಾಗಿರುವ ಸಂಗೀತ್ ನಟಸಾರ್ವಭೌಮ ಚಿತ್ರದ ಪ್ರೊಮೊ ಸಾಂಗ್ ನಿರ್ದೇಶಿಸಿದ್ದಾರೆ. ಪ್ರೋಗ್ರಾಮರ್ ಆಗಿ ಅಶ್ವಿನ್ ಬಾಬಣ್ಣ ಪುತ್ತೂರು, ವೈಶಾಖ್ ಭಾರ್ಗವ ಬೆಂಗಳೂರು ಸಹಕಾರ ನೀಡಿದ್ದಾರೆ. ರಜತ್ ಹೆಗ್ಡೆ ಈ ಹಾಡನ್ನು ಹಾಡಿದ್ದಾರೆ.
Related Articles
ಬಹು ನಿರೀಕ್ಷಿತ ನಟಸಾರ್ವಭೌಮ ಚಿತ್ರದ ಪ್ರೊಮೊ ಸಾಂಗ್ ಮಾಡಲು ನೀಡಿರುವುದು ದೊಡ್ಡ ಜವಾಬ್ದಾರಿ. ಈ ಕೆಲಸ ಖುಷಿ ಕೊಟ್ಟಿದೆ. ಯೂಟ್ಯೂಬ್‌ನಲ್ಲಿ ಭರ್ಜರಿ ಹಿಟ್ಸ್ ಬಂದಿರುವುದು ಸಂತೋಷ ಮತ್ತು ಹೆಮ್ಮೆ ಎನಿಸಿದೆ.
– ಸಂಗೀತ್ ಕೆ.ಸಿ.
ಸಂಗೀತ ಕಲಾವಿದ
Advertisement
ವಿಶೇಷ ವರದಿ