Advertisement
ನೆಹರೂ ಯುವ ಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟದ ಸಹಯೋಗದೊಂದಿಗೆ ನಡೆಯುತ್ತಿರುವ ಸ್ವಚ್ಛ ಭಾರತ ಸಮ್ಮರ್ ಇಂಟರ್ನ್ಶಿಪ್‌ನ ಕಾರ್ಯಕ್ರಮದಡಿ ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ವತಿಯಿಂದ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆದ ಸ್ವಚ್ಛತಾ ಮೇಳವನ್ನು ಅವರು ಉದ್ಘಾಟಿಸಿದರು.
ಯುವತಿ ಮಂಡಲದ ಸದಸ್ಯರ ಜತೆಗೆ ಶಾಲಾ ವಿದ್ಯಾರ್ಥಿನಿಯರು ಜಾಗೃತಿ ಗೀತೆಯನ್ನು ಹಾಡಿದರು. ಯುವತಿ ಮಂಡಲದ ಅಧ್ಯಕ್ಷೆ ಗುರುಪ್ರಿಯ ನಾಯಕ್ ಕಸ ವಿಂಗಡಣೆಯ ಪ್ರಾತ್ಯಕ್ಷಿಕೆ, ಸ್ವಚ್ಛತಾ ಮೇಳದಲ್ಲಿ ಪ್ರದರ್ಶಿಸಲಾದ ಚಿತ್ರಗಳ, ಕಾಂಪೋಸ್ಟ್ ಮತ್ತು ಪೈಪ್ ಬಿಟ್‌ಗಳನ್ನು ಮನೆಗಳಲ್ಲಿ ನಿರ್ಮಿಸಿ ಹಸಿ ತ್ಯಾಜ್ಯಗಳ ವಿಲೇವಾರಿಯನ್ನು ಮಾಡುವ ಬಗ್ಗೆ ವಿವರಣೆ ನೀಡಿದರು. ಸದಸ್ಯೆ ಪವಿತ್ರಾ ಪುರುಷರಕಟ್ಟೆ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡುವ ವಿಧಾನಗಳ ಕುರಿತು ಮಾಹಿತಿ ನೀಡಿದರು. ಸದಸ್ಯೆ ಅಮೃತಾ ನಾಯಕ್ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿ ಸ್ವಚ್ಛ ಸಂಬಂಧಿ ಪ್ರಶ್ನೋತ್ತರ ನಡೆಸಿ. ಕೈ ತೊಳೆಯುವ 7 ವಿಧಾನಗಳ ಮಾಹಿತಿ ನೀಡಿದರು.
Related Articles
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಿಂದ ಆರಂಭವಾಗಿ ಪುರುಷರಕಟ್ಟೆಯ ಕಟ್ಟೆಯ ಬಳಿ ಸ್ವಚ್ಛತಾ ಜನಜಾಗೃತಿಗಾಗಿ ನಡೆಸಿದ ಜಾಥಾದಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಭಾರತ ಪೂರಕವಾದ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು. ಜಾಥಾದಲ್ಲಿ ಯುವತಿ ಮಂಡಲದ ಸದಸ್ಯರಾದ ಖುಷಿತಾ ನರಿಮೊಗರು, ಶ್ರಾವ್ಯಾ ಬಜಪ್ಪಾಳ, ತೃಪ್ತಿ ಹೆಗ್ಡೆ, ಉಜ್ವಲಾ ವಿ. ಸುವರ್ಣ, ತನ್ವಿ ವಿ., ಸ್ವಾತಿ ಹೆಗ್ಡೆ, ಅಚಿಂತ್ಯಾ, ವರ್ಷಿತಾ, ಅನುಷಾ ನರಿಮೊಗರು ಭಾಗವಹಿಸಿದ್ದರು.
Advertisement
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾ| ಯುವ ಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ತಾ.ಪಂ. ಸದಸ್ಯೆಯಶೋದಾ ಕೆ. ಗೌಡ, ಯುವತಿ ಮಂಡಲದ ಗೌರವ ಸಲಹೆಗಾರರಾದ ವಿದ್ಯಾ ನಾಯಕ್ ಉಪಸ್ಥಿತರಿದ್ದರು. ಆಡಳಿತ ಮಂಡಳಿ, ಶಾಲಾ ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಸಹಕರಿಸಿದರು.