Advertisement

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

06:35 PM Jul 04, 2024 | Team Udayavani |

ಬೆಂಗಳೂರು: ಕನ್ನಡ ಸೇರಿದಂತೆ ಚಿತ್ರರಂಗದಲ್ಲಿ ಕ್ಲಾಸ್‌ ಹಳೆಯ ಸಿನಿಮಗಳು ರೀ ರಿಲೀಸ್‌(Re-Release) ಆಗುವ ಟ್ರೆಂಡ್‌ ಶುರುವಾಗಿದೆ. ಕನ್ನಡದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ʼಜಾಕಿʼ, ದರ್ಶನ್‌ ಅವರ ʼರಾಬರ್ಟ್‌ʼ ಸಿನಿಮಾಗಳು ರಿಲೀಸ್‌ ಆಗಿತ್ತು. ಇನ್ನು ಕಾಲಿವುಡ್‌ , ಟಾಲಿವುಡ್‌ ಹಾಗೂ ಮಾಲಿವುಡ್‌ನಲ್ಲೂ ಸೂಪರ್‌ ಹಿಟ್‌ ಸಿನಿಮಾಗಳು ಮರು ಬಿಡುಗಡೆ ಆಗಿವೆ.

Advertisement

ಇದೀಗ ಕನ್ನಡ ಇಬ್ಬರು ಸೂಪರ್‌ ಸ್ಟಾರ್‌ ಗಳ ಚಿತ್ರಗಳು ಮರು ಬಿಡುಗಡೆ ಆಗಲಿದೆ. ಕಿಚ್ಚ ಸುದೀಪ್‌( Kiccha Sudeep) ಹಾಗೂ ಶಿವರಾಜ್‌ ಕುಮಾರ್‌ (Shiva Rajkumar) ಸಿನಿಕೆರಿಯರ್‌ಗೆ ಟರ್ನಿಂಗ್‌ ಪಾಯಿಂಟ್‌ ಎಂದೇ ಹೇಳಲಾಗುವ ಸಿನಿಮಾಗಳು ಹತ್ತಾರು ವರ್ಷದ ಬಳಿಕ ಮರುಬಿಡುಗಡೆ ಆಗಲಿದೆ.

ಜೋಗಿ ರೀ- ರಿಲೀಸ್..‌ ಜೋಗಿ ಪ್ರೇಮ್‌ ನಿರ್ದೇಶನದಲ್ಲಿ 2005, ಆಗಸ್ಟ್‌ 19ರಂದು ರಿಲೀಸ್‌ ಆದ ಶಿವರಾಜ್‌ ಕುಮಾರ್‌ ಅವರ ʼಜೋಗಿʼ(Jogi Movie) ಸಿನಿಮಾ ಇಂದಿಗೂ ಎವರ್‌ ಗ್ರೀನ್.‌ ಕಥೆ, ಹಾಡು, ಅಭಿನಯ ಎಲ್ಲ ವಿಭಾಗದಲ್ಲೂ ಈ ಸಿನಿಮಾ ಚಂದನವನದಲ್ಲಿ ಬ್ಲಾಕ್‌ ಬಸ್ಟರ್‌ ಆಗಿತ್ತು.

ಅರುಂಧತಿ ನಾಗ್ ಮತ್ತು ಶಿವರಾಜ್‌ಕುಮಾರ್ ಅಭಿನಯ ನೋಡಿ ಪ್ರೇಕ್ಷಕರು ಭಾವುಕರಾಗಿದ್ದರು. ಜನ್ನಿಫರ್ ಕೊತ್ವಾಲ್ ನಾಯಕಿಯಾಗಿದ್ದರು. ಗುರುಕಿರಣ್‌ ಅವರ ಮ್ಯೂಸಿಕ್‌ ಮೋಡಿ ಮಾಡಿತ್ತು.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..

Advertisement

ಈ ಸಿನಿಮಾ ರಿಲೀಸ್‌ ಆಗಿ 19 ವರ್ಷಗಳು ಕಳೆದಿದೆ. ಇದೀಗ ಸಿನಿಮಾ ಶಿವರಾಜ್‌ ಕುಮಾರ್‌ ಅವರ ಹುಟ್ಟುಹಬ್ಬದಂದು(ಜು.12 ರಂದು) ʼಜೋಗಿʼ ಮರು ಬಿಡುಗಡೆ ಆಗಲಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಕಿಚ್ಚನ ʼಹುಚ್ಚʼ ಮತ್ತೆ ಥಿಯೇಟರ್‌ಗೆ: ಓಂ ಪ್ರಕಾಶ್‌ ರಾವ್‌ ನಿರ್ದೇಶನದಲ್ಲಿ 2001, ಜುಲೈ 6 ರಂದು ʼಹುಚ್ಚʼ(Huchcha) ಸಿನಿಮಾ ರಿಲೀಸ್‌ ಆಗಿತ್ತು. ಈ ಸಿನಿಮಾ ರಿಲೀಸ್‌ 23 ವರ್ಷಗಳು ಕಳೆದಿದೆ.  ಇಷ್ಟು ವರ್ಷಗಳ ಇದೀಗ ಸಿನಿಮಾ ಹೊಸ ರೂಪದಲ್ಲಿ ಥಿಯೇಟರ್‌ ನಲ್ಲಿ ರಿಲೀಸ್‌ ಆಗಲಿದೆ.

ಕಿಚ್ಚ ಸುದೀಪ್‌ ಜೊತೆ ರೇಖಾ,ಅವನಾಶ್‌ ಮುಂತಾದವರು ನಟಿಸಿದ್ದರು.

ʼಹುಚ್ಚʼ ಶೀಘ್ರದಲ್ಲಿಯೇ ರೀ-ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. DTS 5.1 ಸೌಂಡ್ ಅಪ್‌ಗ್ರೇಡ್ ಮಾಡಲಾಗಿದೆ. ಹೊಸ ರೂಪದಲ್ಲಿ ರಿಲೀಸ್‌ ಆಗಲಿರುವ ʼಹುಚ್ಚʼ ಸಿನಿಮಾದಲ್ಲಿ ಸಿನಿಮಾದಲ್ಲಿ 5 ನಿಮಿಷದ ವಿಶೇಷ ವಿಡಿಯೋ ಕೂಡ ಸೇರಿರಲಿದೆ. ಇದು ಅತಿಥಿಗಳೊಂದಿಗೆ ಮಾತನಾಡಿರುವ ಕ್ಲಿಪಿಂಗ್‌ ನ್ನು ಒಳಗೊಳ್ಳಲಿದೆ.

ʼಹುಚ್ಚʼ 1999ರಲ್ಲಿ ಬಂದ ವಿಕ್ರಮ್‌ ಅವರ ʼಸೇತುʼ ಸಿನಿಮಾದ ರಿಮೇಕ್‌ ಆಗಿತ್ತು. ಇದಾದ ಬಳಿಕ ಓಂ ಪ್ರಕಾಶ್‌ 2005 ರಲ್ಲಿ ಬಂದ‌ ತಮಿಳು ʼರಾಮ್ʼ ಸಿನಿಮಾವನ್ನು ರಿಮೇಕ್‌ ಮಾಡಿ,  2018ರಲ್ಲಿ ʼಹುಚ್ಚ-2ʼ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ಕೃಷ್ಣ, ಮಾಳವಿಕಾ ಅವಿನಾಶ್, ಶ್ರಾವ್ಯ ಮತ್ತು ಪಿ ಸಾಯಿ ಕುಮಾರ್ ಮುಂತಾದವರು ನಟಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next