Advertisement

ನಟಿಯರು ಹೀರೋಯಿನ್‌ ಪಾತ್ರದಿಂದ ಹೊರಬರಲೇ ಬೇಕು…: ಸೋನು ಗೌಡ ನೇರ ಮಾತು

12:53 PM Mar 25, 2021 | Team Udayavani |

“ಸಿನಿಮಾರಂಗದಲ್ಲಿ ಯಾವುದೇ ಒಬ್ಬ ನಟಿ ಇಡೀ ಲೈಫ್ ಹೀರೋಯಿನ್‌ ಪಾತ್ರದಲ್ಲೇ ಇರಲು ಸಾಧ್ಯವಿಲ್ಲ. ಕಾಲ ಬದಲಾದಂತೆ, ನಟಿಯರು ಹೀರೋಯಿನ್‌ ಪಾತ್ರದಿಂದ ಹೊರಬಂದು ಬದಲಾಗಬೇಕು. ಇಲ್ಲ ಅಂದ್ರೆ ಸಿನಿಮಾ ರಂಗದಿಂದ ದೂರ ಉಳಿಯಬೇಕು. ನಾನು ಈ ಸತ್ಯವನ್ನು ಅರ್ಥ ಮಾಡಿಕೊಂಡಿದ್ದೇನೆ. ಹಾಗಾಗಿ, ನಾನು ಹೀರೋಯಿನ್‌ ಪಾತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಬ್ಬ ನಟಿಯಾಗಿ ನನಗೆ ಒಪ್ಪುವಂಥ ಎಲ್ಲ ಥರದ ಪಾತ್ರಗಳನ್ನು ಮಾಡುತ್ತಿದ್ದೇನೆ’ ಇದು ನಟಿ ಸೋನು ಗೌಡ ಮಾತು.

Advertisement

ಇತ್ತೀಚೆಗೆ ಸೋನು ಗೌಡ ಹೀರೋಯಿನ್‌ ಪಾತ್ರಗಳಿಗಿಂತ ಹೆಚ್ಚಾಗಿ ಬೇರೆ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಸೋನು ಅವರಿಂದ ಬರುವ ಉತ್ತರ ಇದು.

ಇದನ್ನೂ ಓದಿ:ದರ್ಶನ್‌-ಸುದೀಪ್‌ ಒಂದಾಗಬೇಕು: ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಅಭಿಯಾನ

“ಯಾವುದೇ ನಟ ಅಥವಾ ನಟಿ ತಾನು ಜೀವನ ಪೂರ್ತಿ ಹೀರೋಯಿನ್‌ ಅಥವಾ ಹೀರೋ ಆಗಿಯೇ ಸ್ಕ್ರೀನ್‌ ಮೇಲೆ ಇರಬೇಕು ಅಂದುಕೊಳ್ಳುವುದು ನನ್ನ ಪ್ರಕಾರ ಸರಿಯಲ್ಲ. ಕಲಾವಿದರಾದವರು ಎಲ್ಲ ಥರದ ಪಾತ್ರಗಳಿಗೂ, ಪ್ರಯೋಗಗಳಿಗೂ ತೆರೆದು ಕೊಳ್ಳಬೇಕು. ಹಾಗಾದಾಗ ಮಾತ್ರ ಅವರು ಹೆಚ್ಚು ಪ್ರಸ್ತುತರಾಗಿರುತ್ತಾರೆ’ ಅನ್ನೋದು ಸೋನು ಅಭಿಪ್ರಾಯ.

Advertisement

ಇನ್ನು ಸದ್ಯದಲ್ಲೇ ತೆರೆ ಕಾಣಲಿರುವ “ಯುವರತ್ನ’ ಚಿತ್ರದಲ್ಲಿ ಸೋನು ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡುವ ಸೋನು, “ಈ ಹಿಂದೆ “ಗುಲ್ಟಾ’ ಸಿನಿಮಾದಲ್ಲಿ ಮಾಡಿದ ಥರದ್ದೇ, ಅದಕ್ಕೆ ಹತ್ತಿರವಾಗಿರುವಂಥ ಮತ್ತೂಂದು ಪಾತ್ರ “ಯುವರತ್ನ’ ಸಿನಿಮಾದಲ್ಲಿ ಸಿಕ್ಕಿದೆ. ಇದಕ್ಕಿಂತ ಹೆಚ್ಚಾಗಿ ನನ್ನ ಪಾತ್ರದ ಬಗ್ಗೆ ಈಗಲೇ ಹೆಚ್ಚೇನೂ ಹೇಳುವಂತಿಲ್ಲವಾಗಿದ್ದರಿಂದ, ಅದರ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟುಕೊಡುವಂತಿಲ್ಲ. ಆದರೆ ಸಿನಿಮಾದಲ್ಲಿ ನನ್ನ ಪಾತ್ರವು ಬಲವಾದ ಹಿನ್ನೆಲೆಯಿದೆ. ನನ್ನ ಪಾತ್ರದ ಹೆಚ್ಚಿನ ಭಾಗ ವಿಶ್ವವಿದ್ಯಾನಿಲಯಗಳಲ್ಲಿ ಚಿತ್ರೀಕರಿಸಲಾಗಿದೆ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ನಾನು ಯಾರೊಬ್ಬರಿಗೂ ಜೋಡಿಯಾಗಿಲ್ಲ ಅದು ಮತ್ತೂಂದು ವಿಶೇಷ’ ಎನ್ನುತ್ತಾರೆ

Advertisement

Udayavani is now on Telegram. Click here to join our channel and stay updated with the latest news.

Next