Advertisement

ನಟನೆಯ ಅಪೇಕ್ಷೆ

07:35 AM Aug 11, 2017 | Team Udayavani |

ಹೊಸ ಹೊಸ ಸಿನಿಮಾಗಳು ಬಂದಂತೆ ಹೊಸ ನಟ-ನಟಿಯರ ಆಗಮನ ಕೂಡಾ ಆಗುತ್ತಿರುತ್ತದೆ. ಅದರಲ್ಲಿ ಕೆಲವರು ಭರವಸೆ ಮೂಡಿಸುತ್ತಾರೆ. ಈಗ ಅಪೇಕ್ಷಾ ಪುರೋಹಿತ್‌ ಕೂಡಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು, ತಮ್ಮ ಚೊಚ್ಚಲ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅಷ್ಟಕ್ಕೂ ಯಾರು ಅಪೇಕ್ಷಾ ಎಂದರೆ, ಉದಾಹರಣೆಯಾಗಿ “ಕಾಫಿ ತೋಟ’ವಿದೆ. ಟಿ.ಎನ್‌.ಸೀತಾರಾಂ ನಿರ್ದೇಶನದ “ಕಾಫಿತೋಟ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಅಪೇಕ್ಷಾಗೆ ಈಗ ಸಾಕಷ್ಟು ಅವಕಾಶಗಳು ಬರುತ್ತಿವೆ. 

Advertisement

ಪಾತ್ರವೊಂದಕ್ಕೆ ತುಂಬಾ ಫ್ರೆಶ್‌ ಫೇಸ್‌ಬೇಕು ಮತ್ತು ವಿಭಿನ್ನವಾಗಿರಬೇಕೆಂದುಕೊಂಡು ಟಿಎನ್‌ಎಸ್‌ ಆಲೋಚಿಸುತ್ತಿದ್ದಾಗ ಸಿಕ್ಕಿದ್ದು ಅಪೇಕ್ಷಾ. ಅದರಂತೆ ಅಪೇಕ್ಷಾಗೆ “ಕಾಫಿ ತೋಟ’ದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಸದ್ಯ ಅಪೇಕ್ಷಾ ಧಾರಾವಾಹಿಯಲ್ಲೂ ಬಿಝಿ ಇದ್ದಾರೆ. ಈಗಾಗಲೇ ಕೆಲವು “ಶ್ರೀಮತಿ ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಪೇಕ್ಷಾ ಮೂಲತಃ ಬಾಗಲಕೋಟೆಯ ಹುಡುಗಿ. ಬಿಬಿಎಂ ಮುಗಿಸಿ, ಫ್ಯಾಶನ್‌ ಡಿಸೈನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡಿರುವ ಅಪೇಕ್ಷಾ ಈಗ ಬಣ್ಣದ ಲೋಕದಲ್ಲಿ ಬಿಝಿಯಾಗುತ್ತಿದ್ದಾರೆ. ಅಪೇಕ್ಷಾಗೆ ಟಿ.ಎನ್‌.ಸೀತಾರಾಂ ಅವರ ಧಾರಾವಾಹಿಯಲ್ಲಿ ನಟಿಸುವ ಆಸೆ ಇತ್ತಂತೆ. ಆದರೆ ಧಾರಾವಾಹಿಯಲ್ಲಿ ಆ ಅವಕಾಶ ಸಿಗದಿದ್ದರೂ ಈಗ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದರಿಂದ ಸಹಜವಾಗಿಯೇ ಅಪೇಕ್ಷಾ ಖುಷಿಯಾಗಿದ್ದಾರೆ. 

ಸದ್ಯ ಅಪೇಕ್ಷಾಗೆ ಸಿನಿಮಾ ಹಾಗೂ ಧಾರಾವಾಹಿಗಳಿಂದ ಒಂದಷ್ಟು ಅವಕಾಶಗಳು ಬರುತ್ತಿವೆ. ಅಪೇಕ್ಷಾಗೆ ತಮಿಳು ಚಿತ್ರಗಳಲ್ಲೂ ನಟಿಸಬೇಕೆಂಬ ಆಸೆ ಇರುವುದರಿಂದ ಮೊದಲ ಹಂತವಾಗಿ ತಮಿಳು ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಮುಂದೆ ಕನ್ನಡದಲ್ಲೂ ಒಳ್ಳೆಯ ಪಾತ್ರ ಮಾಡುವ ಆಸೆ ಅಪೇಕ್ಷಾಗಿದೆ. “ಕಾಫಿ ತೋಟದಲ್ಲಿ ನಟಿಸಿದ್ದು ಒಳ್ಳೆಯ ಅನುಭವ. ಈ ಪಾತ್ರದ ಮೂಲಕ ಮತ್ತಷ್ಟು ಒಳ್ಳೆಯ ಪಾತ್ರಗಳು ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅಪೇಕ್ಷಾ.

Advertisement

Udayavani is now on Telegram. Click here to join our channel and stay updated with the latest news.

Next